ವಿದೇಶದಲ್ಲಿ ಹೆಚ್ಚುತ್ತಿರುವ ಹಿಂದೂವಿರೋಧಿ ಅಲೆ !

ಎಡಪಂಥೀಯ ವಿಚಾರಶೈಲಿಯ ಸಂಸ್ಥೆಗಳು ಮತ್ತು ಪ್ರಸಾರಮಾಧ್ಯಮಗಳು ‘ಹಿಂದೂ ರಾಷ್ಟ್ರೀಯತ್ವ ಮತ್ತು ಹಿಂದುತ್ವವು ಭವಿಷ್ಯದ ಸಂಕಟವಾಗಿದೆ, ಎಂದು ಅಪಪ್ರಚಾರ ಮಾಡಿ ಹಿಂದೂಗಳನ್ನು ಅವಮಾನಿಸಿ ಸನಾತನ ಧರ್ಮದ ಅನುಯಾಯಿಗಳ ಬಗ್ಗೆ ದ್ವೇಷ ಹಬ್ಬಿಸುತ್ತಿವೆ. ಕಳೆದ ವರ್ಷ ವಾಷಿಂಗ್ಟನ್‌ನಿಂದ ಹಿಂದೂಗಳು ಹೊರಗೆ ಹೋದ ಹಿನ್ನೆಲೆಯಲ್ಲಿ ಭಾರತದ ವಿದೇಶ ಸಚಿವ ಡಾ. ಎಸ್. ಜಯಶಂಕರ ಇವರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ‘ಅಮೇರಿಕಾ, ಇಂಗ್ಲೆಂಡ್ ಮತ್ತು  ಕೆನಡಾದಲ್ಲಿ ಭಾರತವಿರೋಧಿ ಭಾವನೆ ಹೆಚ್ಚುತ್ತಾ ಇದೆಯೇ ?, ಎಂಬ ಪ್ರಶ್ನೆಗೆ ಉತ್ತರಿಸುವಾಗ ಡಾ. ಜಯಶಂಕರ ಹೇಳಿದರು, “ಭಾರತ ಎಷ್ಟು ವೇಗದಿಂದ ಮುಂದುವರಿಯುತ್ತಿದೆಯೋ, ಅಷ್ಟೇ ಪ್ರಮಾಣದಲ್ಲಿ ಯಾರು ಭಾರತವನ್ನು ತಮ್ಮ ಸ್ವಂತದ ಆಸ್ತಿ ಹಾಗೂ ಅದರ ಶಿಲ್ಪಿಗಳೆಂದು ತಿಳಿದಿದ್ದರೋ ಅವರಿಗೆ ಈಗ ದೇಶದಲ್ಲಿ ಮಹತ್ವವೇ ಉಳಿದಿಲ್ಲ. ನಿಜ ಹೇಳಬೇಕೆಂದರೆ ಹೀಗೆ ಮಾತನಾಡುವವರೇ ಹೊರಗೆ ಬಿದ್ದಿದ್ದಾರೆ. ಲೆಸ್ಟರ್, ಇಂಗ್ಲೆಂಡ್ ಮತ್ತು ನ್ಯೂ ಜರ್ಸಿಯಲ್ಲಿನ ಡೆಮೋಕ್ರೇಟ್ಸ್ ಹಮ್ಮಿಕೊಂಡಿರುವ ಹಿಂದೂವಿರೋಧಿ ಪ್ರಸ್ತಾಪ (ಠರಾವ್) ಇದು ಚರ್ಚೆಗೆ ನಿಲುಕದ ವಿಷಯವಾಗಿದೆ. ಈ ಘಟನೆಯಿಂದ ಧಾರ್ಮಿಕ ಹಾಗೂ ವಾಕ್‌ಸ್ವಾತಂತ್ರ್ಯದ ವಿಷಯದಲ್ಲಿ ಸವಾಲು ಹಾಗೂ ಭಯ ಉತ್ಪನ್ನವಾಗಿದೆ. ಇದರಿಂದ ಅಮೇರಿಕಾದ ಭದ್ರತೆಗೆ ಸಂಬಂಧಿಸಿದ ಗುಪ್ತಚರ ವಿಭಾಗ ಮತ್ತು ಅಧಿಕಾರರೂಢ ಪ್ರಗತಿಪರ ನಿಯೋಕಾನ್ ವಿಂಗ್ ಇವರ ಸರ್ವಾಧಿಕಾರವು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರ ನ್ಯಾಯ ಇಲಾಖೆಯ ಸ್ಕೂಲ್ ಬೋರ್ಡ್‌ನ ‘ಹಿಂಸಾಚಾರಕ್ಕೆ ಸಂಬಂಧಿಸಿದ ಮನವಿಪತ್ರವನ್ನು ಗಮನದಲ್ಲಿಡಬೇಕು.

