ತೆಲಂಗಾಣ ಆಡಳಿತ ಪಕ್ಷದ ನಾಯಕಿ ಕೆ. ಕವಿತಾರವರ ತನಿಖೆ !

ಕೆ. ಕವಿತಾ

ಭಾಗ್ಯನಗರ – ತೆಲಂಗಾಣದ ಆಡಳಿತ ಪಕ್ಷವಾದ ಭಾರತ ರಾಷ್ಟ್ರ ಸಮಿತಿ ನಾಯಕಿ ಹಾಗೂ ಮುಖ್ಯಮಂತ್ರಿ ಪುತ್ರಿ ಕೆ. ಕವಿತಾ ಅವರನ್ನು ಮಾರ್ಚ್ 11 ರಂದು ದೆಹಲಿಯ ಜಾರಿ ನಿರ್ದೇಶನಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಅವರಿಗೆ ವಿಚಾರಣೆಗಾಗಿ ಸಮನ್ಸ್ ನೀಡಲಾಗಿತ್ತು. ದೆಹಲಿಯ ಅಬಕಾರಿ ನೀತಿ ಅಂದರೆ ಮದ್ಯ ಹಗರಣ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮದ್ಯ ಹಗರಣದ ಪ್ರಕರಣದಲ್ಲಿ ಇತ್ತೀಚೆಗೆ ಭಾಗ್ಯನಗರದ ಅರುಣ ಪಿಳ್ಳೈ ಇವರನ್ನು ಬಂಧಿಸಲಾಗಿತ್ತು. ಪಿಳ್ಳೈ ಅವರು ಕವಿತಾ ಅವರ ನಿಕಟವರ್ತಿ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಲಾಗಿತ್ತು. ಆದಾಯವನ್ನುಗಳಿಸಲು ಈ ತೆರಿಗೆಯನ್ನು ಕಡಿಮೆ ಮಾಡಲಾಗಿದೆ ಎಂದು ಆಪ್ ಸರಕಾರ ಹೇಳಿತು; ಆದರೆ ಇದರಿಂದ ನೇರವಾಗಿ ಮದ್ಯದ ಉದ್ಯಮಿಗಳಿಗೆ ಲಾಭವಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಹಗರಣದ ನಡೆದಿದೆ ಎಂದು ಆಪ್ ಸರಕಾರದ ಮೇಲೆ ಆರೋಪಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಆಪ್ ನ ಮಾಜಿ ಮುಖ್ಯಮಂತ್ರಿ ಮನೀಷ ಸಿಸೋದಿಯಾ ಅವರನ್ನು ಬಂಧಿಸಲಾಗಿದೆ.