ತಿರುಪತಿ (ಆಂಧ್ರಪ್ರದೇಶ) – ತಿರುಪತಿ ದೇವಸ್ಥಾನದ ಪ್ರಸಾದದ ಲಾಡು ತಯಾರಿಸಲು ಸರಬರಾಜಾದ ಹಸುವಿನ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಅಪೂರ್ವ ಚಾವಡಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ, ಎಂದು ವರದಿಯಾಗಿದೆ.
1. ಅಪೂರ್ವನು ತನಿಖೆ ನಡೆಸುತ್ತಿರುವ ವಿಶೇಷ ಕಾರ್ಯ ಪಡೆ ಅಧಿಕಾರಿಗಳ ಬಳಿಯೇ ಈ ಹೇಳಿಕೆ ನೀಡಿದ್ದಾನೆ. ಅವನು ಲಾಡು ತಯಾರಿಸಲು ಸರಬರಾಜು ಮಾಡುವ ತುಪ್ಪಕ್ಕೆ ರಾಸಾಯನಿಕಗಳನ್ನು ಸೇರಿಸಲಾಗಿದೆ ಎಂದು ಹೇಳಿದನು. ಅಪೂರ್ವ ರಾಸಾಯನಿಕ ಇಂಜಿನಿಯರಿಂಗ್ ಪದವೀಧರನಿದ್ದಾನೆ.
2. ಉತ್ತರಾಖಂಡದ ಭೋಲೆಬಾಬಾ ಡೈರಿಯ ಬಿಪಿನ್ ಜೈನ್ ಮತ್ತು ಪೊಮಿಲ್ ಜೈನ್ ಸಹೋದರರು, ವೈಷ್ಣವಿ ಡೈರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ವಿನಯಕಾಂತ್ ಚಾವಡಾ ಮತ್ತು ‘ಎ.ಆರ್. ಡೈರಿ’ಯ ರಾಜು ರಾಜಶೇಖರನ್ ಅವರನ್ನು ಬಂಧಿಸಲಾಗಿದೆ.