ನಮಗೆ ಬಾಬ್ರಿ ಅಲ್ಲ, ಶ್ರೀರಾಮ ಜನ್ಮ ಭೂಮಿಯ ಅವಶ್ಯಕತೆ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ

ಕರ್ನಾಟಕದಲ್ಲಿ ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರ ಹೇಳಿಕೆ !

ಕನಕಗಿರಿ – ನಮಗೆ ಈಗ ಬಾಬ್ರಿ ಮಸೀದಿಯ ಅವಶ್ಯಕತೆ ಇಲ್ಲ. ನಮಗೆ ಈಗ ರಾಮ ಜನ್ಮ ಭೂಮಿ ಬೇಕು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸಾರಮಾ ಇವರು ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದರು. ಕರ್ನಾಟಕ ರಾಜ್ಯದಲ್ಲಿ ಮುಂಬರುವ ವಿಧಾನ ಸಭೆಯ ಚುನಾವಣೆಯ ಭಾಜಪದ ಪರವಾಗಿ ಪ್ರಚಾರ ಆರಂಭಿಸಲಾಗಿದೆ. ಇದರ ಪ್ರಯುಕ್ತ ಆಯೋಜಿಸಿರುವ ಸಭೆಯಲ್ಲಿ ಮುಖ್ಯಮಂತ್ರಿ ಸರಮಾ ಮಾತನಾಡುತ್ತಿದ್ದರು.

ಲಂಡನ್ ದಲ್ಲಿನ ಕಾರ್ಯಕ್ರಮದಲ್ಲಿ ಭಾಜಪದ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇವರ ಬಗ್ಗೆ ಮುಖ್ಯಮಂತ್ರಿ ಸರಮಾ ಮಾತನಾಡುವಾಗ, ರಾಹುಲ್ ಗಾಂಧಿ ಇವರು ಲಂಡನದಲ್ಲಿ ಭಾರತಕ್ಕೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ; ಆದರೆ ನಾನು ಅವರಿಗೆ, ನರೇಂದ್ರ ಮೋದಿ ಇರುವವರಿಗೆ ಅವರು ಎಂದು ಪ್ರಧಾನಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಹೇಳಲು ಬಯಸುತ್ತೇನೆ. ರಾಹುಲ್ ಗಾಂಧಿ ‘ಭಾರತ ಜೋಡೋ ಯಾತ್ರೆ’ಗಾಗಿ ಕರ್ನಾಟಕದ ಪ್ರವಾಸ ಮಾಡಿದರು ಮತ್ತು ಲಂಡನೆಗೆ ಹೋಗಿ ‘ಭಾರತ ತೋಡೋ’ದ ಭಾಷೆ ಮಾತನಾಡುತ್ತಾರೆ ಎಂದು ಹೇಳಿದರು.

(ಸೌಜನ್ಯ : Zee News)