ಉತ್ತರ ಪ್ರದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಯುವತಿಯು ಭಗವಾನ್ ಶ್ರೀ ಕೃಷ್ಣನೊಂದಿಗೆ ವಿವಾಹ

ಉರಯಿ (ಉತ್ತರಪ್ರದೇಶ) – ಇಲ್ಲಿನ ಕಾನೂನು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಒಬ್ಬ ಯುವತಿ ಭಗವಾನ್ ಶ್ರೀ ಕೃಷ್ಣನೊಂದಿಗೆ ವಿವಾಹವಾದಳು. ಬ್ರಾಹ್ಮಣರು ಮಾಡಿದ ಮಂತ್ರೋಚ್ಚಾರಗಳಲ್ಲಿ ಯುವತಿಯು ವಿಧಿಪೂರ್ವಕ ಏಳು ಸುತ್ತು ಹಾಕಿದಳು. ಈ ಸಂದರ್ಭದಲ್ಲಿ ಯುವತಿಯ ಕುಟುಂಬದ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಈ ವಿವಾಹದಲ್ಲಿ ಯುವತಿಯ ತಾಯಿ ತಂದೆ ಕನ್ಯಾದಾನ ಮಾಡಿದರು. ಯುವತಿಯ ತಂದೆ ತಾಯಿ ಭಗವಾನ್ ಶ್ರೀ ಕೃಷ್ಣ ಅಳಿಯನಾಗಿರುವ ಬಗ್ಗೆ ಬಹಳ ಸಂತೋಷಗೊಂಡಿದ್ದಾರೆ. ಅವರು, ಭಗವಾನ್ ಶ್ರೀ ಕೃಷ್ಣ ಅವರ ಸಂಬಂಧಿಯಾಗಿದ್ದು ಅವನನ್ನು ಅಳಿಯನ ರೂಪದಲ್ಲಿ ಪೂಜಿಸುವೆ ಎಂದು ಹೇಳಿದರು. ಉರಯಿಯಲ್ಲಿ ವಾಸಿಸುವ 30 ವರ್ಷದ ರಕ್ಷಾಳು ‘ಎಲ್.ಎಲ್.ಬಿ.’ಯ ಶಿಕ್ಷಣ ಪಡೆಯುತ್ತಿದ್ದಾರೆ. ರಕ್ಷಾ ಚಿಕ್ಕಂದಿನಿಂದಲೂ ಭಗವಾನ್ ಶ್ರೀ ಕೃಷ್ಣ ನ ಭಕ್ತಿ ಮಾಡುತ್ತಿದ್ದಳು‌. ರಕ್ಷಾ ಕೇವಲ ಭಗವಾನ್ ಶ್ರೀ ಕೃಷ್ಣನನ್ನು ಪ್ರೀತಿಸುತ್ತಿದ್ದಳು. ಅವಳ ಕುಟುಂಬದವರು ಅವಳ ವಿವಾಹಕ್ಕಾಗಿ ನೋಡಿದ್ದ ಹುಡುಗನನ್ನು ಅವಳು ಮೇಲಿಂದ ಮೇಲೆ ನಿರಾಕರಿಸುತ್ತಿದ್ದಳು.

(ಸೌಜನ್ಯ : Navbharat Times नवभारत टाइम्स)

ಒಂದು ದಿನ ರಕ್ಷಾ, ಅವಳ ಕನಸಿನಲ್ಲಿ ಭಗವಾನ್ ಶ್ರೀ ಕೃಷ್ಣ ಬಂದಿದ್ದನು. ಕನಸಿನಲ್ಲಿ ಅವಳು ಶ್ರೀ ಕೃಷ್ಣನನ್ನು ಪತಿಯೆಂದು ಸ್ವೀಕರಿಸಿ ಅವನಿಗೆ ಹಾರ ಹಾಕಿರುವುದಾಗಿ ಹೇಳಿದಳು. ಮಗಳ ಹಠಕ್ಕೆ ತಂದೆ ತಾಯಿಗೆ ಏನೂ ಮಾತನಾಡಲು ಸಾಧ್ಯವಾಗಲಿಲ್ಲ. ಅವರು ಮಗಳ ಸಂತೋಷಕ್ಕಾಗಿ ಒಪ್ಪಿಗೆ ಸೂಚಿಸಿದರು. ಮನೆಯಲ್ಲಿ ಒಪ್ಪಿಗೆ ಸಿಕ್ಕ ತಕ್ಷಣ ಮಾರ್ಚ 11, 2023 ರಂದು ರಕ್ಷಾ ಭಗವಾನ್ ಶ್ರೀ ಕೃಷ್ಣನೊಂದಿಗೆ ಹಿಂದೂ ಸಂಸ್ಕೃತಿ ಅನುಸಾರ ವಿವಾಹ ನಡೆಯಿತು. ರಕ್ಷಾಳ ಕೈ ಮೇಲೆ ಮೆಹಂದಿ ಬಳೆ ಕಾಣಿಸುತ್ತಿತ್ತು. ವಿವಾಹಕ್ಕೆ ವಿಶೇಷ ಮಂಟಪ ಅಲಂಕರಿಸಲಾಗಿತ್ತು. ಭಗವಾನ್ ಶ್ರೀ ಕೃಷ್ಣನ ರೂಪದಲ್ಲಿ ಪತಿ ದೊರೆತ ಬಗ್ಗೆ ರಕ್ಷಾ ಬಹಳ ಸಂತೋಷಗೊಂಡಿದ್ದಳು. ಮಥುರೆಯೊಂದಿಗೆ ಸಂಬಂಧವಾಗಿರುವುದರಿಂದ ರಕ್ಷಾಳ ಸಂಬಂಧಿಕರು ಬಹಳ ಸಂತೋಷ ಗೊಂಡಿದ್ದಾರೆ.