ಮೋಠೆ ವಾಘೋದಾ(ಜಳಗಾವ)ದಲ್ಲಿ ಗೋವುಗಳ ಅಕ್ರಮ ಸಾಗಾಣಿಕೆ ನಡೆಸುವ ವಾಹನಗಳನ್ನು ತಡೆದ ಗೋರಕ್ಷಕರ ಥಳಿತ !

ದಾಳಿಕೋರರ ಮೇಲೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡುತ್ತ ಹಿಂದುತ್ವನಿಷ್ಠರು, ಗೋರಕ್ಷಕರು ಮತ್ತು ಸಾಧು-ಸಂತರಿಂದ ‘ರಸ್ತೆ ತಡೆ’ ಆಂದೋಲನ !

ಮೋಠೆ ವಾಘೋದಾ(ಜಳಗಾವ) – ಅಕ್ರಮವಾಗಿ ಗೋವುಗಳ ಸಾಗಾಣಿಕೆ ನಡೆಸುವ ವಾಹನವನ್ನು ತಡೆಯಲು ಹೋಗಿದ್ದ ಗೋರಕ್ಷಕರ ಮೇಲೆ ಸಮಾಜಕಂಟಕರು ಕಲ್ಲುತೂರಾಟ ನಡೆಸಿದರು, ಹಾಗೂ ಅವರನ್ನು ಥಳಿಸಲಾಯಿತು. ಈ ಪ್ರಕರಣದಲ್ಲಿ ಗೋರಕ್ಷಕರು ಹಾಗೂ ವಾಘೋದಾ, ಸಾವದಾ, ಚಿನಾವಲದ ಗ್ರಾಮಸ್ಥರು ದಾಳಿಕೋರರ ಮೇಲೆ ತಕ್ಷಣ ಕ್ರಮಕೈಗೊಂಡು ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ವಾಘೋದದಲ್ಲಿರುವ ಬಹ್ರಾಣಪುರ-ಅಂಕಲೇಶ್ವರ ಮಹಾಮಾರ್ಗದಲ್ಲಿ ೨ ಗಂಟೆ ‘ರಸ್ತೆ ತಡೆ’ ಆಂದೋಲನ ನಡೆಸಿದರು. ಇದರಿಂದ ಸಾರಿಗೆ ಸ್ಥಗಿತಗೊಂಡಿತು. ಈ ಪ್ರಕರಣದಲ್ಲಿ ೧೦ ಜನರ ವಿರುದ್ಧ ದೂರನ್ನು ದಾಖಲಿಸಲಾಗಿದ್ದು ೭ ಜನರನ್ನು ಬಂಧಿಸಲಾಗಿದೆ.

ಈ ಸಮಯದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು, ಹಾಗೆಯೇ ಮಹಾಮಂಡಲೇಶ್ವರ ಜನಾರ್ಧನ ಹರಿ ಮಹಾರಾಜ, ಖಂಡೆರಾವ ದೇವಸ್ಥಾನದ ಮಹಾಮಂಡಲೇಶ್ವರರಾದ ಪವನ ದಾಸಜಿ ಮಹಾರಾಜರು, ಹ.ಭ.ಪ. ಧನರಾಜ ಮಹಾರಾಜರು, ಅಂಜಾಳೆಕರ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಮಹಾಸಚಿವರಾದ ಯೋಗೇಶ ಭಂಗಾಳೆ, ಪಂಕಜ ನಾರಖೇಡೆ, ರಾಹುಲ ಪಾಟೀಲ, ಸಂಜಯ ಮಾಳಿ, ಮನೀಶ ಭಂಗಾಳೆ, ಯೋಗೇಶ ಬೋರೋಲೆ, ಸುರೇಂದ್ರ ನ್ಹಾವಿ, ಸ್ವಪ್ನೀಲ ಪವಾರರೊಂದಿಗೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ‘ಇಂತಹ ಘಟನೆಗಳು ೧ ತಿಂಗಳಿನ ಒಳಗೆ ನಿಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’, ಎಂದು ಜನಾರ್ಧನ ಹರಿ ಮಹಾರಾಜ ಇವರು ಎಚ್ಚರಿಕೆ ನೀಡಿದರು. (ಸಾಧು ಸಂತರು ಪ್ರತಿಭಟನೆ ಮಾಡುವ ಸಂದರ್ಭ ಬಂದಿರುವುದು ದುರದೃಷ್ಟಕರ ! – ಸಂಪಾದಕರು)

ಸಮಾಜ ಕಂಟಕರಿಂದ ಪೊಲೀಸರಾದ ಪಾಟೀಲ ಗಣೇಶ ಭೋಸಲೆಯವರ ಥಳಿತ !

ವಿವಾದ ಪರಿಹರಿಸುವುದಕ್ಕಾಗಿ ಹೋಗಿದ್ದ ವಾಘೋದಾದ ಪೊಲೀಸರಾದ ಪಾಟೀಲ ಗಣೇಶ ಭೋಸಲೆಯವರನ್ನು ಸಮಾಜ ಕಂಟಕರು ಥಳಿಸಿದ್ದು ಅವರ ವಸ್ತುಗಳನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆ. (ಇಂತಹ ಸಮಾಜಕಂಟಕರನ್ನು ಜೈಲಿಗೆ ಅಟ್ಟಬೇಕು ! – ಸಂಪಾದಕರು) ಈ ಪ್ರಕರಣದಲ್ಲಿ ೪ ಜನರನ್ನು ವಶಕ್ಕೆ ಪಡೆಯಲಾಗಿದೆ.

ಗೋವುಗಳ ಅಕ್ರಮ ಕಳ್ಳಸಾಗಾಣಿಕೆಗಾಗಿ ಬಳಸಲಾಗಿದ್ದ ವಾಹನ ನಕಲಿಯಾಗಿರುವುದು ಬಹಿರಂಗ !

ಗೋವುಗಳ ಅಕ್ರಮ ಕಳ್ಳಸಾಗಾಣಿಕೆಗಾಗಿ ಬಳಸಲಾಗಿದ್ದ ವಾಹನದ ಕ್ರಮಾಂಕವನ್ನು ಹುಡುಕಿದಾಗ ಅದು ನಕಲಿಯಾಗಿದ್ದು ಈ ಕ್ರಮಾಂಕವು ದ್ವಿಚಕ್ರ ವಾಹನದ್ದಾಗಿರುವುದು ಬೆಳಕಿಗೆ ಬಂದಿದೆ.