Anti-Hindu Delhi Riots : ದಿಲಬರ ನೇಗಿ ಹತ್ಯೆ ಪ್ರಕರಣದ ಆರೋಪಿ ಶಹನವಾಜ್ ಖುಲಾಸೆ !

ದೆಹಲಿಯ ಹಿಂದೂ ವಿರೋಧಿ ಗಲಭೆ ಪ್ರಕರಣ

ನವದೆಹಲಿ – ದೆಹಲಿಯ ಹಿಂದೂ ವಿರೋಧಿ ಗಲಭೆಯಲ್ಲಿ ದಿಲಬರ ನೇಗಿ ಹತ್ಯೆ ಪ್ರಕರಣದ ಆರೋಪಿ ಮಹಮ್ಮದ್ ಶಹನವಾಜ್ ಖುಲಾಸೆಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಈ ಹಿಂದೆ ೧೨ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ದೆಹಲಿಯ ಹಿಂದೂ ವಿರೋಧಿ ಹಿಂಸಾಚಾರದ ಸಮಯದಲ್ಲಿ ಆರೋಪಿ ಮಹಮ್ಮದ ಶಹನವಾಜ ಗಲಭೆಕೋರ ಮುಸಲ್ಮಾನರ ಗುಂಪಿನೊಂದಿಗೆ ಗೋದಾಮಿಗೆ ಬೆಂಕಿ ಹಚ್ಚಿದ್ದನು. ಈ ಬೆಂಕಿಯಲ್ಲಿ ಸುಟ್ಟು ಕರಕಲಾದ ಗೋದಾಮಿನಲ್ಲಿ ದಿಕಬರ್ ನೇಗಿಯವರ ಮೃತ ದೇಹವು ಫೆಬ್ರವರಿ 26, 2020 ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ವಿಚಾರಣೆಯ ಸಮಯದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಾಮಚಲಾ ಅವರು ತೀರ್ಪು ನೀಡುವಾಗ, ದೂರುದಾರಪಕ್ಷದವರು ತಮ್ಮ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು. ಗಲಭೆಕೋರ ಗುಂಪಿನ ಸದಸ್ಯನಾಗಿ ಶಹನವಾಜನನ್ನು ಗುರುತಿಸಲು ಸಾಕ್ಷಿದಾರರಿಗೆ ಸಾಧ್ಯವಾಗಲಿಲ್ಲ ಅಥವಾ ಅವರ ಸಾಕ್ಷ್ಯಗಳು ಅಸ್ಪಷ್ಟವಾಗಿದ್ದವು, ಎಂದು ಹೇಳಿದ್ದಾರೆ.