ರತಲಾಮ (ಮಧ್ಯ ಪ್ರದೇಶ) ಇಲ್ಲಿನ ಹನುಮಂತನ ಪ್ರತಿಮೆ ಎದುರು ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆ !

  • ಭಾಜಪದಿಂದ ಸ್ಪರ್ಧೆಯ ಆಯೋಜನೆ !

  • ವೇದಿಕೆಯ ಮೇಲೆ ತುಂಡು ಬಟ್ಟೆಯಲ್ಲಿನ ಮಹಿಳಾ ಸ್ಪರ್ಧಿಯರ ಉಪಸ್ಥಿತಿ !

  • ಸ್ಪರ್ಧೆಯ ನಂತರ ಕಾಂಗ್ರೆಸ್ ನಿಂದ ಗಂಗಾಜಲ ಸಿಂಪಡಿಸಿ ವೇದಿಕೆಯ ಶುದ್ದಿ !

ರತಲಾಮ (ಮಧ್ಯಪ್ರದೇಶ) – ಇಲ್ಲಿಯ ಶ್ರೀ ಹನುಮಂತನ ಮೂರ್ತಿಯ ಮುಂದೆ ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಮಧ್ಯ ಪ್ರದೇಶದಲ್ಲಿನ ಆಡಳಿತಾರೂಢ ಭಾಜಪದ ಕಾರ್ಯಕರ್ತರು ಈ ಸ್ಪರ್ಧೆಯ ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಪ್ರಸಾರವಾಗಿರುವ ವಿಡಿಯೋದಲ್ಲಿ ಸ್ಪರ್ಧಿಸಿರುವ ಮಹಿಳೆಯರು ತುಂಡು ಬಟ್ಟೆಯಲ್ಲಿ ಕಾಣುತ್ತಿದ್ದು ಪಕ್ಕದಲ್ಲಿ ಶ್ರೀ ಹನುಮಂತನ ಮೂರ್ತಿ ಕಾಣುತ್ತಿದೆ. ಕಾಂಗ್ರೆಸ್ ನಿಂದ ಈ ಸ್ಪರ್ಧೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಶ್ರೀ ಹನುಮಂತನಿಗೆ ಅವಮಾನ ಮಾಡಿರುವುದೆಂದು ಆರೋಪಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ಸಿನ ಕಾರ್ಯಕರ್ತರು ಈ ಸ್ಪರ್ಧೆಯ ನಂತರ ಗಂಗಾಜಲ ಸಿಂಪಡಿಸಿ ಹಾಗೂ ಹನುಮಾನ ಚಾಲಿಸಾದ ಪಠಣೆ ನಡೆಸಿ ವೇದಿಕೆಯ ಶುದ್ದಿ ಕೂಡ ಮಾಡಿದರು.

ಭಾಜಪ ಕ್ಷಮೆ ಯಾಚಿಸಬೇಕು ! – ಕಾಂಗ್ರೆಸ್

ಕಾಂಗ್ರೆಸ್ಸಿನ ಮಾಧ್ಯಮ ಸಲಹೇಗಾರ ಪಿಯುಷ ಬಾಬೇಲೆ ಇವರು ‘ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್ ಇವರ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿರುವ ಈ ಕಾರ್ಯಕ್ರಮ ‘ಹಿಂದುಗಳ ಮತ್ತು ಭಗವಂತ ಹನುಮಂತನ ಅವಮಾನ ಮಾಡುವುದಾಗಿದೆ’, ಎಂದು ಹೇಳುತ್ತಾ ಭಾಜಪ ಈ ವಿಷಯವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ.

ಕಾಂಗ್ರೆಸ್ಸಿನವರಿಂದ ಮಹಿಳಾ ಸ್ಪರ್ಧಿಗಳ ಮೇಲೆ ವಕ್ರ ದೃಷ್ಟಿ ! – ಭಾಜಪ

ಕಾಂಗ್ರೆಸ್ಸಿನ ಆರೋಪಕ್ಕೆ ಪ್ರತ್ಯುತ್ತರ ನೀಡುವಾಗ ಭಾಜಪದ ವಕ್ತಾರ ಹಿತೇಶ್ ಬಾಜಪೆಯಿ ಇವರು, ‘ಕಾಂಗ್ರೆಸ್ಸಿಗರು ಮಹಿಳೆಯರ ಕುಸ್ತಿ, ಜಿಮ್ನಾಸ್ಟಿಕ್ ಅಥವಾ ಈಜು ಸ್ಪರ್ಧೆ ನೋಡಲು ಇಚ್ಚಿಸುವುದಿಲ್ಲ; ಕಾರಣ ಅದರಿಂದ ಅವರಲ್ಲಿನ ರಾಕ್ಷಸ ಎಚ್ಚೆತ್ತುಕೊಳ್ಳುತ್ತಾನೆ. ಈ ಸ್ಪರ್ಧೆಯಲ್ಲಿನ ಮಹಿಳೆಯರ ಮೇಲೆ ಕಾಂಗ್ರೆಸ್ಸಿನ ವಕ್ರದೃಷ್ಟಿಯಿತ್ತು, ಅವರಿಗೆ ನಾಚಿಕೆಯಾಗಲಿಲ್ಲವೇ ?’, ಎಂದು ಪ್ರತ್ಯಾರೋಪ ಮಾಡಿದರು.

ಸಂಪಾದಕೀಯ ನಿಲುವು

ದೇವತೆಗಳ ಅವಮಾನ ಆಗದಂತೆ ಕಾಳಜಿ ವಹಿಸುವುದು, ಪ್ರತಿಯೊಂದು ಹಿಂದೂಗಳ ಧರ್ಮ ಕರ್ತವ್ಯವಾಗಿದೆ ! ಈ ದೃಷ್ಟಿಯಿಂದ ಪ್ರತಿಯೊಬ್ಬರು ಜಾಗೃತವಾಗಿರಬೇಕು !