ಕಛ್ಚ (ಗುಜರಾತ) – ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ ಅನಿರೀಕ್ಷಿತ ಕ್ರಮ ಕೈಗೊಳ್ಳುತ್ತಾ ಒಂದು ಇರಾನಿನ ಹಡಗಿನಿಂದ ೪೨೫ ಕೋಟಿ ರೂಪಾಯಿಯ ಮಾದಕ ವಸ್ತು ವಶ ಪಡಿಸಿಕೊಂಡಿದ್ದಾರೆ. ಈ ಹಡಗಿನಿಂದ ೬೧ ಕೇಜಿ ‘ಹೆರಾಯಿನ್’ ಕಳ್ಳ ಸಾಗಾಣಿಕೆ ಮಾಡಿಕೊಂಡು ಹೋಗುತ್ತಿದ್ದರು. ಗುಜರಾತನ ಉಗ್ರ ನಿಗ್ರ ದಳಕ್ಕೆ ಮಾಹಿತಿ ದೊರೆಯಿತು. ನಂತರ ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ ಅವರ ಕಾವಲು ಕಾಯುವ ೨ ಹಡಗಿನ ಮೂಲಕ ಈ ಕ್ರಮ ಕೈಗೊಂಡಿದೆ. ಆ ಸಮಯದಲ್ಲಿ ೫ ಜನರನ್ನು ಬಂಧಿಸಿದ್ದಾರೆ. ಓಖಾ ದಡದಿಂದ ೩೪೦ ಕಿಲೋಮೀಟರ್ ಅಂತರದಲ್ಲಿ ಭಾರತೀಯ ಜಲ ಗಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
Drugs worth Rs 425 crore seized from Iranian boat off Gujarat coast | 🛰️Catch the day’s latest news and updates ➠ https://t.co/ZnRuWHuezr pic.twitter.com/RdQu19a7qz
— Economic Times (@EconomicTimes) March 7, 2023
ಕರಾವಳಿ ರಕ್ಷಣಾ ಪಡೆಯವರು ಇರಾನಿನ ಹಡಗು ಕಂಡ ತಕ್ಷಣ ನಿಲ್ಲಿಸಲು ಹೇಳಿದರು ; ಆದರೆ ಹಡಗಿನ ಚಾಲಕ ಓಡಿ ಹೋಗಲು ಪ್ರಯತ್ನಿಸಿದನು. ಅದರ ನಂತರ ಕರಾವಳಿ ರಕ್ಷಣಾ ಪಡೆಯು ಕಾರ್ಯಾಚರಣೆ ನಡೆಸಿತು. ಆ ಸಮಯದಲ್ಲಿ ಹಡಗಿನಲ್ಲಿ ಉಪಸ್ಥಿತ ಇರುವ ಜನರ ಬಳಿ ಇರಾನಿನ ನಾಗರಿಕತ್ವದ ಪುರಾವೆ ಕಂಡು ಬಂದಿದೆ.