ಭಾರತವು ಈಗ ಚೀನಾದ ಬದಲು ಜಪಾನ್‌ನಿಂದ ಹೆಚ್ಚಿನ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಿದೆ !

ನವದೆಹಲಿ – ಎಮ್.ಆರ್.ಐ., ಅಲ್ಟ್ರಾಸಾನಿಕ್ ಇತ್ಯಾದಿ ವೈದ್ಯಕೀಯ ಉಪಕರಣಗಳನ್ನು ಇನ್ನು ಮುಂದೆ ಜಪಾನ್‌ನಿಂದ ಖರೀದಿಸಲಾಗುವುದು ಎಂದು ಭಾರತವು ನಿರ್ಧರಿಸಿದೆ. ಈ ಹಿಂದೆ ಈ ಉಪಕರಣಗಳನ್ನು ಚೀನಾದಿಂದ ಖರೀದಿಸಲಾಗುತ್ತಿತ್ತು. ಈಗ ಚೀನೀ ಉಪಕರಣಗಳಿಗೆ ಹೋಲಿಸಿದರೆ ಉತ್ತಮ ಉಪಕರಣಗಳು ಸಿಗುತ್ತವೆ; ಏಕೆಂದರೆ ಚೀನಾದ ಉಪಕರಣಗಳಿಗೆ ಹೋಲಿಸಿದರೆ ಜಪಾನಿನ ಉಪಕರಣಗಳ ಗುಣಮಟ್ಟ ಉತ್ತಮವಾಗಿದೆ. ಈ ನಿರ್ಧಾರದಿಂದ ಚೀನಾಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಲಿದ್ದು, ಭಾರತದ ಮಿತ್ರ ಜಪಾನ್‌ ಗೆ ಲಾಭವಾಗಲಿದೆ. ಕೊರೊನಾದ ನಂತರ ಭಾರತವು ಚೀನಾದಿಂದ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ಭಾರತದ ಬೇಡಿಕೆಯ ಪ್ರಮಾಣವು 57 ಶೇ.ದಷ್ಟು ಹೆಚ್ಚಾಗಿದೆ.

ಅಮೇರಿಕಾ, ಬ್ರಿಟನ್, ಭಾರತ, ಸಿಂಗಾಪುರ ಮತ್ತು ಇತರ ದೇಶಗಳು ಆಧುನಿಕ ವೈದ್ಯಕೀಯ ಉಪಕರಣಗಳಿಗಾಗಿ ಚೀನಾವನ್ನು ಅವಲಂಬಿಸಬೇಕಾಗಿದೆ; ಏಕೆಂದರೆ ಹೆಚ್ಚಿನ ಉಪಕರಣಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ. ಮುಂದಿನ 5 ವರ್ಷಗಳಲ್ಲಿ ಈ ಉಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಜಪಾನ್‌ನಿಂದ ಅವುಗಳನ್ನು ಆಮದು ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ.