“ಇಸ್ಲಾಮಿಕ್ ಸ್ಟೇಟ್” ನ ಇಬ್ಬರು ಭಯೋತ್ಪಾದಕರಿಗೆ ಜರ್ಮನ್ ನ್ಯಾಯಾಲಯದಿಂದ ಶಿಕ್ಷೆ!

ಕುರಾನ್ ಸುಟ್ಟ ಘಟನೆಯ ವಿರೋಧಿಸಿ ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು!

ಬರ್ಲಿನ್ – ಸ್ವೀಡನ್ ಸಂಸತ್ತಿನ ಮೇಲೆ ದಾಳಿ ನಡೆಸಿ, ಪೊಲೀಸರನ್ನು ಕೊಲ್ಲಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಜರ್ಮನ್ ನ್ಯಾಯಾಲಯವು ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಭಯೋತ್ಪಾದಕರಿಗೆ ಜೈಲು ಶಿಕ್ಷೆ ವಿಧಿಸಿದೆ. ಅವರ ಹೆಸರು ಇಬ್ರಾಹಿಂ (30 ವರ್ಷ) ಮತ್ತು ರಮಿನ್ (24 ವರ್ಷ)ಎಂದಾಗಿದೆ. ಇಬ್ಬರೂ ಪೂರ್ವ ಜರ್ಮನ್ ರಾಜ್ಯದ ತುರಿಂಗಿಯಾದ ಗೆರಾದ ನಿವಾಸಿಗಳು. ಕುರಾನ್ ಸುಟ್ಟಿದ್ದ ಘಟನೆಯನ್ನು ವಿರೋಧಿಸಿ ಅವರು ಈ ಕೃತ್ಯ ಎಸಗಿದ್ದರು. ನ್ಯಾಯಾಲಯವು ಇಬ್ರಾಹಿಂಗೆ 5 ವರ್ಷ 6 ತಿಂಗಳು ಮತ್ತು ರಮಿನ್‌ಗೆ 4 ವರ್ಷ 2 ತಿಂಗಳು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು. ಈ ಇಬ್ಬರೂ ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಜರ್ಮನ್ ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಯುರೋಪ್‌ನಲ್ಲಿ ದಾಳಿ ಮಾಡುವಂತೆ ಆದೇಶ ಸಿಕ್ಕಿತ್ತು.