ಬಾಗೇಶ್ವರ ಧಾಮ ಪಂಡಿತ ಧೀರೆಂದ್ರಕೃಷ್ಣ ಶಾಸ್ತ್ರಿಯವರ ದರಬಾರಿನಲ್ಲಿ ಬಂದಿದ್ದ ಮಹಿಳೆಯ ಪತಿಯ ಮೃತ್ಯುವಿನ ನಿಗೂಢತೆ ಬಹಿರಂಗವಾಗಲಿದೆ !

  • 4 ವರ್ಷದ ಹಿಂದೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದನು; ಆದರೆ ಪತ್ನಿಗೆ ಮಾತ್ರ ಹತ್ಯೆಯ ಸಂದೇಹ !

  • ಕಾರಣ ಬಹಿರಂಗವಾಗುವವರೆಗೆ ಕೂದಲನ್ನು ತೊಳೆಯುವುದಿಲ್ಲವೆಂದು ಪ್ರತಿಜ್ಞೆ !

ಛತರಪುರ (ಮಧ್ಯಪ್ರದೇಶ) – ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ದರಬಾರದಲ್ಲಿ ಬಂದಿದ್ದ ಓರ್ವ ಮಹಿಳೆಯು ತನ್ನ ಪತಿ ಆತ್ಮಹತ್ಯೆ ಅಲ್ಲ ಹತ್ಯೆಯಾಗಿದೆ; ಆದರೆ ಇದನ್ನು ಯಾರೂ ನಂಬುತ್ತಿಲ್ಲ. ಎಲ್ಲಿಯವರೆಗೆ ಪತಿಯ ಸಾವಿನ ನಿಗೂಢತೆ ಬಹಿರಂಗವಾಗುವುದಿಲ್ಲವೋ, ಅಲ್ಲಿಯವರೆಗೆ ಕೂದಲು ತೊಳೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದಾಗಿ ಹೇಳಿದಳು. 4 ವರ್ಷದ ಹಿಂದೆ ಈ ಮಹಿಳೆಯ ಪತಿಯು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಮಹಿಳೆ ಪಂಡಿತಜೀಯವರ ದರಬಾರಕ್ಕೆ ಬಂದಿದ್ದಳು, ಆಗಲೇ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಅವಳು ಏನನ್ನೂ ಹೇಳದೇ ಇದ್ದರೂ ಅವಳು ಅವಳ ಪತಿಯ ಸಾವಿನ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಬಂದಿದ್ದಾಳೆಂದು ಹೇಳಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದಳು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ.

(ಸೌಜನ್ಯ – Santon Ki Vani)

1. ಈ ವಿಡಿಯೋದಲ್ಲಿ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು, `ಈ ದರಬಾರಿನಲ್ಲಿ ಉಪಸ್ಥಿತರಿರುವವರಲ್ಲಿ ಒಬ್ಬ ಮಹಿಳೆ ತನ್ನ ಪತಿಯ ಮರಣದ ವಿಷಯದ ನಿಗೂಢತೆ ತಿಳಿದುಕೊಳ್ಳಲು ಬಂದಿದ್ದಾಳೆ. ಅವಳು ತನ್ನೊಂದಿಗೆ ತನ್ನ ಪತಿಯ ಛಾಯಾಚಿತ್ರವನ್ನು ತಂದಿದ್ದಾಳೆ. ಆ ಮಹಿಳೆಯು ವ್ಯಾಸಪೀಠದ ಮೇಲೆ ಬರಬೇಕು’ ಎಂದು ಆವಾಹನೆ ಮಾಡಿದಾಗ ಒಬ್ಬ ಮಹಿಳೆ ಎದ್ದು ವ್ಯಾಸಪೀಠದ ಮೇಲೆ ಬಂದಳು.

2. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಅವಳಿಗೆ ಅವಳ ವಿಷಯದಲ್ಲಿ ಬರೆದಿರುವ ಮಾಹಿತಿಯ ಕಾಗದವನ್ನು ತೋರಿಸುತ್ತಾರೆ ಮತ್ತು ನಿಮ್ಮ ಪತಿಯ ಸಾವಿನ ನಿಗೂಢತೆ ತಿಳಿದುಕೊಳ್ಳಲು ಬಂದಿದ್ದಾರೆ. ಅವರ ಹತ್ಯೆಯಾಗಿದೆ; ಆದರೆ ಅವಳಿಗೆ ಆತ್ಮಹತ್ಯೆಯೆಂದು ತೋರಿಸಲಾಗಿದೆ. ಶತ್ರು ರಾಜಾರೋಷವಾಗಿ ತಿರುಗುತ್ತಿದ್ದಾನೆ, ನಿಮ್ಮ ಮೇಲೆ ಒತ್ತಡ ನಿರ್ಮಾಣ ಮಾಡಲಾಗಿದೆ. ನೀವು ಪ್ರತಿಜ್ಞೆ ಮಾಡಿದ್ದೀರಿ, ಎಲ್ಲಿಯವರೆಗೆ ಈ ವಿಷಯದ ನಿಗೂಢತೆ ಬಹಿರಂಗವಾಗುವುದಿಲ್ಲವೋ ಮತ್ತು ಅಪರಾಧ ತನಿಖೆ ವಿಭಾಗದಿಂದ ವಿಚಾರಣೆಯಾಗುವುದಿಲ್ಲವೋ ಅಲ್ಲಿಯವರೆಗೆ ಕೂದಲು ತೊಳೆಯುವುದಿಲ್ಲವೆಂದು ಹೇಳಿರುವುದಾಗಿ ತಿಳಿಸಿದರು.

3. ಇದಕ್ಕೆ ಮಹಿಳೆಯು ‘ಕಾಗದದ ಮೇಲೆ ಬರೆಯಲಾಗಿದೆಯೋ, ಅದೆಲ್ಲವೂ ಸತ್ಯವಾಗಿದೆ’, ಎಂದು ಹೇಳಿದಳು. ಅದಕ್ಕೆ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮಾತನಾಡುತ್ತಾ, ಆದಷ್ಟು ಬೇಗನೆ ಅಪರಾಧ ತನಿಖಾ ವಿಭಾಗದಿಂದ ತನಿಖೆ ನಡೆಯಲಿದೆ ಮತ್ತು ಯೋಗ್ಯವಾಗಿರುವುದು ಬೆಳಕಿಗೆ ಬರಲಿದೆ. ನೀವು ಕೂದಲು ತೊಳೆಯಬೇಡಿರಿ. ಶ್ರೀ ಹನುಮಾನನಿಗೆ ನೀವು ಆದಷ್ಟು ಬೇಗನೆ ಕೂದಲು ತೊಳೆದುಕೊಳ್ಳುತ್ತೀರಿ ಎಂದು ಅನಿಸುತ್ತಿದೆ ಎಂದು ಹೇಳಿದರು.