ಜಿಹಾದಿ ಎಸ್.ಡಿ.ಪಿ.ಐ.ಯನ್ನು ನಿಷೇಧಿಸಲು ಆಗ್ರಹಿಸುವ ‘#Ban_Communal_SDPI’ ‘ಟ್ರೆಂಡ್‌’ ಗೆ ಟ್ವಿಟರ್ ನಲ್ಲಿ ಮೊದಲ ಸ್ಥಾನ

(ಟ್ರೆಂಡ್ ಎಂದರೆ ಟ್ವಿಟರ್‍‌.ನಲ್ಲಿ ಒಂದೇ ವಿಷಯದ ಕುರಿತು ನಡೆದ ಚರ್ಚೆ)

ಹಿಂದೂ ರಾಷ್ಟ್ರ ಸ್ಥಾಪನೆಯನ್ನು ವಿರೋಧಿಸಿದ ಎಸ್.ಡಿ.ಪಿ.ಐ.ಗೆ ಧರ್ಮಪ್ರೇಮಿ ಹಿಂದೂಗಳಿಂದ ತಕ್ಕ ಪ್ರತ್ಯುತ್ತರ !

ಬೆಂಗಳೂರು – ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ 12 ಮಾರ್ಚ 2023 ರಂದು ಮಂಗಳೂರಿನ ಕದ್ರಿ ಮೈದಾನದಲ್ಲಿ ಸಂಜೆ 5 ಗಂಟೆಗೆ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ. ಇದನ್ನು ರದ್ದುಪಡಿಸಬೇಕೆಂದು ಜಿಹಾದಿ ಭಯೋತ್ಪಾದಕ ಸಂಘಟನೆ ಪಿಎಫ್‌ಐನ ರಾಜಕೀಯ ಶಾಖೆಯಾದ ಎಸ್‌ಡಿಪಿಐ ವಿರೋಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ 10 ರಂದು ಸಾಯಂಕಾಲ 7 ಗಂಟೆಗೆ ಎಸ್.ಡಿ.ಪಿ.ಐ. ನಿಂದ #AntiNationalHinduRashtra ಮತ್ತು #StopHateGathering ಟ್ರೆಂಡ್‌ ನಡೆಸಲಾಯಿತು. ಇದಕ್ಕೆ ಪ್ರತ್ಯುತ್ತರವೆಂದು ಧರ್ಮಪ್ರೇಮಿ ಹಿಂದೂಗಳು ‘#Ban_Communal_SDPI ಎಂಬ ಹೆಸರಿನ ಟ್ರೆಂಡ್ ಅನ್ನು ನಡೆಸಿದರು. ಈ ‘ಟ್ರೆಂಡ್’ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನವನ್ನು ಗಳಿಸಿತು.

ಈ ಹಿಂದೂ ರಾಷ್ಟ್ರ-ಜಾಗೃತಿ ಸಭೆಯು Youtube.com/HJSKarnataka ಈ ಚಾನೆಲ್ ನ ಮೂಲಕ ರವಿವಾರ ಸಂಜೆ 5 ಗಂಟೆಗೆ ನೇರಪ್ರಸಾರವಾಗಲಿದೆ.