|
ಪ್ರಯಾಗರಾಜ (ಉತ್ತರಪ್ರದೇಶ) – ಉತ್ತರಪ್ರದೇಶದ ಸಂಭಲ್ ನಲ್ಲಿನ ಶ್ರೀ ಹರಿಹರ ದೇವಸ್ಥಾನದ ಜಾಗದಲ್ಲಿ ಕಟ್ಟಲಾಗಿರುವ ಶಾಹಿ ಜಮಾ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಡೆಸಿದ ತಪಾಸಣೆಯ ನಂತರ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಪರಿಸ್ಥಿತಿಯ ವರದಿ ಪ್ರಸ್ತುತಪಡಿಸಲಾಗಿದೆ. ಈ ವರದಿಯಲ್ಲಿ ಮಸೀದಿಯ ಒಳಗಿನ ರಚನೆಯಲ್ಲಿ ಮಾಡಲಾದ ಬದಲಾವಣೆಯ ಮಾಹಿತಿ ನೀಡಿದೆ. ಹಾಗೂ ‘ಪ್ರಸ್ತುತ ಮಸೀದಿಗೆ ಯಾವುದೇ ಸುಣ್ಣ ಬಣ್ಣದ ಅಥವಾ ದುರಸ್ತಿ ಅಗತ್ಯವಿಲ್ಲ’, ಎಂದು ಸ್ಪಷ್ಟ ಪಡಿಸಿದೆ. ಮಸೀದಿಯ ಡಿಜಿಟಲ್ ಸರ್ವೇಕ್ಷಣೆಗಾಗಿ ಕೃತಿ ರೂಪರೇಷೆ ಸಿದ್ದಪಡಿಸಿರುವ ಮಾಹಿತಿ ನ್ಯಾಯಾಲಯಕ್ಕೆ ನೀಡಲಾಗಿದೆ. ಮಸೀದಿ ಸಮಿತಿಯು ರಮಜಾನ್ ಪ್ರಯುಕ್ತ ಮಸೀದಿಗೆ ಬಣ್ಣ ಹಚ್ಚಲು ಅನುಮತಿ ಕೇಳಿತ್ತು. ಈ ಬಗ್ಗೆ ನ್ಯಾಯಾಲಯವು ಪುರಾತತ್ವ ಇಲಾಖೆಗೆ ಪರಿಶೀಲನೆ ನಡೆಸಿ ವರದಿ ಪ್ರಸ್ತುತಪಡಿಸಲು ಹೇಳಿತ್ತು.
No need for repainting of the Shahi Jama Masjid in Sambhal (Uttar Pradesh)! – Archaeology Department submits report in the Allahabad High Court.
The mosque committee had requested repainting for Ramadan.
Several alterations were made in the mosque without the approval of the… pic.twitter.com/CFtcRuN6ln
— Sanatan Prabhat (@SanatanPrabhat) February 28, 2025
೧. ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಪುರಾತತ್ವ ಇಲಾಖೆಯ ಸಹಸಂಚಾಲಕ ಮದನ ಸಿಂಹ ಚೌಹಾನ್, ಸ್ಮಾರಕ ಸಂಚಾಲಕ ಝುಲ್ಫಿಗರ್ ಅಲಿ ಮತ್ತು ಪುರಾತತ್ವ ವಿಜ್ಞಾನಿ ವಿನೋದ ಸಿಂಹ ರಾವತ ಇವರ ಸಮಾವೇಶ ಇರುವ ಪುರಾತತ್ವ ಇಲಾಖೆಯ ತಂಡ ಫೆಬ್ರುವರಿ ೨೭ ರಂದು ಸಂಜೆ ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪರಿಶೀಲನೆಯ ವರದಿ ಫೆಬ್ರವರಿ ೨೮ ಕ್ಕೆ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಲಾಗಿದೆ.
೨. ಡಿಸೆಂಬರ್ ೨೨, ೧೯೨೦ ರಂದು ‘ಅಧಿಸೂಚನೆ ಸಂಖ್ಯೆ ೧೬೪೫/೧೧೩೩ ಎಮ್’ ಪ್ರಕಾರ ‘ಪ್ರಾಚೀನ ಸ್ಮಾರಕಗಳ ರಕ್ಷಣೆ ಕಾನೂನು, ೧೯೦೪’ ಅಡಿಯಲ್ಲಿ ಸಂಭಲ್ ಜಾಮಾ ಸೀದಿಗೆ ‘ಸಂರಕ್ಷಿತ’ ಎಂದು ಘೋಷಿಸಲಾಗಿತ್ತು.
