ದೆಹಲಿಯಲ್ಲಿ ಮುಸಲ್ಮಾನ ಯುವಕನು ಅಪ್ರಾಪ್ತ ಹಿಂದೂ ಹುಡುಗಿಯ ಮನೆಗೆ ನುಗ್ಗಿ ಗುಂಡಿನ ದಾಳಿ !

ಮುಸಲ್ಮಾನ ಯುವಕನ ಬಂಧನ, ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ !

ದೆಹಲಿ – ಇಲ್ಲಿಯ ನಂದನಗರಿ ಪ್ರದೇಶದಲ್ಲಿನ ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯ ಮನೆಗೆ ನುಗ್ಗಿ ಆಕೆಯ ಮೇಲೆ ಗುಂಡು ಹಾರಿಸಿದ ಕಾಸಿಮ (ವಯಸ್ಸು ೧೯ ವರ್ಷ)ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. (ಕೇವಲ ೧೯ ವರ್ಷದ ಮುಸಲ್ಮಾನ ಯುವಕನ ಬಳಿ ಪಿಸ್ತೂಲು ಎಲ್ಲಿಂದ ಬಂತು ? – ಸಂಪಾದಕರು) ಗುಂಡು ತಗಲಿ ಗಾಯಗೊಂಡಿರುವ ಹುಡುಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ಪ್ರದೇಶದಲ್ಲಿ ನಿರ್ಮಾಣವಾದ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತು ಮಾಡಿದ್ದಾರೆ.

೧೯ ವರ್ಷದ ಈ ಹುಡುಗಿಯ ಜೊತೆ ಕಾಸಿಮನ ಸ್ನೇಹ ಇತ್ತು. ಆತ ಹುಡುಗಿಯ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದ. ಆತ ಹುಡುಗಿಗೆ ಮತಾಂತರಗೊಳ್ಳುವುದಕ್ಕಾಗಿ ಒತ್ತಡ ಹೇರುತ್ತಿದ್ದನು. ‘ಹುಡುಗಿ ಇತರ ಬೇರೆ ಹುಡುಗರ ಜೊತೆ ಸ್ನೇಹ ಮಾಡಬಾರದು’, ಎಂದು ಕಾಸಿಮನ ಇಚ್ಛೆಯಾಗಿತ್ತು. ಘಟನೆಯ ದಿನ ಹುಡುಗಿ ಮನೆಯಲ್ಲಿ ಒಬ್ಬಳೇ ಇರುವಾಗ ಆಕೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು. ಆ ಸಮಯದಲ್ಲಿ ಕಾಸಿಮ ಮನೆಗೆ ನುಗ್ಗಿ ‘ಯಾರ ಜೊತೆಗೆ ಮಾತನಾಡುತ್ತಿರುವೆ ?’, ಎಂದು ಆಕೆಯನ್ನು ವಿಚಾರಿಸಿದನು. ಹುಡುಗಿಯು ಇದರ ಬಗ್ಗೆ ಏನು ಹೇಳದಿರುವಾಗ ಕಾಸಿಮನು ಆಕೆಯ ಕೈಯಿಂದ ಮೊಬೈಲ್ ಕಸಿದುಕೊಂಡು ಆಕೆ ಯಾರ ಜೊತೆ ಮಾತನಾಡುತ್ತಿದ್ದಾಳೆ ? ಎಂಬುದನ್ನು ಪರಿಶೀಲಿಸಿದನು. ಹುಡುಗಿ ವಿರೋಧಿಸಿದಾಗ ಕಾಸಿಮನು ಆಕೆಯ ಮೇಲೆ ಗುಂಡು ಹಾರಿಸಿದನು. ಗುಂಡು ಹುಡುಗಿಯ ಭುಜಕ್ಕೆ ತಾಗಿದೆ. ಅದರ ನಂತರ ಕಾಸಿಮ ಅಲ್ಲಿಂದ ಓಡಿ ಹೋದನು. ಕಾಸಿಮ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ .

(ಸೌಜನ್ಯ : IndiaTV)

ಸಂಪಾದಕೀಯ ನಿಲುವು

ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ !