ಸಿಸಿಟಿವಿಗೆ ಸುಣ್ಣ ಬಳಿದು ಕಳ್ಳರಿಂದ ಹಣ ಲೂಟಿ !

  • ನಾಸಿಕ್ ನ ಸಪ್ತಶೃಂಗಿದೇವಿಯ ದೇಗುಲ ಖೇದಕರ ಘಟನೆ !

  • 20 ದಿನ ಕಳೆದರೂ ಯಾವುದೇ ಅಪರಾಧ ದಾಖಲಾಗಿಲ್ಲ !

ನಾಸಿಕ್ – ಇಲ್ಲಿನ ಸಪ್ತಶೃಂಗಿದೇವಿ ದೇವಸ್ಥಾನದಲ್ಲಿರುವ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಅವರು ಸಿಸಿಟಿವಿ ಕ್ಯಾಮೆರಾಗಳಿಗೆ ಸುಣ್ಣ ಬಳಿದು ಈ ಕೃತ್ಯ ಎಸಗಿದ್ದಾರೆ. ಈ ಘಟನೆ ನಡೆದು 20 ದಿನ ಕಳೆದರೂ ಯಾವುದೇ ಪ್ರಕರಣ ದಾಖಲಾಗಿಲ್ಲ. (ಇದು ಹಿಂದೂಗಳ ನಿಷ್ಕ್ರಿಯತೆಯ ಪರಿಣಾಮ ! ಅನ್ಯ ಧರ್ಮೀಯರ ಶ್ರದ್ಧಾಸ್ಥಾನಗಳಲ್ಲಿ ಹೀಗೇ ಆಗಿದ್ದರೆ ಇಲ್ಲಿಯವರೆಗೆ ಬೀದಿಗಿಳಿಯುತ್ತಿದ್ದರು ! – ಸಂಪಾದಕರು) ದೇವಸ್ಥಾನದ ಸುತ್ತಮುತ್ತಲಿನ ವಿವಿಧೆಡೆ ಕಾಣಿಕೆ ಡಬ್ಬಿಗಳನ್ನು ಇಡಲಾಗಿದೆ. ಅದರಲ್ಲಿ ಒಂದು ಕಾಣಿಕೆ ಡಬ್ಬಿಯಲ್ಲಿದ್ದ ಮೊತ್ತವನ್ನು ಕಳವು ಮಾಡಲಾಗಿದೆ. ಎಷ್ಟು ಹಣ ಕದ್ದಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕಾಣಿಕೆ ಪೆಟ್ಟಿಗೆಯಲ್ಲಿ ಭಕ್ತರು ಹಾಕಿದ್ದ ಹಲವು ನೋಟುಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ದೇವಸ್ಥಾನದ ಧರ್ಮದರ್ಶಿ ದೀಪಕ್ ಪಟೋದಕರ್ ಇವರು ದೇವಸ್ಥಾನದ ಸಂಸ್ಥೆಯ ಅಧ್ಯಕ್ಷರಿಗೆ ಪತ್ರ ಬರೆದು ಕೂಡಲೇ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ. ಅವರು, ”ಸಪ್ತಶೃಂಗಿದೇವಿ ದೇವಸ್ಥಾನದ ಪರಿಸರದಲ್ಲಿರುವ ಕಾಣಿಕೆ ಹುಂಡಿಯಲ್ಲಿದ್ದ ಹಣ ದೋಚಿರುವ ಘಟನೆ ತೀವ್ರ ಖಂಡನೀಯವಾಗಿದೆ. ಇಷ್ಟು ದೊಡ್ಡ ಸಂಬಳ ನೀಡಿ ನೇಮಿಸಿದ ಭದ್ರತಾ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿರುವಾಗಲೂ ದೇವಸ್ಥಾನ ಪರಿಸರದಲ್ಲಿ ಈ ರೀತಿ ಘಟಿಸುವುದು ತುಂಬಾ ಗಂಭೀರವಾಗಿದೆ. ಈ ಪ್ರಕರಣದಲ್ಲಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಬೇಕು.” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳೇ, ದೇವಸ್ಥಾನಗಳಲ್ಲಿ ಆಗಾಗ ನಡೆಯುವ ಕಳ್ಳತನವನ್ನು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವಾರ್ಯ ಎಂಬುದನ್ನು ಗಮನದಲ್ಲಿಡಿ ಹಾಗೂ ಅದಕ್ಕಾಗಿ ಸಂಘಟಿತರಾಗಿ !