ನವ ದೆಹಲಿ – ರಾಷ್ಟ್ರೀಯ ಜನತಾದಳದ ಮುಖಂಡ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ, ಅವರ ಪತ್ನಿ ರಾಬಡಿದೇವಿ, ಮಾಜಿ ಶಾಸಕ ಅಬು ದೋಜಾನ, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ ಇವರ ದೆಹಲಿ, ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯದಲ್ಲಿನ ೧೫ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ. ಲಾಲು ಪ್ರಸಾದ ಯಾದವ ರೈಲ್ವೆ ಸಚಿವ ಆಗಿರುವಾಗ ಅವರ ಮೇಲೆ ಭೂಮಿಯ ಬದಲು ನೌಕರಿ ನೀಡುವ ಹಗರಣದ ಆರೋಪ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಗಳು ನಡೆದಿವೆ. ಈ ಹಿಂದೆ ಸಿಬಿಐ ರಾವಡಿ ದೇವಿ ಇವರನ್ನು ಇದೇ ಪ್ರಕರಣದಲ್ಲಿ ವಿಚಾರಣೆ ನಡೆಸಿತ್ತು. ದಾಳಿಯ ವಿಷಯವಾಗಿ ಪಕ್ಷದ ವಕ್ತಾರರು ಮೃತ್ಯುಂಜಯ ತಿವಾರಿ ಇವರು, ಭಾಜಪಕ್ಕೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಉಳಿದಿಲ್ಲ ಆದ್ದರಿಂದ ನಮಗೆ ಕಿರುಕುಳ ನೀಡುತ್ತಿದ್ದಾರೆ, ಜನರಿಗೆ ಇದು ಎಲ್ಲವೂ ತಿಳಿಯುತ್ತಿದೆ ಎಂದು ಹೇಳಿದರು.
#LandForJobs scam: ED raids over 15 locations in Delhi, Bihar against #LaluPrasadYadav’s relativeshttps://t.co/6OwCsCJEDa
— DNA (@dna) March 10, 2023