೩. ನ್ಯಾಯಾಲಯದ ಆದೇಶದ ಪ್ರಕಾರ ಪುರಾತತ್ವ ಇಲಾಖೆ ಮಸೀದಿಯ ನಿಯಮಿತ ಸ್ವಚ್ಛತೆ, ಧೂಳು ತೆಗೆಯುವುದು ಮತ್ತು ಅಕ್ಕಪಕ್ಕದ ಗಿಡಗಂಟೆಗಳು ತೆಗೆದು ಹಾಕುವ ಕೆಲಸ ಮಾಡುವುದು. ಇದಕ್ಕಾಗಿ ಮಸೀದಿ ಸಮಿತಿಗೆ ಯಾವುದೇ ಅಡಚಣೆ ನಿರ್ಮಾಣ ಮಾಡಬಾರದು ಮತ್ತು ಸಂಪೂರ್ಣ ಸಹಕಾರ ನೀಡಬೇಕು, ಎಂದು ಆದೇಶಿಸಲಾಗಿದೆ.
ಪುರಾತತ್ವ ಇಲಾಖೆಯ ಅನುಮತಿ ಇಲ್ಲದೆ ಮಸೀದಿಯಲ್ಲಿ ಮಾಡಲಾದ ಅನೇಕ ಬದಲಾವಣೆ !ಪುರಾತತ್ವ ಇಲಾಖೆಯ ತಪಾಸಣೆಯಲ್ಲಿ, ಮಸೀದಿ ಸಮಿತಿಯು ಈ ಹಿಂದೆ ಕೂಡ ದುರಸ್ತಿ ಮತ್ತು ಜೀರ್ಣೋದ್ಧಾರದ ಕಾರ್ಯ ಮಾಡಿದೆ, ಅದರಿಂದ ಐತಿಹಾಸಿಕ ರಚನೆಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ಮಸೀದಿಯ ನೆಲಹಾಸು ಸಂಪೂರ್ಣವಾಗಿ ಟೈಲ್ಸ್ ಮತ್ತು ಕಲ್ಲುಗಳ ಹಾಕಿ ಬದಲಾವಣೆ ಮಾಡಲಾಗಿದೆ. ಮಸೀದಿಯ ಒಳಗಿನ ಭಾಗದಲ್ಲಿ ಬಂಗಾರದ ಬಣ್ಣ, ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಗಾಢವಾದ ಬಣ್ಣ ಹಚ್ಚಲಾಗಿದೆ. ಇದರಿಂದ ಮೂಲ ಪೃಷ್ಠಭಾಗ ಮುಚ್ಚಲಾಗಿದೆ. ಮಸೀದಿಯ ಒಳಗಿನ ಬಣ್ಣ ಉತ್ತಮ ಸ್ಥಿತಿಯಲ್ಲಿ ಇದೆ ಮತ್ತು ಅದನ್ನು ಕೂಡಲೇ ದುರಸ್ತಿ ಮಾಡುವ ಅಗತ್ಯವಿಲ್ಲ. ಹಾಗೂ ಹೊರಗಿನ ಕೆಲವು ಸ್ಥಳಗಳಲ್ಲಿ ಬಣ್ಣ ಹೋಗಿದೆ; ಆದರೆ ಅದನ್ನು ತಕ್ಷಣ ರಿಪೇರಿ ಮಾಡುವಷ್ಟು ಗಂಭೀರವಾಗಿಲ್ಲ. ಮಸೀದಿಯ ಉತ್ತರ ಮತ್ತು ಪಶ್ಚಿಮ ಭಾಗದ ಚಿಕ್ಕ ಕೋಣೆಗಳು, ಅವುಗಳನ್ನು ‘ಸ್ಟೋರ್’ ಎಂದು ಉಪಯೋಗಿಸಲಾಗುತ್ತದೆ. ಅವುಗಳು ಜೀರ್ಣಾವಸ್ಥೆಯಲ್ಲಿ ಇವೆ. ವಿಶೇಷವಾಗಿ ಈ ಕೋಣೆಗಳಲ್ಲಿ ಮರದ ಛಾವಣಿ ಒಳ್ಳೆಯ ಸ್ಥಿತಿಯಲ್ಲಿ ಇಲ್ಲ ಮತ್ತು ಅದರ ದುರಸ್ತಿ ಅಗತ್ಯವಿದೆ. ಸಂಪಾದಕೀಯ ನಿಲುವುಪುರಾತತ್ವ ಇಲಾಖೆಯ ಅನುಮತಿ ಇಲ್ಲದೆ ಬದಲಾವಣೆ ಮಾಡಿರುವ ಮಸೀದಿ ಸಮಿತಿಯನ್ನು ವಿಸರ್ಜಿಸಿ ಸಂಬಂಧ ಪಟ್ಟವರನ್ನು ಜೈಲಿಗಟ್ಟುವ ಆದೇಶ ನ್ಯಾಯಾಲಯ ನೀಡಬೇಕು, ಎಂದು ಕಾನೂನ ಪ್ರಿಯ ಜನತೆಗೆ ಅನಿಸುತ್ತದೆ ! |