ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ರದ್ದು ಗೊಳಿಸಿರುವ ಪರಿಣಾಮ
ಶ್ರೀನಗರ (ಜಮ್ಮು ಕಾಶ್ಮೀರ) – ೨೦೧೯ ರಲ್ಲಿ ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಕಲಂ ೩೭೦ ರದ್ದುಪಡಿಸಿದ ನಂತರ ಕಳೆದ ೨ ವರ್ಷಗಳಲ್ಲಿ ಬಾಲಿವುಡ್ ನ ೨೦೦ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಿಗೆ ಅನುಮತಿ ನೀಡಲಾಗಿದೆ. ಇದು ಕಳೆದ ೩೪ ವರ್ಷಗಳ ಅತ್ಯುನ್ನತ ಸಂಖ್ಯೆಯಾಗಿದೆ.
೧. ೨೦೨೧ ರಲ್ಲಿ ಜಮ್ಮು ‘ಕಾಶ್ಮೀರ್ ಚಲನಚಿತ್ರ ವಿಕಾಸ ಪರಿಷತ್’ ನ ಸ್ಥಾಪನೆಯಾದ ನಂತರ ಚಲನಚಿತ್ರಗಳ ಚಿತ್ರೀಕರಣದಲ್ಲಿನ ಅಡಚಣೆಗಳ ದೂರವಾದವು.
೨. ಕಾಶ್ಮೀರದಲ್ಲಿನ ೯೦ ರ ದಶಕದ ಆರಂಭದಿಂದಲೇ ಹುಟ್ಟಿಕೊಂಡಿರುವ ಜಿಹಾದಿ ಭಯೋತ್ಪಾದನೆಯಿಂದ ಚಲನಚಿತ್ರಗಳ ಚಿತ್ರೀಕರಣ ಹೆಚ್ಚುಕಡಿಮೆ ನಿಂತುಹೋಗಿತ್ತು. ಈಗ ಅಲ್ಲಿಯ ಪರಿಸ್ಥಿತಿ ಬಹುತಾಂಶ ಸುಧಾರಿಸಿದೆ. ಬಾಲಿವುಡ್ ಸಹಿತ ದಕ್ಷಿಣ ಭಾರತದ ನಿರ್ಮಾಪಕರು ಕೂಡ ಅಲ್ಲಿ ಚಿತ್ರೀಕರಣಕ್ಕೆ ಹೋಗುತ್ತಿದ್ದಾರೆ. ಹಾಗೂ ಇದರಿಂದ ೧ ಸಾವಿರಕ್ಕಿಂತಲೂ ಹೆಚ್ಚಿನ ಸ್ಥಳೀಯ ಕಲಾವಿದರಿಗೆ ಸುಲಭವಾಗಿ ಕೆಲಸ ಸಿಕ್ಕಿದೆ.
೩. ನಿರ್ಮಾಪಕರು ಈಗ ಕಾಶ್ಮೀರದ ಗುಲ್ಬರ್ಗ, ಪಹಲಗಾಮ, ದಲ ಸರೋವರ ಇಂತಹ ಸಾಂಪ್ರದಾಯಿಕ ಸ್ಥಳಗಳ ಜೊತೆಗೆ ಬಾಂದೀಪೋರದಲ್ಲಿನ ಗುರೆಜ ಮತ್ತು ವುಲರ್, ದೂಧಪಥರಿ, ಯೋಶಮರ್ಗ ಮುಂತಾದ ಸ್ಥಳಗಳಲ್ಲಿ ಕೂಡ ಚಿತ್ರೀಕರಣ ನಡೆಸುತ್ತಿದೆ.
ಸಂಪಾದಕೀಯ ನಿಲುವು
|