ಕೋರೋನಾ ನೈಸರ್ಗಿಕ ಅಲ್ಲ, ಅದು ಜೈವಿಕ ಯುದ್ಧವಾಗಿತ್ತು ! – ಶ್ರೀ ಶ್ರೀ ರವಿಶಂಕರ ಗುರುಜೀ

ನವ ದೆಹಲಿ – ಸಂಪೂರ್ಣ ಜಗತ್ತು ಕೊರೋನಾದ ಜೊತೆಗೆ ಹೋರಾಡಬೇಕಾಯಿತು. ಜನರು ೨ ವರ್ಷಗಳ ಕಾಲ ಮನೆಯಲ್ಲಿಯೇ ಉಳಿದರು. ಕೊರೊನಾದ ಪ್ರಭಾವದ ಬಗ್ಗೆ ನಾನು ಆ ಸಮಯದಲ್ಲಿ, ಈ ಕಾಯಲೆ ನೈಸರ್ಗಿಕವಾಗಿಲ್ಲ. ಇದು ಕೆಲವು ದೇಶಗಳ ಮತ್ತು ಜನಗಳ ಷಡ್ಯಂತ್ರವಾಗಿತ್ತು,ಇದು ಜೈವಿಕ ಯುದ್ಧವಾಗಿತ್ತು. ಎಂದು ಹೇಳಿದ್ದೆ. ನನ್ನ ಶಿಷ್ಯರು ನನಗೆ ಮಾತನಾಡದಿರಲು ಸಲಹೆ ನೀಡಿದ್ದರು; ಕಾರಣ ಅದರಿಂದ ವಿವಾದ ನಿರ್ಮಾಣವಾಗುತ್ತಿತ್ತು. ನಾನು ಏನು ಹೇಳುತ್ತಿದ್ದೇನೆ, ಅದು ಈಗ ಸಾಬೀತಾಗಿದೆ, ಎಂದು ‘ಆರ್ಟ್ ಆಫ್ ಲಿವಿಂಗ್’ನ ಶ್ರೀ ಶ್ರೀ ರವಿಶಂಕರ ಗುರುಜೀ ಅವರು ಒಂದು ಪ್ರವಚನದಲ್ಲಿ ದಾವೆ ಮಾಡಿದ್ದಾರೆ. ‘ದೊಡ್ಡ ದೇಶಗಳು, ಕೊರೋನಾದ ಪ್ರತಿರೋಧಕ ಲಸಿಕೆ ಅಷ್ಟೇನು ಪರಿಣಾಮಕಾರಿ ಸಿದ್ಧವಾಗಲಿಲ್ಲ. ಆದ್ದರಿಂದ ಸಂಕ್ರಮಣ ಹರಡುವುದು ನಿಲ್ಲುತ್ತಿಲ್ಲ ಎಂದು ಹೇಳುತ್ತಿತ್ತು, ಎಂದೂ ಸಹ ಶ್ರೀ ಶ್ರೀ ರವೀಶಂಕರ ಇವರು ಹೇಳಿದರು.

ಶ್ರೀ ಶ್ರೀ ರವಿಶಂಕರ ಗುರುಜೀ ಇವರು, ಆಯುರ್ವೇದದ ಔಷಧಿಗಳನ್ನು ಉಪಯೋಗಿಸಬೇಕೆಂದು ನನಗೆ ಅನಿಸುತ್ತದೆ ಮತ್ತು ಅದಕ್ಕಾಗಿ ‘ಎನ್. ಎ.ಒ.ಕ್ಯು. ೧೯’ ಔಷಧ ತಯಾರಿಸಿದೆ ಮತ್ತು ೧೪ ಆಸ್ಪತ್ರೆಗಳಲ್ಲಿ ಅದನ್ನು ಪರೀಕ್ಷಿಸಲಾಗಿದೆ. ಈ ಔಷಧ ಈಗ ಕೊರೊನಾದ ಚಿಕಿತ್ಸೆಗಾಗಿ ಉಪಯೋಗಕ್ಕೆ ಬರುತ್ತದೆ. ಈ ಔಷಧ ಈಗ ವಿದೇಶದಲ್ಲಿನ ಅನೇಕ ದೊಡ್ಡ ವಿಶ್ವವಿದ್ಯಾಲಯಗಳಿಗೆ ಕಳುಹಿಸಿದ್ದೇವೆ. ಅಲ್ಲಿಯ ಜನರಿಗೆ, ಈ ಔಷಧ ಕೊರೊನಾ ತಡೆಯುವುದರಲ್ಲಿ ಯಶಸ್ವಿಯಾಗುವುದು ಎಂದು ಹೇಳಿದೆ. ‘ನಮ್ಮ ದೇಶದ ಯೋಗ ಮತ್ತು ಆಯುರ್ವೇದ ಇದರ ಬಗ್ಗೆ ನಮಗೆ ಶ್ರದ್ಧೆಬೇಕು’, ಎಂದು ಕೂಡ ಶ್ರೀ ಶ್ರೀ ರವಿಶಂಕರ ಇವರು ಹೇಳಿದರು.