ಮದರಸದಲ್ಲಿ ಕಲಿಯುತ್ತಿರುವ ೧೬ ವರ್ಷದ ಹುಡುಗನಿಂದ ೪ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ !

ಗಾಝಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿಯ ಭೋಜಪುರ ಪರಿಸರದಲ್ಲಿ ಒಂದು ಮದರಸಾದಲ್ಲಿ ಓದುತ್ತಿರುವ ೧೬ ವರ್ಷದ ಮುಸಲ್ಮಾನ ಹುಡುಗನು ಓರ್ವ ೪ ವರ್ಷದ ಹುಡುಗಿಗೆ ಕಬ್ಬು ನೀಡುವ ನೆಪದಲ್ಲಿ ಹೊಲಕ್ಕೆ ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದನು. ಹುಡುಗಿ ವಿರೋಧಿಸಿದಾಗ ಆಕೆಗೆ ಹಿಗಾಮುಗ್ಗಾ ಥಳಸಿದ್ದಾನೆ. ಅದರ ನಂತರ, ನೀನು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಂದುಬಿಡುವೆನು, ಎಂದು ಬೆದರಿಕೆ ಹಾಕಿದ್ದಾನೆ.

ಸಂತ್ರಸ್ತ ಹುಡುಗಿ ಅಳುತ್ತಾ ಮನೆಗೆ ತಲುಪಿದಳು. ಕುಟುಂಬದ ಸದಸ್ಯರಿಗೆ, ಅವರ ಹುಡುಗಿಗೆ ಏನೋ ಗಾಯವಾಗಿದೆ ಎಂದು ತಿಳಿದಾಗ ಅವರು ಆಕೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ಬಲತ್ಕಾರ ಆಗಿರುವುದು ಬೆಳಕಿಗೆ ಬಂದಿದೆ. ಹುಡುಗಿಯು ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿದ ನಂತರ ಆಕ್ರೋಶಗೊಂಡ ಕುಟುಂಬದವರು ಪೊಲೀಸರಿಗೆ ದೂರು ನೀಡಿದರು. ಹುಡುಗಿಯ ತಂದೆಯ ದೂರಿನ ಮೇರೆಗೆ ದೂರು ದಾಖಲಿಸಿ ಕೊಳ್ಳಲಾಗಿದೆ ಎಂದು ಮೋದಿ ನಗರದ ಪೊಲೀಸ ಅಧಿಕಾರಿ ಜ್ಞಾನ ಪ್ರಕಾಶ ರಾಯ್ ಇವರು ಹೇಳಿದರು. ಆರೋಪಿಯನ್ನು ಬಂಧಿಸಲಾಗಿದ್ದು ಅವನನ್ನು ಬಾಲಸುಧಾರಗೃಹಕ್ಕೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಬಲಾತ್ಕಾರ ಮಾಡಿರುವ ಅಪ್ರಾಪ್ತ ಹುಡುಗ ಸ್ಥಳೀಯ ಮದರಸದಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸಂಪಾದಕೀಯ ನಿಲುವು

ಮದರಸಾದಲ್ಲಿ ಕಲಿಯುತ್ತಿರುವ ಹುಡುಗರಿಂದ ಬಲಾತ್ಕಾರ, ಹತ್ಯೆ ಇಂತಹ ಗಂಭೀರ ಅಪರಾಧ ಘಟಿಸುವುದು ಆಗಾಗ ಬೆಳಕಿಗೆ ಬರುತ್ತದೆ. ಇದರಿಂದ ಅವರಿಗೆ ನೀಡುವ ಶಿಕ್ಷಣದ ಸಮೀಕ್ಷೆ ನಡೆಯಬೇಕು ಹಾಗೂ ದೇಶದಾದ್ಯಂತ ಇರುವ ಮದರಸಾಗಳಿಗೆ ಬಿಗ್ ಹಾಕಬೇಕು!