|

ಸಿಪಹಿಜಾಲಾ (ತ್ರಿಪುರ) – ಸಿಪಹಿಜಾಲಾ ಜಿಲ್ಲೆಯಲ್ಲಿ ಅಂದಾಜು 20 ರಿಂದ 25 ಬಾಂಗ್ಲಾದೇಶಿ ಕಳ್ಳ ಸಾಗಾಣೆದಾರರು ಭಾರತದ ಗಡಿಯೊಳಗೆ ನುಸುಳುತ್ತಿರುವಾಗ ಗಡಿ ಭದ್ರತಾ ಪಡೆಯ ಗಸ್ತು ತಂಡ ತಡೆದರು. ಆ ವೇಳೆ ಕಳ್ಳಸಾಗಣೆದಾರರು ಸೈನಿಕರ ಮೇಲೆ ದಾಳಿ ನಡೆಸಿದರು. ಇದರಲ್ಲಿ 3 ಯೋಧರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವಾಗ ಕಳ್ಳಸಾಗಣೆದಾರರು ಸೈನಿಕರಿಂದ ಬಂದೂಕನ್ನು ಕಸಿದುಕೊಳ್ಳಲು ಪ್ರಯತ್ನಿಸಿದರೊ, ಆಗ ಓರ್ವ ಸೈನಿಕ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದನು. ಇದರಲ್ಲಿ ಮೊಹಮ್ಮದ್ ಅಲಮಿನ್ ಎಂಬ ಹೆಸರಿನ ಬಾಂಗ್ಲಾದೇಶದ ಕಳ್ಳಸಾಗಣೆದಾರ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವನ ಸಾವಾಗಿದೆ. “ಪರಿಸ್ಥಿತಿಯನ್ನು ಹತೋಟಿಗೆ ತರಲು ಗುಂಡಿನ ದಾಳಿ ನಡೆಸಬೇಕಾಯಿತು” ಎಂದು ಗಡಿ ಭದ್ರತಾ ಪಡೆಯು ತಿಳಿಸಿದೆ. ಈ ಕಳ್ಳಸಾಗಾಣಿಕೆದಾರ ಯಾರು? ಮತ್ತು ಅವರ ಜಾಲ ಎಲ್ಲಿಯವರೆಗೆ ಹರಡಿದೆ?, ಇದರ ತನಿಖೆ ಪೋಲಿಸರು ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಉದ್ದೇಶಪೂರ್ವಕವಾಗಿ ಇಂತಹ ಘಟನೆಗಳನ್ನು ಮಾಡಲಾಗುತ್ತಿದೆಯೇ?, ಇದರ ಅನ್ವೇಷಣೆ ಆಗಬೇಕಾಗಿದೆ! |