೧. ಅಮೇರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಹಿಂದೂವಿರೋಧಿ ಅಭಿಯಾನಗಳು

ಅಮೇರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಹಿಂದೂವಿರೋಧಿ ಭಾಷಣಗಳು ಮತ್ತು ಹಿಂದೂದ್ವೇಷದಿಂದಾಗುವ ಅಪರಾಧಗಳ ಸರಮಾಲೆಯು ಮುಂದುವರಿಯುತ್ತಲೇ ಇದೆ. ನ್ಯೂಯಾರ್ಕ್‌ನ ರಿಚ್‌ಮಂಡ್ ಹಿಲ್ಸ್ ಪರಿಸರದ ಹಿಂದೂ ಮಂದಿರದಲ್ಲಿ ಅಪರಾಧಿಗಳು ಮ. ಗಾಂಧಿಯ ಪ್ರತಿಮೆಯನ್ನು ಧ್ವಂಸ ಮಾಡಿದರು. ಅದೇ ರೀತಿ ಟೆಕ್ಸಾಸ್‌ನಲ್ಲಿ ‘ಒಬ್ಬ ಮಹಿಳೆ ವರ್ಣದ್ವೇಷದಿಂದ ಮಾತನಾಡುತ್ತಾ ಭಾರತೀಯ ಮಹಿಳೆಯರಿಗೆ ಹೊಡೆಯುತ್ತಿರುವ ಚಿತ್ರಮುದ್ರಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಳಿಸಲಾಯಿತು. ಅನಂತರ ಇಂಗ್ಲೆಂಡ್‌ನ ಲೆಸ್ಟರ್‌ನಲ್ಲಿ ನಡೆದಿರುವ ಹಿಂದೂವಿರೋಧಿ ಗಲಭೆಯಲ್ಲಿ ಜಿಹಾದಿಗಳು ಹಿಂದೂಗಳ ಮನೆಗಳು ಮತ್ತು ಶ್ರದ್ಧಾಸ್ಥಾನಗಳನ್ನು ನಾಶಗೊಳಿಸಿದರು. ಅದೇ ರೀತಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಗುರಿಪಡಿಸಿ ಅವರ ಮೇಲೆ ಆಕ್ರಮಣ ನಡೆಸಲಾಯಿತು. ಇದರಿಂದ ಜಗತ್ತಿನಾದ್ಯಂತದ ಹಿಂದೂಗಳಿಗೆ ದೊಡ್ಡ ಆಘಾತವಾಗಿದೆ.

೨. ನ್ಯೂಜರ್ಸಿಯಲ್ಲಿ ‘ಆಝಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮ ಅಲ್ಪಸಂಖ್ಯಾತವಿರೋಧಿಯೆಂದು ಹೇಳಿ ಆಯೋಜಕರು ಕ್ಷಮಾಯಾಚನೆ ಮಾಡಬೇಕೆಂದು ಒತ್ತಡ ಹೇರಲಾಯಿತು

