‘ಉಡುಪಿಯಲ್ಲಿನ ಶ್ರೀ ಕೃಷ್ಣ ಮಠಕ್ಕೆ ಮುಸಲ್ಮಾನ ಶಾಸಕರು ಭೂಮಿ ನೀಡಿದ್ದರು !’ (ಅಂತೆ)

ಕಾಂಗ್ರೆಸ್ಸಿನ ಮುಖಂಡ ಮಿಥುನ ರೈ

ಉಡುಪಿ – ಕಾಂಗ್ರೆಸ್ಸಿನ ಮುಖಂಡ ಮಿಥುನ ರೈ ಇವರು ರಾಜ್ಯದಲ್ಲಿನ ಪುತ್ತಿಗೆ ಗ್ರಾಮದಲ್ಲಿನ ನೂರಾನೀ ಮಸೀದಿಯ ಒಂದು ಭವನದ ಉದ್ಘಾಟನೆ ಮಾಡುವಾಗ, ‘ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಓರ್ವ ಮುಸಲ್ಮಾನ ಶಾಸಕನು ಭೂಮಿ ನೀಡಿದ್ದನು’, ಎಂದು ಹೇಳಿಕೆ ನೀಡಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡ ನಂತರ ಭಾಜಪದ ಸಂಸದ ರಘುಪತಿ ಭಟ್ ಹಾಗೂ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿ ಇವರು ಪ್ರತ್ಯುತ್ತರ ನೀಡುವಾಗ ರೈ ಇವರ ಹೇಳಿಕೆಯನ್ನು ಖಂಡಿಸಿದರು. ಮಿಥುನ ರೈ ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾಜಪಾದ ಪ್ರದೇಶಾಧ್ಯಕ್ಷ ನಳಿನಕುಮಾರ ಕಟೀಲ ಇವರಿಂದ ಸೋತಿದ್ದರು.

ಶ್ರೀ ಕೃಷ್ಣ ಮಠಕ್ಕೆ ರಾಮ ಭೋಜ ಎಂಬ ರಾಜನು ಭೂಮಿ ನೀಡಿದ್ದನು ಹೊರತು ಮುಸಲ್ಮಾನನಲ್ಲ ! – ಪೇಜಾವರ ಸ್ವಾಮಿಗಳು

ಪೇಜಾವರ ಸ್ವಾಮಿಗಳು

ಈ ಕುರಿತು ಪೆಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಶ್ರೀ ಕೃಷ್ಣ ಮಠಕ್ಕೆ ರಾಮ ಭೋಜ ರಾಜನು ಭೂಮಿ ನೀಡಿದ್ದನು. ಯಾವುದೇ ಮುಸಲ್ಮಾನ ಶಾಸಕನು ಮಠಕ್ಕೆ ಭೂಮಿ ನೀಡಿಲ್ಲ. ಮಿಥುನ ರೈ ಇವರು ತಪ್ಪಾಗಿ ಅರ್ಥೈಸುತ್ತಿದ್ದಾರೆ ಹಾಗೂ ಆಧಾರ ಇಲ್ಲದ, ಅಸತ್ಯ ಹೇಳಿಕೆ ನೀಡುವುದು ಅಯೋಗ್ಯವಾಗಿದೆ ಎಂದು ಹೇಳಿದರು.

ಶ್ರೀ ಕೃಷ್ಣ ಮಠಕ್ಕೆ ಹಿಂದೂ ರಾಜನು ಭೂಮಿ ನೀಡಿದ್ದನು ! – ಭಾಜಪದ ಸಂಸದ ರಘುಪತಿ ಭಟ್

ಭಾಜಪದ ಸಂಸದ ರಘುಪತಿ ಭಟ್

ಮುಸಲ್ಮಾನ ಶಾಸಕನು ಶ್ರೀ ಕೃಷ್ಣ ಮಠಕ್ಕೆ ಅಥವಾ ಅನಂತೇಶ್ವರ ದೇವಸ್ಥಾನಕ್ಕೆ ಯಾವುದೇ ಜಾಗ ನೀಡಲಿಲ್ಲ. ಅನಂತೇಶ್ವರ ದೇವಸ್ಥಾನಕ್ಕೆ ರಾಮ ಭೋಜ ಈ ರಾಜನು ಜಾಗ ನೀಡಿರುವ ಉಲ್ಲೇಖವಿದೆ. ಇದೇ ಭೂಮಿಯನ್ನು ಶ್ರೀ ಕೃಷ್ಣ ಮಠಕ್ಕಾಗಿ ಉಪಯೋಗಿಸಲಾಗಿದೆ. ಅನಂತೇಶ್ವರ ದೇವಸ್ಥಾನದ ನಂತರ ಶ್ರೀ ಕೃಷ್ಣ ಮಠದ ನಿರ್ಮಾಣವಾಯಿತು. ಪ್ರಸ್ತುತ ಜಾಮಿಯಾ ಮಸೀದಿ ಇದು ಕೂಡ ಜಂಗಮರ ಮಠದ ಜಾಗದಲ್ಲಿದೆ, ಎಂದು ಹೇಳುತ್ತಾರೆ, ಎಂದು ಭಾಜಪದ ಸಾಂಸದ ರಘುಪತಿ ಭಟ್ ಇವರು ಮಿಥುನ ರೈ ಇವರಿಗೆ ಪ್ರತ್ಯುತ್ತರ ನೀಡಿದರು.

