ಧ್ವನಿವರ್ಧಕ ಉಪಯೋಗಿಸಿದರೆ ಮಾತ್ರ, ಅಲ್ಲಾನಿಗೆ ನಮಾಜ ಕೇಳಿಸುತ್ತದೆಯೇ ? – ಭಾಜಪ ಮುಖಂಡ ಈಶ್ವರಪ್ಪ

ಬೆಂಗಳೂರು – ನಾನು ಹೋದಲ್ಲೆಲ್ಲ ನನಗೆ ಈ ಅಜಾನ ತಲೆನೋವಾಗಿದೆ. ಧ್ವನಿವರ್ಧಕ ಉಪಯೋಗಿಸಿದರೆ ಮಾತ್ರ ಅಲ್ಲಾನಿಗೆ ನಮಾಜ ಕೇಳಿಸುತ್ತದೆಯೇ ಎನ್ನುವ ಪ್ರಶ್ನೆಯನ್ನು ಭಾಜಪ ಮುಖಂಡ ಕೆ.ಎಸ್. ಈಶ್ವರಪ್ಪನವರು ಒಂದು ಸಭೆಯಲ್ಲಿ ಮಾತನಾಡುವಾಗ ಪ್ರಶ್ನಿಸಿದರು. ಈಶ್ವರಪ್ಪಾ ಒಂದು ಬಹಿರಂಗ ಸಭೆಯನ್ನು ಸಂಬೋಧಿಸುವಾಗ ಹತ್ತಿರದ ಮಸೀದಿಯಿಂದ ಧ್ವನಿವರ್ಧಕ ಮೂಲಕ ಧ್ವನಿ ಬಂದಿತು. ಆಗ ಅವರು ಈ ಮೇಲಿನಂತೆ ಪ್ರಶ್ನಿಸಿದರು.

(ಸೌಜನ್ಯ : TV5 Kannada)

ಅವರು ತಮ್ಮ ಮಾತನ್ನು ಮುಂದುವರಿಸಿ ಇಂದಲ್ಲ ನಾಳೆ ಅಜಾನ ಮುಗಿಯುವುದು; ಕಾರಣ ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ಣಯ ಬರಲಿದೆ. ಹಿಂದೂ ಸಮುದಾಯ ಮಂದಿರಗಳಲ್ಲಿ ಪ್ರಾರ್ಥನೆ ಮತ್ತು ಭಜನೆಗಳನ್ನು ಹೇಳುತ್ತಾರೆ. ನಾವು ಧಾರ್ಮಿಕರಾಗಿದ್ದೇವೆ; ಆದರೆ ನಾವು ಧ್ವನಿವರ್ಧಕ ಉಪಯೋಗಿಸುವುದಿಲ್ಲ ಎಂದು ಹೇಳಿದರು.