ನ್ಯೂಜರ್ಸಿಯ (ಅಮೇರಿಕಾ) ನಗರದ ಹೊರಗೆ ೪೦ ಸಾವಿರ ಜನವಸತಿ ಇರುವ ಟಿನಕ್ ಟೌನ್‌ಶಿಪ್ ಇದೆ. ಇಲ್ಲಿ ‘ಇಂಡಿಯನ್ ಬಿಸನೆಸ್ ಅಸೋಸಿಯೇಶನ್’ನ ಹೆಸರಿನಲ್ಲಿ ಟಿನೆಕ್‌ನಲ್ಲಿನ ಭಾರತೀಯ-ಅಮೇರಿಕನ್ ಸಮಾಜವು ‘ಆಝಾದೀ ಕಾ ಅಮೃತ ಮಹೋತ್ಸವ’, ಅಂದರೆ ಬ್ರಿಟಿಷರ ಹಿಡಿತದಿಂದ ಭಾರತವು ಸ್ವತಂತ್ರವಾದ ೭೫ ನೇ ವರ್ಷಪೂರ್ತಿಯ ನಿಮಿತ್ತದಲ್ಲಿ ಒಂದು ಸಂಚಲನವನ್ನು ಆಯೋಜಿಸಿತ್ತು. ಈ ಇದರಲ್ಲಿ ಇತರ ಚಿತ್ರರಥ, ಫಲಕ ಇತ್ಯಾದಿಗಳೊಂದಿಗೆ ‘ಬುಲ್ಡೋಝರ್’ ಸಹ ಇಡಲಾಗಿತ್ತು. ಅದರ ಹೊರತು ಆಯೋಜಕರಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಛಾಯಾಚಿತ್ರಗಳನ್ನು ಹಚ್ಚಲಾಗಿತ್ತು. ಈ ಸಂಚಲನದ ನಂತರ ಆಯೋಜಕರ ವಿರುದ್ಧ ತೀವ್ರ ಪ್ರತಿಕ್ರಿಯೆ ಎದ್ದಿತು. ‘ಇಂಡಿಯನ್-ಅಮೇರಿಕನ್ ಮುಸ್ಲಿಮ್ ಕೌನ್ಸಿಲ್ (ಐ.ಎ.ಎಮ್.ಸಿ.) ಈ ಭಾರತೀಯ ಮುಸಲ್ಮಾನರನ್ನು ಪ್ರತಿನಿಧಿಸುವ ಗುಂಪು ಈ ಸಂಚಲನವನ್ನು ಖಂಡಿಸುವುದರಲ್ಲಿ ಮುಂಚೂಣಿಯಲ್ಲಿತ್ತು. ‘ಸಂಚಲನದಿಂದ ನರೇಂದ್ರ ಮೋದಿ ಮತ್ತು ಯೋಗಿ ಇವರ ಅಲ್ಪಸಂಖ್ಯಾತ ವಿರೋಧಿ ಧೋರಣೆಗೆ ಮನ್ನಣೆ ನೀಡಲಾಯಿತು, ಎಂದು ಆರೋಪಿಸಿದವು. ಅನಂತರ ತಕ್ಷಣ ‘ಬ್ಲಾಕ್ ಲೈವ್ ಮ್ಯಾಟರ್’, ‘ಅಮೇರಿಕನ್ ಮುಸ್ಲಿಮ್ ಫಾರ್ ಡೆಮೋಕ್ರಸೀ’, ಎಡಪಂಥೀಯ ಸಂಘಟನೆ ಮತ್ತು ಜಿಹಾದಿ ಗುಂಪುಗಳು ಸಕ್ರಿಯವಾದವು. ಐ.ಎ.ಎಮ್.ಸಿ. ಸಂಘಟನೆಯು ಅಮೆರಿಕಾದ ನ್ಯಾಯಾಂಗ ಇಲಾಖೆ, ನ್ಯೂಜರ್ಸಿಯ ಅಟರ್ನಿ ಜನರಲ್, ಮತ್ತು ‘ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್’ (ಎಫ್.ಬಿ.ಐ.) ಇವರಲ್ಲಿ ‘ಸಂಚಲನ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು’, ವಿನಂತಿಸಿತು. ಇಷ್ಟು ಮಾತ್ರವಲ್ಲ, ಈ ಸಂಘಟನೆಗಳು ಇಲ್ಲಿನ ಎಡಿಸನ್ ಪೊಲೀಸ್ ಇಲಾಖೆಯಲ್ಲಿ ದೂರನ್ನು ದಾಖಲಿಸಿದವು. ಈ ಸಂಘಟನೆಗಳು ಸಂಚಲನದ ಪ್ರಮುಖ ಅತಿಥಿ ‘ಭಾಜಪದ ರಾಷ್ಟ್ರೀಯ ವಕ್ತಾರ ಸಂಬಿತ ಪಾತ್ರಾ ಇವರ ವೀಸಾ ರದ್ದುಪಡಿಸಬೇಕೆಂದು ಕೂಡ ವಿನಂತಿಸಿವೆ. ನಗರ ಪಾಲಿಕೆಯ ಅಧ್ಯಕ್ಷ ಅಲೆಕ್ಝಾಂಡರ್ ಸೊರಿಆನೊ ತಾವೆಸರ್ ಇವರ ನೇತೃತ್ವದಲ್ಲಿ ಟಿನೆಕ್‌ನಲ್ಲಿನ ಡೆಮೋಕ್ರೇಟ್ಸ್ ಪಕ್ಷದ ಸದಸ್ಯರು ಸಂಚಲನವನ್ನು ಆಯೋಜಿಸಿದ ಹಿಂದೂ ಸಂಘಟನೆಯನ್ನು ‘ವಿದೇಶಿದ್ವೇಷ ಹರಡಿಸುವ ಗುಂಪು’, ಎಂದು ಉಲ್ಲೇಖಿಸಿದರು. ಅಮೇರಿಕಾದ ಸಿನೆಟರ್ ಬಾಬ್ ಮೆನಿನ್‌ಡೇಝ್ ಮತ್ತು ಕೋರೀ ಬುಕರ್ ಸಹಿತ ಅನೇಕ ಪ್ರಮುಖ ಡೆಮೋಕ್ರೇಟ್ಸ್ ಐ.ಎ.ಎಮ್.ಸಿ. ಸಂಘಟನೆಯ ಪರ ವಹಿಸಿ ಮಾತನಾಡಿದರು.

