ಕಾಶಿಯ ಅನೇಕ ಪ್ರದೇಶಗಳಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವ ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ !

ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಬೆಂಬಲಿಗರ ಪ್ರಯತ್ನ !

ವಾರಣಾಸಿ (ಉತ್ತರಪ್ರದೇಶ) – ಇಲ್ಲಿಯ ಅಸ್ಸಿ ಘಾಟನಿಂದ ಸಿಗರಾ, ಲಹರತಾರಾ, ಘಂಟಿಮಿಲ ಮುಂತಾದ ಪ್ರದೇಶಗಳಲ್ಲಿ ಅನೇಕ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಇದರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಕುರಿತು ಮನವಿ ಮಾಡಲಾಗಿದೆ. ಈ ಭಿತ್ತಿಪತ್ರಗಳನ್ನು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಬೆಂಬಲಿಗರು ಅಂಟಿಸಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸರು ಈ ಭಿತ್ತಿಪತ್ರಗಳ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

ವಾರಣಾಸಿಯ ಧೀರೇಂಧ್ರಕೃಷ್ಣ ಶಾಸ್ತ್ರಿಯವರ ಬೆಂಬಲಿಗರಾದ ಆಲೋಕ ಯೋಗಿಯವರು ಮಾತನಾಡುತ್ತಾ, ಕಾಶಿಯಲ್ಲಿ 1 ಸಾವಿರಕ್ಕಿಂತಲೂ ಹೆಚ್ಚು ಬೆಂಬಲಿಗರು ವಿವಿಧ ಪ್ರದೇಶಗಳಲ್ಲಿ ಈ ಭಿತ್ತಿಪತ್ರಗಳನ್ನು ಅಂಟಿಸುತ್ತಿದ್ದಾರೆ. ನಾವು ಈ ಮೂಲಕ, ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಕೇಂದ್ರ ಸರಕಾರದ ಬಳಿ ಮನವಿ ಮಾಡುತ್ತಿದ್ದೇವೆ, ಎಂದು ಹೇಳಿದ್ದಾರೆ.