‘ಧಾರ್ಮಿಕ ಸೌಹಾರ್ದತೆಯ ಉದ್ದೇಶದಿಂದ ಈ ಹೇಳಿಕೆ ನೀಡಿತ್ತು !; (ಅಂತೆ) – ಮಿಥುನ ರೈ

ಧಾರ್ಮಿಕ ಸೌಹಾರ್ದತೆಗಾಗಿ ಕಾಶಿ ಮತ್ತು ಮಥೂರಾ ಇಲ್ಲಿಯ ಹಿಂದೂ ಭೂಮಿಯಲ್ಲಿ ದೇವಸ್ಥಾನಗಳನ್ನು ಬಗ್ನಗೊಳಿಸಿ ಕಟ್ಟಿರುವ ಮಸೀದಿಗಳನ್ನು ಈಗ ತೆರವುಗೊಳಿಸಿ ಆ ಭೂಮಿ ಹಿಂದುಗಳಿಗೆ ನೀಡಲು ಮುಸಲ್ಮಾನರು ಏಕೆ ಸಿದ್ದರಿಲ್ಲ, ಇದನ್ನು ಮಿಥುನ ರೈ ಇವರು ಹೇಳುವವರೇ ? ಯಾವ ವಿಷಯ ಈ ದೇಶದಲ್ಲಿ ಮುಸಲ್ಮಾನ ಆಕ್ರಮಣರಿಂದ ನಡೆದೇ ಇಲ್ಲ ಅಂತಹ ನಡೆಯದೇ ಇರುವ ವಿಷಯದ ಬಗ್ಗೆ ಸುಳ್ಳು ಹೇಳಿ ಧಾರ್ಮಿಕ ಸೌಹಾರ್ದತೆ ಎಂದಿಗೂ ನಿರ್ಮಾಣವಾಗುವುದಿಲ್ಲ !

ಮಿಥುನ ರೈ ಇವರ ಬಗ್ಗೆ ಟೀಕೆಗಳಾಗುತ್ತಿರುವಾಗ, ನಾನು 2012 ರಲ್ಲಿ ಪ್ರಕಾಶಿತಗೊಂಡಿರುವ ಒಂದು ದೈನಿಕದಲ್ಲಿನ ಲೇಖನದ ಆಧಾರದಲ್ಲಿ ಈ ಹೇಳಿಕೆ ನೀಡಿದ್ದೇನೆ. (ದೈನಿಕದಲ್ಲಿ ಪ್ರಸಿದ್ಧಗೊಂಡಿರುವುದು, ಎಲ್ಲವೂ ಸತ್ಯ ಇರುತ್ತದೆ ಅದನ್ನು ಯಾವ ಆಧಾರದಲ್ಲಿ ನಿಶ್ಚಯಿಸುವುದು ? ಒಂದು ದೈನಿಕದಿಂದ ಪತ್ರಿಕೋದ್ಯಮದಲ್ಲಿ ಶೋಧ ಕಾರ್ಯ ಮಾಡುತ್ತಾ ರಾಜೀವ ಗಾಂಧಿ ಇವರ ಬೋಫೋರ್ಸ್ ಹಗರಣದ ಮೇಲೆ ಆರೋಪ ಮಾಡಿದ್ದು, ಅದು ಕಾಂಗ್ರೆಸ್ ಏಕೆ ಒಪ್ಪುತ್ತಿಲ್ಲ ? – ಸಂಪಾದಕರು) ನನ್ನ ಉದ್ದೇಶ ಧಾರ್ಮಿಕ ಸೌಹಾರ್ದತೆ ನಿರ್ಮಾಣ ಮಾಡುವುದಾಗಿತ್ತು. ಈ ಪ್ರಕರಣದಲ್ಲಿ ನಾನು ಉಡುಪಿ ಮಠದ ಅರ್ಚಕರ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ಸಂಪಾದಕರ ನಿಲುವು

* ಸುಳ್ಳು ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇಂತಹ ನಾಯಕರನ್ನು ಜೈಲಿಗಟ್ಟಬೇಕು !