೩. ಹಿಂದೂವಿರೋಧಿ ಗುಂಪುಗಳಿಂದ ಹಿಂದೂಗಳಲ್ಲಿ ದ್ವೇಷ ಮೂಡಿಸುವ ಪ್ರಯತ್ನ

ಟಿನೆಕ್‌ನಲ್ಲಿನ ಡೆಮೋಕ್ರೇಟ್ಸ್ ಇವರು ಸ್ಪಷ್ಟವಾಗಿ ಮಾಡಿದ ಹಿಂದೂವಿರೋಧಿ ಠರಾವ್, ‘ಇಂಡಿಯನ್-ಅಮೇರಿಕನ್ ಮುಸ್ಲಿಮ್ ಕೌನ್ಸಿಲ್’ ಮತ್ತು ಇತರ ಹಿಂದೂವಿರೋಧಿ ಗುಂಪು ಗಳಿಂದಾಗಿ ಭಾರತವನ್ನು ದೇವಭೂಮಿ ಹಾಗೂ ಮಾತೃಭೂಮಿಯೆಂದು ನಂಬುವ ಹಿಂದೂಗಳಲ್ಲಿ ಸಮಸ್ಯೆ ಉತ್ಪನ್ನವಾಗಿದೆ. ಎಡಪಂಥೀಯ ವಿಚಾರಶೈಲಿಯ ಸಂಸ್ಥೆಗಳು ಮತ್ತು ಪ್ರಸಾರ ಮಾಧ್ಯಮಗಳಿಂದ ಹಿಂದೂಗಳ ವಿಷಯದಲ್ಲಿ ನಕಾರಾತ್ಮಕ ಪ್ರತಿಷ್ಠೆ ಮೂಡಿದೆ. ಆದ್ದರಿಂದ ಅವರು ಯಾವುದನ್ನೂ ತಿಳಿದುಕೊಳ್ಳದೆ ಹಾಗೂ ಸಂದರ್ಭವನ್ನು ನೋಡದೆ ಹಿಂದೂ, ರಾಷ್ಟ್ರೀಯತ್ವ, ಹಿಂದುತ್ವ ಹಾಗೂ ಜಾತೀಯ ದಬ್ಬಾಳಿಕೆಯ ಭೂತಗಳನ್ನು ಕುಣಿಸುತ್ತಿದ್ದಾರೆ. ಹಿಂದೂಗಳನ್ನು ಅವಮಾನಿಸಿ ಜಗತ್ತಿನ ಪ್ರಾಚೀನ ಹಾಗೂ ಎಲ್ಲಕ್ಕಿಂತ ಉದಾರ ವಿಚಾರಶೈಲಿಯ ಹಿಂದೂ ಧರ್ಮದ ಅನುಯಾಯಿಗಳ ವಿಷಯದಲ್ಲಿ ದ್ವೇಷ ಹಬ್ಬಿಸಲು ಅವರು ಇದನ್ನೆಲ್ಲ ಮಾಡುತ್ತಿದ್ದಾರೆ.

