ನವದೆಹಲಿ – ಭಾರತದಲ್ಲಿ ಆಶ್ರಿತ ಜೀವನ ಬದುಕುವ ಬಾಂಗ್ಲಾದೇಶದ ಮಾಜಿ ಪ್ರಧಾನ ಮಂತ್ರಿ ಶೇಖ ಹಸೀನಾ ಇವರು, ಅವರು ಬೇಗನೆ ಅವರ ದೇಶಕ್ಕೆ ಹಿಂತಿರುಗಬಹುದು. ಅವರು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಇವರ ಮೇಲೆ ದೇಶದ ವ್ಯವಸ್ಥೆಯನ್ನು ಹದಗೆಡಿಸಿದ್ದಾರೆ ಎಂದು ಆರೋಪಿಸಿದರು. ಭಾರತದಿಂದ ಪ್ರಸಾರ ಮಾಡಿರುವ ಅವರ ಒಂದು ವಿಡಿಯೋ ಸಂದೇಶದಲ್ಲಿ, ನಾನು ಢಾಕಾಗೆ ಮತ್ತೆ ಹಿಂತಿರುಗಿ ಬರುವೆ ಮತ್ತು ಯುನುಸ್ ಅವರ ಅಕ್ರಮ ಚಟುವಟಿಕೆಯ ವಿಚಾರಣೆ ನಡೆಸುವೆ ಮತ್ತು ಜನರಿಗೆ ನ್ಯಾಯ ದೊರಕಿಸಿ ಕೊಡುವೆ, ಎಂದು ಹೇಳಿದರು.
೧. ಅವಾಮಿ ಲೀಗ್ ಪಕ್ಷದ ನಾಯಕಿ ಶೇಖ್ ಹಸೀನಾ ಇವರು, ದೇಶದ ಜನತೆಗಾಗಿ ಒಂದು ವಿಡಿಯೋ ಮೂಲಕ ಸಂದೇಶ ನೀಡುತ್ತಾ, ಮಹಮ್ಮದ್ ಯುನೂಸ್ ಇವರ ಸರಕಾರ ಭಯೋತ್ಪಾದಕರಿಗೆ ಸ್ವಾತಂತ್ರ್ಯ ನೀಡಿದೆ. ಅವರು ಜನರನ್ನು ಕೊಲ್ಲುತ್ತಿದ್ದಾರೆ ಮತ್ತು ರಸ್ತೆಯಲ್ಲಿ ಗಲಭೆ ನಡೆಸುತ್ತಿದ್ದಾರೆ. ಅವರು ಬಾಂಗ್ಲಾದೇಶದಲ್ಲಿನ ಸಂಸ್ಥೆಗಳನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.
೨. ಶೇಖ್ ಹಸೀನಾ ಇವರು ಯುನೂಸ್ ಇವರ ಮೇಲೆ ಭಯೋತ್ಪಾದಕರನ್ನು ಬಿಡುಗಡೆಗೊಳಿಸಿರುವ ಆರೋಪ ಕೂಡ ಮಾಡಿದ್ದಾರೆ. ಬಾಂಗ್ಲಾದೇಶದ ಮುಂದಿನ ಚುನಾವಣೆಯಲ್ಲಿ ಅವರು ಅವಾಮಿ ಲೀಗ್ ಪಕ್ಷದ ನೇತೃತ್ವ ವಹಿಸಬಹುದು, ಎಂಬ ಸಂಕೇತ ಕೂಡ ಅವರು ನೀಡಿದ್ದಾರೆ.
೩. ಇನ್ನೊಂದು ಕಡೆ ಶೇಖ ಹಸಿನಾ ಇವರನ್ನು ಪದಚ್ಚುತಗೊಳಿಸುವುದಕ್ಕಾಗಿ ನಡೆದಿರುವ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ವಿದ್ಯಾರ್ಥಿಗಳು ಇತ್ತೀಚಿಗೆ ಒಂದು ರಾಜಕೀಯ ಪಕ್ಷದ ಸ್ಥಾಪನೆಯ ಘೋಷಣೆ ಮಾಡಿದ್ದಾರೆ. ಮಹಮ್ಮದ್ ಇವರ ಮಧ್ಯಂತರ ಸರಕಾರದಲ್ಲಿನ ಸಲಹೆಗಾರನಾಗಿರುವ ವಿದ್ಯಾರ್ಥಿ ನಾಯಕ ನಾಹಿದ ಇಸ್ಲಾಂ ಇವನು ನೂತನ ಪಕ್ಷದ ನೇತೃತ್ವ ವಹಿಸಿಕೊಳ್ಳುವದಕ್ಕಾಗಿ ಮಧ್ಯಂತರ ಸರಕಾರಕ್ಕೆ ರಾಜೀನಾಮೆ ನೀಡಿದ್ದಾನೆ.