ಅನೈತಿಕ ಸಂಗತಿಗಳು ನಡೆಯುತ್ತಿದ್ದ ಕೆಫೆಯ ಮೇಲೆ ಭಾಜಪದ ಮಹಿಳಾ ಶಾಸಕರ ದಾಳಿ !

  • ನಾಶಿಕದಂತಹ ಸಾಂಸ್ಕೃತಿಕ ನಗರದಲ್ಲಿನ ಅವಮಾನಕಾರಿ ಘಟನೆ !

  • ಅಶ್ಲೀಲ ಕೃತಿಗಳನ್ನು ಮಾಡುತ್ತಿದ್ದ ಯುವಕ-ಯುವತಿಯರು ವಶಕ್ಕೆ !

ನಾಶಿಕ – ಇಲ್ಲಿನ ಭಾಜಪದ ಶಾಸಕರಾದ ದೇವಯಾನಿ ಫರಾಂದೆಯವರು ಸ್ವತಃ `ಅ’ಮೋಗಲಿ ಕೆಫೆಯ ಮೇಲೆ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಅಲ್ಲಿ ಅನೈತಿಕ ಸಂಗತಿಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅವರಿಗೆ ಈ ಕೃತಿಗಳ ಮಾಹಿತಿ ದೊರೆತಿತ್ತು. ಶಾಸಕರು ಬಂದಿರುವುದರಿಂದ ಪೊಲೀಸರು ಕೂಡ ಘಟನಾಸ್ಥಳವನ್ನು ತಲುಪಿದರು. ಅವರು ಅಶ್ಲೀಲ ಕೃತಿಗಳನ್ನು ಮಾಡುತ್ತಿದ್ದ ಅನೇಕ ಹುಡುಗ-ಹುಡುಗಿಯರನ್ನು ವಶಕ್ಕೆ ಪಡೆದಿದ್ದಾರೆ.

ಈ ಕೆಫೆಯಲ್ಲಿ ಗಂಟೆಯ ಪ್ರಕಾರ ಬಾಡಿಗೆ ವಿಧಿಸಲಾಗುತ್ತದೆ. ಕತ್ತಲೆಗಾಗಿ ಪರದೆಗಳನ್ನು ಹಾಕಲಾಗುತ್ತದೆ. ಯುವಕ-ಯುವತಿಯರಿಗೆ ೧೦೦ ರಿಂದ ೨೦೦ ರೂಪಾಯಿಯಲ್ಲಿ ಕೋಣೆಗಳನ್ನು ನೀಡಲಾಗುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಸಂಬಂಧಿತ ಯುವಕ- ಯುವತಿಯರ ಪೋಷಕರನ್ನು ಕರೆಸಿ ಪೊಲೀಸರು ಬುದ್ಧಿ ಹೇಳಲಿದ್ದಾರೆ.

ಸಂಪಾದಕೀಯ ನಿಲುವು

ಶಾಸಕರು ದಾಳಿ ನಡೆಸುವಂತಹ ಪರಿಸ್ಥಿತಿ ಏಕೆ ಬರುತ್ತದೆ ? ಪೊಲೀಸರು ಸ್ವತಃ ಏಕೆ ಕ್ರಮ ಕೈಗೊಳ್ಳುವುದಿಲ್ಲ ?