ಡಾರ್ಜಿಲಿಂಗನಲ್ಲಿ ದುಷ್ಕರ್ಮಿಗಳಿಂದ ಲೆನಿನ ಪುತ್ತಳಿ ಧ್ವಂಸ !

ಕಾರ್ಲ ಮಾರ್ಕ್ಸ್, ಸ್ಟೆಲಿನ್ ಮತ್ತು ಲೆನಿನ್

ಡಾರ್ಜಿಲಿಂಗ್ (ಬಂಗಾಲ) – ಇಲ್ಲಿ ರಷ್ಯಾದ ಕಮ್ಯುನಿಸ್ಟ್ ಮುಖಂಡ ವ್ಲಾದಿಮಿರ್ ಲೆನಿನ್ ಇವರ ಪುತ್ತಳಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ದೂರ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸಮಾಜಕಂಟಕರಿಂದ ಕೇವಲ ಲೆನಿನ್ ಇವರ ಪುತ್ಥಳಿ ಧ್ವಂಸ

ಕಳೆದ ೫೬ ವರ್ಷಗಳಿಂದ ಈ ಪುತ್ತಳಿ ನಕ್ಸಲಬಾಡಿ ಇಲ್ಲಿಯ ಬೆಂಗಾಜತದಲ್ಲಿ ಅಸ್ತಿತ್ವದಲ್ಲಿ ಇತ್ತು. ‘ಇಲ್ಲಿ ಲೆನಿನ್, ಕಾರ್ಲ್ ಮಾರ್ಕ್ಸ್ ಮತ್ತು ಸ್ಟಾಲಿನ್’ ಈ ಮೂವರ ಪುತ್ತಳಿಗಳು ಇದ್ದವು; ಆದರೆ ಸಮಾಜಕಂಟಕರಿಂದ ಕೇವಲ ಲೆನಿನ್ ಇವರ ಪುತ್ಥಳಿ ಧ್ವಂಸ ಮಾಡಿದ್ದಾರೆ. ‘ಈ ಘಟನೆಯನ್ನು ಆಳವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’, ಎಂದು ಮಾರ್ಕ್ಸ್ ವಾದಿ ಮತ್ತು ಲೆನಿನ್ ವಾದಿ ಕಮ್ಯುನಿಸ್ಟ್ ಪಕ್ಷದ ಸದಸ್ಯ ಪೂರ್ಣಾ ಸಿಂಹ ಇವರು ಒತ್ತಾಯಿಸಿದ್ದಾರೆ.