ನೇಪಾಳದಲ್ಲಿ ಭಾರತದ ಟ್ಯಾಕ್ಸಿಗಳಿಗೆ ಪ್ರವೇಶ ನಿಷೇಧ !

ಕಾಟ್ಮಾಂಡು (ನೇಪಾಳ) – ಭಾರತೀಯ ಸಂಖ್ಯೆಯಿರುವ ಟ್ಯಾಕ್ಸಿಗಳಿಗೆ ನೇಪಾಳದಲ್ಲಿ ಪ್ರವೇಶ ನಿರಾಕರಿಸುವುದರಿಂದ ಟ್ಯಾಕ್ಸಿ ಚಾಲಕ ಮತ್ತು ಮಾಲಿಕರಿಂದ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ. ನೇಪಾಳದ ಮಹಾಕಾಳಿ ಮತ್ತು ಪವನದೂತ ಸಂಚಾರ ಸೇವೆ ಆಡಳಿತವು ದೆಹಲಿ ಅಥವಾ ಇತರ ಸ್ಥಳಗಳಿಂದ ನೇಪಾಳದ ಕಂಚನಪುರ ಜಿಲ್ಲಾ ಮುಖ್ಯ ಕಚೇರಿಯಾಗಿರುವ ಮಹೇಂದ್ರ ನಗರಕ್ಕೆ ಬರುವ ವಾಹನಗಳನ್ನು ತಡೆಯಲು ಒತ್ತಾಯಿಸಿದ್ದರು. ಇದರಿಂದ ಜಿಲ್ಲಾಧಿಕಾರಿಗಳು ಟ್ಯಾಕ್ಸಿಗಳಿಗೆ ಸಂಬಂಧಪಟ್ಟ ಈ ನಿರ್ಣಯ ತೆಗೆದುಕೊಂಡುದೆ. ಖಾಸಗಿ ವಾಹನ ಮತ್ತು ಮೈತ್ರಿ ಬಸ್ ಇದರ ಮೇಲೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.