ಬ್ರಿಟಿಷ ಆಡಳಿತದ ಮೊದಲು ಭಾರತದಲ್ಲಿ ಶೇಕಡ ೭೦ ರಷ್ಟು ಜನಸಂಖ್ಯೆ ಸುಶಿಕ್ಷಿತರಾಗಿದ್ದರು ! – ಸರಸಂಘಚಾಲಕರು

ಸರಸಂಘಚಾಲಕ ಡಾ. ಮೋಹನ ಜಿ ಭಾಗವತ

ಕರ್ನಾಲ್ (ಹರಿಯಾಣ) – ಬ್ರಿಟಿಷ ಆಡಳಿತದ ಮೊದಲು ದೇಶದಲ್ಲಿ ಶೇಕಡ ೭೦ ರಷ್ಟು ಜನಸಂಖ್ಯೆ ಸುಶಿಕ್ಷಿತರಾಗಿದ್ದರು ಹಾಗೂ ಆ ಕಾಲದಲ್ಲಿ ನೀರುದ್ಯೋಗ ಕೂಡ ಇರಲಿಲ್ಲ. ಇನ್ನೊಂದು ಕಡೆ ಇಂಗ್ಲೆಂಡನಲ್ಲಿ ಕೇವಲ ಶೇಕಡಾ ೧೭ ರಷ್ಟು ಜನರು ಸುಶಿಕ್ಷಿತರಿದ್ದರು. ಬ್ರಿಟಿಷರು ಅವರ ಶಿಕ್ಷಣ ಪದ್ಧತಿ ಭಾರತದಲ್ಲಿ ಮತ್ತು ನಮ್ಮ ಶಿಕ್ಷಣ ಪದ್ಧತಿ ಅವರ ದೇಶದಲ್ಲಿ ಜಾರಿಗೊಳಿಸಿದರು. ಅದರಿಂದ ಬ್ರಿಟಿಷರು ಶೇಕಡ ೭೦ ಮತ್ತು ನಾವು ೧೭ ರಷ್ಟು ಸುಶಿಕ್ಷಿತರಾದೆವು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಜಿ ಭಾಗವತ ಇವರು ಇಲ್ಲಿಯ ಒಂದು ಆಸ್ಪತ್ರೆ ಉದ್ಘಾಟನೆಯ ಸಮಯದಲ್ಲಿ ಹೇಳಿದರು.

ಸರಸಂಘಚಾಲಕರು ಮಾತು ಮುಂದುವರಿಸುತ್ತಾ ,

೧. ಭಾರತದ ಶಿಕ್ಷಣ ವ್ಯವಸ್ಥೆ ಕೇವಲ ಉದ್ಯೋಗಕ್ಕಾಗಿ ಅಷ್ಟೇ ಅಲ್ಲದೆ, ಜ್ಞಾನದ ಮಾಧ್ಯಮ ಕೂಡ ಆಗಿತ್ತು. ಎಲ್ಲರಿಗೂ ಅಗ್ಗದಲ್ಲಿ ಶಿಕ್ಷಣ ಲಭ್ಯವಾಗುತ್ತಿತ್ತು. ಆದ್ದರಿಂದ ಶಿಕ್ಷಣದ ಎಲ್ಲಾ ಖರ್ಚು ಸಮಾಜ ತುಂಬಿಸುತ್ತಿತ್ತು. ಈ ಶಿಕ್ಷಣದಿಂದ ಮುಂದೆ ಹೋಗಿ ಅನೇಕ ಕಲಾವಿದರು, ವಿದ್ವಾಂಸರನ್ನು ಜಗತ್ತಿನಾದ್ಯಂತ ಗುರುತಿಸಿದರು.

೨. ಎಲ್ಲರಿಗೂ ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣ ಇದು ದೇಶಕ್ಕಾಗಿ ಮಹತ್ವದ ವಿಷಯವಾಗಿದೆ; ಕಾರಣ ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣ ಇದೆರಡು ವಿಷಯ ತುಟ್ಟಿ ಆಗುತ್ತಿದೆ. ಸಾಮಾನ್ಯ ಜನರಿಗೆ ಅಗ್ಗದಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣ ದೊರೆಯುವ ಅವಶ್ಯಕತೆ ಇದೆ.