ತಾಯಿಯ ಗರ್ಭದಲ್ಲಿರುವ ಮಗುವಿನ ಹೃದಯಕ್ಕೆ ಆಧುನಿಕ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ !

ದೆಹಲಿ – ಓರ್ವ ಮಹಿಳೆಯ ಗರ್ಭದಲ್ಲಿ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಮಾಡುವುದರಲ್ಲಿ ಏಮ್ಸ್ ಆಸ್ಪತ್ರೆಯ ಆಧುನಿಕ ವೈದ್ಯರು ಯಶಸ್ವಿಯಾಗಿದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತರಾಗಿದ್ದಾರೆ.

ಸಿಕ್ಕಿರುವ ಮಾಹಿತಿಯನುಸಾರ ಇಲ್ಲಿಯವರೆಗೆ ಈ ಮಹಿಳೆಯ ಮೂರು ಸಲ ಗರ್ಭಪಾತವಾಗಿದೆ. ಈ ಮಹಿಳೆ ಪುನಃ ಗರ್ಭಿಣಿಯಾಗಿದ್ದಳು; ಆದರೆ ಅವಳ ಗರ್ಭದಲ್ಲಿರುವ ಮಗುವಿನ ಹೃದಯದಲ್ಲಿ ಕೆಲವು ಸಮಸ್ಯೆಗಳಿವೆಯೆಂದು ವೈದ್ಯರಿಗೆ ಕಂಡು ಬಂದಿತು. ಇದರ ಮಾಹಿತಿಯನ್ನು ಅವರು ತಕ್ಷಣವೇ ಸಂಬಂಧಿಸಿದ ಮಹಿಳೆ ಮತ್ತು ಅವಳ ಪತಿಗೆ ತಿಳಿಸಿದರು. ಆಗ ಆ ಮಹಿಳೆಯು ಗರ್ಭವನ್ನು ತೆಗೆಸದೇ ಇರಲು ನಿರ್ಣಯಿಸಿದಳು ಮತ್ತು ಮುಂದಿನ ವೈದ್ಯಕೀಯ ಪ್ರಕ್ರಿಯೆ ಕೈಕೊಳ್ಳುವಂತೆ ಆಧುನಿಕ ವೈದ್ಯರಿಗೆ ಅನುಮತಿ ನೀಡಿದಳು. ಈ ಶಸ್ತ್ರಕ್ರಿಯೆ ‘ಡಿಜಿಟಲ್’ ಸ್ವರೂಪದ್ದಾಗಿದ್ದು, ಅದನ್ನು `ಬ್ಲಾಕ್ ಡಾಯಲೇಶನ’ ಎಂದು ಹೇಳಲಾಗುತ್ತದೆ. ಆಧುನಿಕ ವೈದ್ಯರು, ಇಂತಹ ಪ್ರಕ್ರಿಯೆ ಅತ್ಯಂತ ಜಟಿಲವಾಗಿರುತ್ತದೆ. ಇದರಲ್ಲಿ ಗರ್ಭದ ಜೀವಕ್ಕೂ ಅಪಾಯ ನಿರ್ಮಾಣವಾಗುವ ಸಾಧ್ಯತೆಯಿರುತ್ತದೆಯೆಂದು ಹೇಳಿದರು.

(ಸೌಜನ್ಯ : Good News Today)