‘ಸಿಸಿಟಿವಿ’ ಕ್ಯಾಮೆರಾದ ಮೂಲಕ ಚೀನಾ ಬೇಹುಗಾರಿಕೆ ಮಾಡುತ್ತಿರುವುದರಿಂದ ಅದನ್ನು ನಿಷೇಧಿಸಿರಿ !

ಅರುಣಾಚಲ ಪ್ರದೇಶದ ಸಂಸದರಿಂದ ಪ್ರಧಾನ ಮಂತ್ರಿ ಮೋದಿ ಬಳಿ ಮನವಿ !

ಈಟಾನಗರ (ಅರುಣಾಚಲ ಪ್ರದೇಶ) – ಭಾರತಕ್ಕೆ ಚೀನಾದಿಂದ ಕೇವಲ ಗಡಿಯಲ್ಲಿ ಅಷ್ಟೇ ಅಪಾಯವಲ್ಲ. ಅದು ದೇಶದಲ್ಲಿನ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧ ಪಟ್ಟ ಮೂಲಭೂತ ಸೌಲಭ್ಯಗಳ ಮೇಲೆ ಕೂಡ ದಾಳಿ ಮಾಡಿದೆ. ಚೀನಾದ ನಕಲಿ ‘ಸಿಸಿಟಿವಿ’ ಕ್ಯಾಮೆರಾಗಳನ್ನು ನಿಷೇಧಿಸಬೇಕು. ಸರಕಾರಿ ಕಾರ್ಯಾಲಯದಲ್ಲಿ ಚೀನಾದ ಸಿಸಿಟಿವಿ ಉಪಯೋಗಿಸಬಾರದು ಹಾಗೂ ಸಾಮಾನ್ಯ ಜನರಿಗೂ ಕೂಡ ಅದರ ಉಪಯೋಗ ಮಾಡದಿರಲು ಸೂಚನೆ ನೀಡಬೇಕೆಂದು, ಮಾಜಿ ಕೇಂದ್ರ ಸಚಿವ ಮತ್ತು ಅರುಣಾಚಲ ಪ್ರದೇಶ ರಾಜ್ಯದಲ್ಲಿನ ಪಾಸಿಘಾಟ ಪಶ್ಚಿಮ ಕಾಂಗ್ರೆಸ್ಸಿನ ಸಂಸದ ನಿನೊಂಗ ಎರಿಂಗ ಇವರು ಪತ್ರದ ಮೂಲಕ ಪ್ರಧಾನ ಮಂತ್ರಿ ಮೋದಿ ಅವರ ಬಳಿ ಬೇಡಿಕೆ ಸಲ್ಲಿಸಿದ್ದಾರೆ. ಒಂದು ಅನುಮಾನದ ಪ್ರಕಾರ ಭಾರತದಲ್ಲಿ ಸರಿಸುಮಾರು ೨೦ ಲಕ್ಷ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು ಅದರಲ್ಲಿನ ಶೇಕಡ ೯೦ ಎಂದರೆ ನೀವ್ವಳ ೧೮ ಲಕ್ಷ ಚೀನಾದ ನಕಲಿ ಕ್ಯಾಮೆರಾ ಇದೆ. ವಿಶೇಷ ಎಂದರೆ ಭಾರತದ ಸರಕಾರಿ ಕಾರ್ಯಾಲಯದಲ್ಲಿ ಕೂಡ ಈ ರೀತಿಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಸಂಸದ ಎರಿಂಗ್ ಇವರು ಮಾತು ಮುಂದುವರಿಸಿ,

೧. ಈ ಕ್ಯಾಮೆರಾವನ್ನು ಚೀನಾವು ಬೇಹುಗಾರಿಕೆಗಾಗಿ ಉಪಯೋಗ ಮಾಡಬಹುದು. ಈ ಕ್ಯಾಮೆರಾ ಚೀನಾದ ಕಣ್ಣು ಮತ್ತು ಕಿವಿಯ ರೀತಿಯಲ್ಲಿ ಉಪಯೋಗಿಸಬಹುದು.

೨. ಸದ್ಯದ ಕಾನೂನು ಈ ರೀತಿಯ ಆಹ್ವಾನಗಳ ಎದುರಿಸಲು ಸಮರ್ಥವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತದಿಂದ ದೃಢವಾದ ಹೆಜ್ಜೆ ಇಡುವ ಅವಶ್ಯಕತೆ ಇದೆ.

೩. ಅಮೇರಿಕಾದ ಒಂದು ಗುಪ್ತಚರ ಕಂಪನಿ, ಚೀನಾದ ‘ಹ್ಯಾಕರ್’ ಜಗತ್ತಿಗೆ ಅಪಾಯಕಾರಿಯಾಗಿದೆ. ಹ್ಯಾಕರ್ಸ್ ಪ್ರಸ್ತುತ ಉತ್ತರ ಭಾರತದ ಮೇಲೆ ಗಮನ ಕೇಂದ್ರೀಕರಿಸಿದೆ.