4 ತಿಂಗಳ ನಂತರ, ಕರೋನಾ ಸೋಂಕಿತರ ಸಂಖ್ಯೆ 700 ಕ್ಕಿಂತ ಹೆಚ್ಚಾಗಿದೆ !

ನವ ದೆಹಲಿ – ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾದ 754 ಹೊಸ ರೋಗಿಗಳು ಕಂಡು ಬಂದಿದ್ದಾರೆ. ಕಳೆದ 4 ತಿಂಗಳ ಬಳಿಕ 700 ಕ್ಕಿಂತ ಹೆಚ್ಚು ರೋಗಿಗಳು ಕಂಡುಬಂದಿದ್ದಾರೆ. ಸದ್ಯಕ್ಕೆ ದೇಶದಲ್ಲಿ 4 ಸಾವಿರದ 623 ಕೊರೊನಾ ರೋಗಿಗಳ ಮೇಲೆ ಚಿಕಿತ್ಸೆ ನಡೆಯುತ್ತಿದೆ. ಇಲ್ಲಿಯವರೆಗೆ ದೇಶದಲ್ಲಿ ಕೊರೊನಾದಿಂದ 5 ಲಕ್ಷ 30 ಸಾವಿರದ 790 ರೋಗಿಗಳು ಸಾವನ್ನಪ್ಪಿದ್ದಾರೆ.