ಯುವತಿಯರಿಂದ ಬಲವಂತವಾಗಿ ವೇಶ್ಯಾವಾಟಿಕೆಗಾಗಿ ತಳ್ಳುವವರಿಗೆ ಜೀವವಧಿ ಶಿಕ್ಷೆ

ಇಂಥವರಿಗೆ ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ನೀಡುವ ಕಾನೂನಿನ ವ್ಯವಸ್ಥೆ ಮಾಡುವುದು ಅವಶ್ಯಕ !

ಗ್ರೇಟರ್ ನೋಯ್ಡಾ (ಉತ್ತರಪ್ರದೇಶ) – ಓರ್ವ ಯುವತಿಯ ಮೇಲೆ ಬಲಾತ್ಕಾರ ಮಾಡಿ ಆಕೆಯನ್ನು ವೇಶ್ಯಾವಾಟಿಕೆ ತಳ್ಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಜಿಲ್ಲಾ ನ್ಯಾಯಾಲಯವು ೩ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಪ್ರತಿಯೊಬ್ಬರಿಗೂ ಒಂದು ಲಕ್ಷ ೮ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ದಂಡದ ಹಣ ಭರಿಸದಿದ್ದರೆ, ಪ್ರತಿಯೊಬ್ಬರು ೬ ತಿಂಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು. ಓರ್ವ ಮಹಿಳೆಯು ಸಂತ್ರಸ್ತೆ ಯುವತಿಗೆ ಈಶಾನ್ಯ ಭಾರತದಲ್ಲಿ ನೌಕರಿ ನೀಡುವ ಆಮಿಷ ತೋರಿಸಿ ದೆಹಲಿಗೆ ಕರೆದುಕೊಂಡು ಬಂದಿದ್ದಳು. ಅಲ್ಲಿ ಆಕೆ ಸಮೀರ್ ಅಲಿಯಾಸ್ ಮಕಸೂದ್ ಇವನ ಹರಿಯಾಣದಲ್ಲಿನ ಫರೀದಾಬಾದ್ ಇಲ್ಲಿಯ ಮನೆಯಲ್ಲಿ ಕಟ್ಟಿ ಹಾಕಿದ್ದರು. ಇದರಲ್ಲಿ ಓಂಕಾರ ಕ್ಷತ್ರಿಯ ಮತ್ತು ಅನುಪ ಗುಪ್ತ ಇವರು ಕೂಡ ಸಹಭಾಗಿದ್ದರು. ನಂತರ ಅವರು ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದರು ಮತ್ತು ಅವರು ಕೂಡ ಆಕೆಯ ಮೇಲೆ ಬಲತ್ಕಾರ ಮಾಡಿದರು. ಅವರ ವಶದಿಂದ ಓಡಿಹೋಗಿ ಆಕೆ ಪೊಲೀಸರಿಗೆ ದೂರು ನೀಡಿದ ನಂತರ ಈ ಆರೋಪಿಗಳನ್ನು ಬಂಧಿಸಲಾಗಿತ್ತು.