ಚೂರಿಯಿಂದ ದಾಳಿ ಮಾಡಿದ ಭಾರತೀಯ ನಾಗರಿಕ ಮಹಮ್ಮದ ಅಹಮ್ಮದನನ್ನು ಆಸ್ಟ್ರೇಲಿಯಾ ಪೊಲೀಸರಿಂದ ಹತ್ಯೆ !

ಸಿಡ್ನಿ- ಆಸ್ಟ್ರೇಲಿಯಾ ಪೊಲೀಸರು ಓರ್ವ 32 ವರ್ಷದ ಭಾರತೀಯ ನಾಗರಿಕನನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಮಹಮ್ಮದ ರಹಮತುಲ್ಲಾ ಸಯ್ಯದ ಅಹಮ್ಮದ ಎಂಬ ವ್ಯಕ್ತಿಯ ಹೆಸರಾಗಿದೆ. ಈ ಘಟನೆ ಫೆಬ್ರುವರಿ 28 ರಂದು ರಾತ್ರಿ 12 ಗಂಟೆಯ ನಡೆದಿದೆ. ಮಹಮ್ಮದ ಮೂಲತಃ ಭಾರತದ ತಮಿಳುನಾಡಿನ ನಿವಾಸಿಯಾಗಿದ್ದಾನೆ. ಮಹಮ್ಮದನು ಸಿಡ್ನಿ ರೈಲು ನಿಲ್ದಾಣದಲ್ಲಿ ಓರ್ವ ನೌಕರನ ಮೇಲೆ ಚೂರಿಯಿಂದ ದಾಳಿ ನಡೆಸಿ, ತದನಂತರ ಇಬ್ಬರು ಪೊಲೀಸರಿಗೂ ಚೂರಿಯಿಂದ ಬೆದರಿಸಿದ್ದಾನೆ ಎಂದು ಆಸ್ಟ್ರೇಲಿಯಾ ಪೊಲೀಸರು ಆರೋಪ ಹೊರಿಸಿದ್ದರು. ಮೊದಲು ಪೊಲೀಸರು ಅವನನ್ನು ತಿಳುವಳಿಕೆ ಹೇಳಲು ಪ್ರಯತ್ನಿಸಿದರು. ಆದರೂ ಪರಿಸ್ಥಿತಿ ಕೈಮೀರಿ ಹೋಗುತ್ತಿರುವದನ್ನು ಗಮನಿಸಿ ಪೊಲೀಸರು ಅವನ ಮೇಲೆ 3 ಗುಂಡುಗಳನ್ನು ಹಾರಿಸಿದರು. ಈ ಘಟನೆಯಲ್ಲಿ ಅವನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು.

ಸಂಪಾದಕೀಯ ನಿಲುವು

  • ಭಾರತದಲ್ಲಿ ಇಂತಹ ಘಟನೆ ನಡೆದಿದ್ದರೆ, ಪೊಲೀಸರು ಆರೋಪಿಯನ್ನು ಹತ್ಯೆ ಮಾಡುತ್ತಿರಲಿಲ್ಲ ! ಆಸ್ಟ್ರೇಲಿಯಾದಲ್ಲಿ ಆರೋಪಿಯ ಬದಲಾಗಿ ನಾಗರಿಕರ ಜೀವದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ ಎನ್ನುವುದು ಇದರಿಂದ ಕಂಡು ಬರುತ್ತದೆ !
  • ಮತಾಂಧರು ಎಲ್ಲೇ ಇದ್ದರೂ, ತನ್ನ ಅಪರಾಧ ವೃತ್ತಿಯಂತೆಯೇ ನಡೆದುಕೊಳ್ಳುತ್ತಾರೆ ಎಂದು ಯಾರಾದರೂ ಈ ಘಟನೆಯ ಬಗ್ಗೆ ಹೇಳಿದರೆ ಆಶ್ಚರ್ಯ ಪಡಬಾರದು !