ಕಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗಿದೆ ಎಂದು ಸರಕಾರ ಹೇಳುತ್ತಿದೆ, ಹಾಗಾದರೆ ಶರ್ಮಾ ಇವರ ಹತ್ಯೆ ಯಾರು ಮಾಡಿದರು ? (ಅಂತೆ) – ಮೆಹಬೂಬ್ ಮುಫ್ತಿ

ಕಾಶ್ಮೀರಿ ಹಿಂದುಗಳ ಹತ್ಯೆಯ ನಂತರ ಮೆಹಬೂಬ್ ಮುಫ್ತಿ ಇವರ ಮೊಸಳೆ ಕಣ್ಣೀರು !

ಶ್ರೀನಗರ (ಜಮ್ಮು ಕಾಶ್ಮೀರ) – ಪೀಪಲ್ಸ್ ಡೆಮೋಕ್ರೊಟಿಕ್ ಪಾರ್ಟಿಯ (ಪಿ.ಡಿ.ಪಿ.ಯ) ಅಧ್ಯಕ್ಷ ಮೆಹಬೂಬ ಮುಫ್ತಿ ಇವರು ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂ ಸಂಜಯ ಶರ್ಮ ಇವರನ್ನು ಭಯೋತ್ಪಾದಕರು ಹತ್ಯೆ ಮಾಡಿದ ನಂತರ ದುಃಖ ವ್ಯಕ್ತಪಡಿಸುತ್ತಾ ‘ಶರ್ಮಾ ಇವರ ಹತ್ಯೆಯ ಬಗ್ಗೆ ಮುಸಲ್ಮಾನರಿಗೆ ನಾಚಿಕೆ ಆಗುತ್ತಿದೆ. ಕೇಂದ್ರ ಸರಕಾರ ಭಯೋತ್ಪಾದನೆ ನಾಶವಾಗಿದೆ ಎಂದು ದಾವೆ ಮಾಡುತ್ತದೆ. ಹಾಗಿದ್ದರೆ, ಶರ್ಮಾ ಇವರನ್ನು ಯಾರು ಹತ್ಯೆ ಮಾಡಿದರು ? ಸರಕಾರ ಏನು ಮಾಡುತ್ತಿದೆ ? ಎಂದು ಪ್ರಶ್ನೆ ಕೇಳಿದರು. ‘ಸರಕಾರದಿಂದ ಶರ್ಮ ಇವರ ಪತ್ನಿಗೆ ನೌಕರಿ ನೀಡಬೇಕು’, ಎಂದು ಒತ್ತಾಯಿಸಿದರು.

ಮೆಹಬೂಬ ಮುಫ್ತಿ ಮಾತು ಮುಂದುವರೆಸಿ, ೧೯೪೭ ರಲ್ಲಿ ಕಾಶ್ಮೀರದಲ್ಲಿ ವಾಸಿಸುವ ಹಿಂದೂ ಮತ್ತು ಸಿಖ್ಖರ ರಕ್ಷಣೆಗಾಗಿ ಏನೆಲ್ಲಾ ಮಾಡಿದವರು ನಾವೇ ಆಗಿದ್ದೇವೆ. ಆ ಸಮಯದಲ್ಲಿ ಭಾರತದಲ್ಲಿ ಧಾರ್ಮಿಕ ಗಲಭೆ ನಡೆಯುತ್ತಿದ್ದವು. ಇಂದು ಕಾಶ್ಮೀರಿ ಮುಸಲ್ಮಾನ್ ಅಸಹಾಯಕನಾಗಿದ್ದಾನೆ. ಅವರು ಮೋಸ ಹೋಗಿದ್ದಾರೆ. ಒಂದು ಕಡೆಗೆ ಸರಕಾರದ ದಬ್ಬಾಳಿಕೆ, ಇನ್ನೊಂದು ಕಡೆ ಭಯೋತ್ಪಾದನೆ ನಾಶದ ಹೆಸರಿನಲ್ಲಿ ಸಾವಿರಾರು ಯುವಕರನ್ನು ಜೈಲಿಗೆ ಕಳುಹಿಸಿದ್ದಾರೆ. ಜನರ ಮನೆಗಳಿಗೆ ಬೇಗ ಮುದ್ರೆ ಹಾಕುತ್ತಿದ್ದಾರೆ. ದಾಳಿಗಳು ನಡೆಸುತ್ತಿದ್ದಾರೆ.

(ಜಿಹಾದಿ ಭಯೋತ್ಪಾದಕರ ಹತ್ಯೆಯ ನಂತರ ಅಂತ್ಯ ಸಂಸ್ಕಾರಕ್ಕೆ ಹೋಗುವ ಸಾವಿರಾರು ಜನರ ಬಗ್ಗೆ ಮೆಹಬೂಬ್ ಮುಫ್ತಿ ಏಕೆ ಮಾತನಾಡುವುದಿಲ್ಲ ? ಸೈನ್ಯದ ಜೊತೆಯ ಚಕಮಕಿಯಲ್ಲಿ ನಡೆಯುವ ಭಯೋತ್ಪಾದಕರನ್ನು ಬೆಂಬಲಿಸುತ್ತಾ ಸೈನಿಕರ ಮೇಲೆ ಕಲ್ಲು ತೂರಾಟದ ಬಗ್ಗೆ ಅವರು ಏಕೆ ಮಾತನಾಡುವುದಿಲ್ಲ ? – ಸಂಪಾದಕರು)

ಸಂಪಾದಕೀಯ ನಿಲುವು

ಇದರ ಉತ್ತರ ಸರಕಾರ ನೀಡಲೇಬೇಕು; ಆದರೆ ಈ ಪ್ರಶ್ನೆಯ ಹೆಸರಿನಲ್ಲಿ ಕಾಶ್ಮೀರಿ ಹಿಂದುಗಳ ಬಗ್ಗೆ ಕಾಳಜಿ ಇರುವುದಾಗಿ ತೋರಿಸುವ ಡೋಂಗಿ ಮೆಹಬೂಬ್ ಮುಫ್ತಿ ಇವರು ರಾಜ್ಯದಲ್ಲಿ ಅವರ ಸರಕಾರ ಇರುವಾಗ ಏನೇನು ಮಾಡಿದರು, ಅದನ್ನು ಕೂಡ ಹೇಳಬೇಕು ! ಕಲ್ಲು ತೂರಾಟ ನಡೆಸುವ ಸಾವಿರಾರು ಜನರ ವಿರುದ್ಧ ಇರುವ ದೂರುಗಳನ್ನು ಏಕೆ ಹಿಂಪಡೆದಿದ್ದರು, ಅದನ್ನು ಕೂಡ ಹೇಳಬೇಕು !