ಕೇರಳದ ‘ಏಷ್ಯಾನೆಟ್ ನ್ಯೂಸ್’ ವಾರ್ತಾ ವಾಹಿನಿಯ ಕಾರ್ಯಾಲಯದ ಬಳಿ ಕೇರಳ ಪೊಲೀಸರ ದಾಳಿ

  • ೨ ದಿನಗಳ ಹಿಂದೆ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯಿಂದ ಕೂಡ ದಾಳಿ !

  • ಕೇಂದ್ರ ಸಚಿವರು ವಾರ್ತಾ ವಾಹಿನಿಯಲ್ಲಿ ಬಂಡವಾಳ ಹೂಡಿರುವುದರಿಂದ ಕಮ್ಯುನಿಸ್ಟ್ ಸರಕಾರದಿಂದ ಕಿರುಕುಳ ನೀಡುತ್ತಿರುವ ಆರೋಪ !

ಕೊಳಿಕೊಡ್ (ಕೇರಳ) – ಕೇರಳ ಪೊಲೀಸರು ‘ಏಷ್ಯಾನೆಟ್ ನ್ಯೂಸ್’ ಈ ವಾರ್ತಾ ವಾಹಿನಿಯ ಕಾರ್ಯಾಲಯದ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರ ನಂತರ ಈ ವಾರ್ತಾ ವಾಹಿನಿಯ ವಿರುದ್ಧ ದೂರು ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ಕೇರಳ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ಇವರು ಈ ವಾಹಿನಿಯ ವಿರೋಧದಲ್ಲಿ ವಿಧಾನಸಭೆಯಲ್ಲಿ ವಿಷಯ ಮಂಡಿಸಿದರು. ಇದರ ಬಗ್ಗೆ ಮುಖ್ಯಮಂತ್ರಿ ಪೀನರಾಯಿ ವಿಜಯನ್ ಇವರು, ಈ ವಾಹಿನಿಯ ವಿರುದ್ಧ ದೂರು ದೊರೆತ ನಂತರ ವಿಚಾರಣೆ ನಡೆಸಲಾಯಿತು ಹಾಗೂ ಅಪರಾಧ ದಾಖಲಾಗಿದೆ ಎಂದು ಹೇಳಿದರು.

೧. ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆ ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ’ ದ (ಎಸ್.ಎಫ್.ಐ.ದ) ಗೂಂಡಾಗಳು ಈ ವಾರ್ತಾ ವಾಹಿನಿಯ ಕಾರ್ಯಾಲಯದ ಮೇಲೆ ದಾಳಿ ನಡೆಸಿ ಧ್ವಂಸ ಕೂಡ ಮಾಡಿದ್ದರು. ದಾಳಿಯ ಪ್ರಕರಣದಲ್ಲಿ ಪೊಲೀಸರು ೮ ಜನರನ್ನು ಬಂಧಿಸಿದ್ದರು. ಅದರ ೨ ಎರಡು ದಿನದ ನಂತರ ಅಲ್ಲಿ ದಾಳಿ ನಡೆದಿದೆ.

೨. ಈ ಬಗ್ಗೆ ಪೊಲೀಸರು, ಈ ವಾಹಿನಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಒಂದು ಕಾರ್ಯಕ್ರಮ ಪ್ರಸ್ತುತವಾಗಿತ್ತು. ಅದರಲ್ಲಿ ಮಾದಕ ವಸ್ತುಗಳ ಹೆಚ್ಚುತ್ತಿರುವ ಪ್ರಭಾವ ಮತ್ತು ಮಾದಕ ಪದಾರ್ಥಗಳ ಮಾಫಿಯಾಗಳಿಂದ ಜನರಿಗೆ ಮೋಸ ಮಾಡುವುದರ ಬಗ್ಗೆ ಮಾಹಿತಿ ನೀಡಿದ್ದರು. ಇದರಲ್ಲಿ ಒಬ್ಬ ಸಂತ್ರಸ್ತೇ ಹುಡುಗಿಯ ಮುಖಾಮುಚ್ಚೆ ಆಕೆಯ ಧ್ವನಿ ಕೇಳಿಸಿದ್ದರು. ಈ ಧ್ವನಿಯಲ್ಲಿ ಏನೋ ಅನುಮಾನವಿದೆ ಎಂದು ಆರೋಪ ಮಾಡಿದ್ದರು; ಆದರೆ ಸಂತ್ರಸ್ತೆಯ ತಂದೆ,’ನನ್ನ ಹುಡುಗಿ ಹೇಳಿರುವ ಮಾಹಿತಿ ಸತ್ಯವಾಗಿತ್ತು’, ಎಂದು ತಿಳಿಸಿದರು.

೩. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಮೈತ್ರಿ ಸರಕಾರವು, ‘ಏಷ್ಯಾನೆಟ್ ನ್ಯೂಸ್’ ವಾಹಿನಿಯು ಕೇಂದ್ರ ಸರಕಾರದ ಆದೇಶದ ಮೇರೆಗೆ ಕಾರ್ಯ ಮಾಡುತ್ತಿದ್ದು ಅದು ರಾಜ್ಯ ಸರಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತದೆ ಎಂದು ಆರೋಪಿಸಿದೆ.

೪. ಈ ವಾಹಿನಿಯಲ್ಲಿ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಇವರು ಬಂಡವಾಳ ಹೂಡಿದ್ದಾರೆ. ‘ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್’ ಇದರ ಕಾರ್ಯಕಾರಿ ಅಧ್ಯಕ್ಷ ರಾಜೀವ ಕಾಲರಾ ಇವರು ಪೊಲೀಸರು ದಾಖಲಿಸಿರುವ ಆರೋಪ ಸುಳ್ಳು ಎಂದು ಹೇಳಿ, ಅದರ ವಿರುದ್ಧ ‘ಕಾನೂನ ರೀತಿ ಕ್ರಮ ಕೈಗೊಳ್ಳಲಾಗುವುದು’, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಿಬಿಸಿಯ ಕಾರ್ಯಾಲಯಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಸಮೀಕ್ಷೆ ಮಾಡಿದ್ದರಿಂದ ಕೂಗಾಡುವ ‘ಏಷ್ಯಾನೆಟ್’ ಈ ವಿಷಯವಾಗಿ ಮೌನವಾಗಿದ್ದಾರೆ. ಇದರಿಂದ ಅವರ ದ್ವಿಮುಖ ನಿಲುವು ಗಮನಕ್ಕೆ ಬರುತ್ತದೆ !