ನವ ದೆಹಲಿ : ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಹುಲ ಗಾಂಧಿ ಲಂಡನ್ನಿನಲ್ಲಿ ಭಾರತದ ಸಂದರ್ಭದಲ್ಲಿ ನೀಡಿರುವ ಹೇಳಿಕೆಯಿಂದಾಗಿ ಗೊಂದಲ ನಿರ್ಮಾಣವಾಯಿತು. ಇದರಿಂದಾಗಿ ಮಧ್ಯಾಹ್ನ 2 ಗಂಟೆಯ ವರೆಗೆ ಸದನದ ಕಲಾಪಗಳನ್ನು ಸ್ಥಗಿತಗೊಳಿಸಬೇಕಾಯಿತು. ಅನಂತರ ಆರಂಭವಾದ ಕಾರ್ಯಕಲಾಪದಲ್ಲೂ ಗಲಾಟೆ ಮುಂದುವರಿದಿತ್ತು.
ರಾಹುಲ ಗಾಂಧಿಯ ಹೇಳಿಕೆಗೆ ಬಿಜೆಪಿಯು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಮತ್ತು ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡಿತು. ಕೇಂದ್ರೀಯ ಸಚಿವರಾದ ಪಿಯೂಷ್ ಗೋಯಲರವರು, ‘ರಾಹುಲ ಗಾಂಧಿ ಸಂಸತ್ತಿಗೆ ಬಂದು ಕ್ಷಮೆ ಕೇಳಬೇಕು’ ಎಂದು ಹೇಳಿದರು.
Rahul Gandhi should apologise: Government slams London remarks
https://t.co/rBRfFXTEe0#RahulGandhi #government #london
— Oneindia News (@Oneindia) March 13, 2023
ರಾಹುಲ ಗಾಂಧಿ ಹೇಳಿದ್ದೇನು ?
ರಾಹುಲ ಗಾಂಧಿ ಕೇಂಬ್ರಿಜ ವಿಶ್ವವಿದ್ಯಾಲಯದಲ್ಲಿ, ಭಾರತದ ಸಂಸತ್ತಿನಲ್ಲಿ ಮೈಕ್‌ಗಳನ್ನು ಬಂದ್ ಮಾಡಲಾಗುತ್ತಿದೆ. ವಿರೋಧಿಗಳ ಧ್ವನಿ ಎತ್ತುವಂತಿಲ್ಲ. ಪ್ರತಿಪಕ್ಷದ ಯಾವುದೇ ನಾಯಕ ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಿ ಮಾತನಾಡಬಹುದು; ಆದರೆ ಸಂಸತ್ ಭವನದಲ್ಲಿ ಮಾತನಾಡುವಂತಿಲ್ಲ. ಭಾರತದಲ್ಲಿನ ಪ್ರಜಾಪ್ರಭುತ್ವದ ಮೇಲೆ ಆಕ್ರಮಣವಾಗುತ್ತಿದೆ. (ವಿದೇಶಕ್ಕೆ ಹೋಗಿ ಆಗಾಗ ಭಾರತವನ್ನು ಅವಮಾನಿಸುವ ರಾಹುಲ್ ಗಾಂಧಿಯ ಮೇಲೆ ದೂರು ದಾಖಲಿಸಿ ಅವರನ್ನು ಏಕೆ ಜೈಲಿಗೆ ಅಟ್ಟುತ್ತಿಲ್ಲ ? – ಸಂಪಾದಕರು)
ಸಂಪಾದಕರ ನಿಲುವು* ಸಂಸತ್ತಿನ ಕೆಲಸಗಳು ಒಂದು ದಿನವಾದರೂ ಗೊಂದಲವಿಲ್ಲದೆ ನಡೆದಿದೆಯೇ ? ಇದಕ್ಕೆ ಕಾರಣರಾದವರನ್ನು ಶಾಲೆಯ ತರಗತಿಯಿಂದ ಹೊರ ಹಾಕುವಂತೆಯೇ ಏಕೆ ಹೊರಗೆ ಹಾಕುತ್ತಿಲ್ಲ? * ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸಲಾಗುತ್ತದೆ, ಆದರೆ ಸಂಸದರಿಗೆ ಏಕೆ ಕಲಿಸಲಾಗುವುದಿಲ್ಲ? ಸಾರ್ವಜನಿಕರ ತೆರಿಗೆಯಿಂದ ಬದುಕುತ್ತಿರುವ ಇಂತಹ ಲಜ್ಜೆಗೆಟ್ಟ ಜನಪ್ರತಿನಿಧಿಗಳು ಎಂದಾದರೂ ಜನರ ಆದರ್ಶವಾಗಲು ಸಾಧ್ಯವೇ ? |