೪. ಭಾರತದ ವಿಷಯದಲ್ಲಿ ಕಾಲ್ಪನಿಕ ವಿವರಣೆ ಮತ್ತು ವಾಸ್ತವ ಇದರಲ್ಲಿನ ಅಂತರ

ಪಾಶ್ಚಿಮಾತ್ಯರ ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆಯ ವಿಷಯದಲ್ಲಿರುವ ಧಾರಣೆ ಮತ್ತು ಪ್ರತ್ಯಕ್ಷ ವಾಸ್ತವಿಕತೆಯಲ್ಲಿ ಅಂತರವಿದೆ, ಎಂಬುದು ರಹಸ್ಯವಾಗಿ ಉಳಿದಿಲ್ಲ. ಇತ್ತೀಚೆಗಷ್ಟೆ ‘ಪ್ಯೂ ರಿಸರ್ಚ್ ಸೆಂಟರ್’ ‘ರಿಲಿಜನ್ಸ್ ಆಫ್ ಇಂಡಿಯಾ’ ಈ ವಿಷಯದಲ್ಲಿ ಮಾಡಿದ ಸಮೀಕ್ಷೆಯಿಂದ ಕಾಲ್ಪನಿಕ ವಿಷಯ ಹಾಗೂ ಪ್ರತ್ಯಕ್ಷ ವಾಸ್ತವಿಕತೆಯ ಅಂತರ ಅರಿವಾಗುತ್ತದೆ. ‘ಹಿಂದೂಗಳು ಮೂಲ ಭಾರತೀಯರಲ್ಲ’, ಎನ್ನುವ ಕುಸಂಸ್ಕಾರ ಪಾಶ್ಚಿಮಾತ್ಯರಲ್ಲಿ ದೃಢವಾಗಿದೆ. ಶೈಕ್ಷಣಿಕ ಹಾಗೂ ಪ್ರಸಿದ್ಧ ಮಂಡನೆಗಳಿಂದಲೂ ಅದು ಪ್ರಕಟೀಕರಣ ಆಗುತ್ತಾ ಇರುತ್ತದೆ.

೫. ಅಮೇರಿಕಾದ ಭಾರತೀಯ ಸಮಾಜದ ನೇತೃತ್ವ ವಹಿಸುವ ಅವಶ್ಯಕತೆ !

ಅಮೇರಿಕನ್ ಸಮಾಜದ ಭಾರತೀಯ ಸದಸ್ಯರು ಉಚ್ಚ ರಾಜಕೀಯ ಹುದ್ದೆಯಲ್ಲಿದ್ದರೂ ಹಿಂದೂಗಳ ಸಮಸ್ಯೆಗಳನ್ನು ನಿವಾರಿಸಲು ಮುಂದಾಳತ್ವ ವಹಿಸುವುದು ಅಥವಾ ನೇತೃತ್ವವನ್ನು ಸ್ವೀಕರಿಸುವುದು ಕಾಣಿಸುವುದಿಲ್ಲ. ಇತ್ತೀಚೆಗಷ್ಟೆ ಅಮೇರಿಕಾದ ಹಿಂದೂಗಳ ಮೇಲಾದ ಆಕ್ರಮಣದಿಂದ ಈ ಕೊರತೆಯ ಅರಿವಾಗಿದೆ. ಎಲ್ಲಕ್ಕಿಂತ ಕೆಟ್ಟ ವಿಷಯವೆಂದರೆ ಅನೇಕ ಹಿಂದೂಗಳು ಪ್ರಗತಿಪರ ಅಮೇರಿಕನ್ ಜನರ ವರ್ಣ ವಿಷಯದ ಹೇಳಿಕೆಗಳಲ್ಲಿ ಸಿಲುಕಿದ್ದಾರೆ. ಅವರಿಗೆ ಈ ಹಿಂದೂದ್ವೇಷ ಕಾಣಿಸುವುದಿಲ್ಲ ಅಥವಾ ಹಿಂದುತ್ವಕ್ಕೆ ಪ್ರೋತ್ಸಾಹ ನೀಡಲು ಭಯವಾಗಿ ಉದ್ದೇಶಪೂರ್ವಕ ಅದರತ್ತ ದುರ್ಲಕ್ಷಿಸುತ್ತಿದ್ದಾರೆ. ಉದಾಹರಣೆಗಾಗಿ ಟೆಕ್ಸಾಸ್‌ನಲ್ಲಿ ಹಿಂದೂದ್ವೇಷಕ್ಕೆ ಗುರಿಯಾದ ಒಂದು ಕುಟುಂಬದ ಸದಸ್ಯರು ‘ಈ ಘಟನೆಯನ್ನು ರಾಷ್ಟ್ರೀಯ ಸ್ತರದಲ್ಲಿ ಪ್ರಚಾರ ಮಾಡಲು ಉಪಯೋಗಿಸಬಾರದು’, ಎಂದು ಟ್ವೀಟ್ ಮಾಡಿದ್ದಾರೆ.

– ಅವಂತಸ ಕುಮಾರ (ಆಧಾರ : ಸಾಪ್ತಾಹಿಕ ‘ಆರ್ಗನೈಸರ್’, ೧೭.೧೦.೨೦೨೨)