ಹಿಂದೂಯೇತರ ಕಂದಾಯ ಅಧಿಕಾರಿ ರೇಷ್ಮಾ ಲಖಾನಿ ಪುರಿ ಜಗನ್ನಾಥ ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶ !

ರೇಷ್ಮಾ ಇವರಿಗೆ ನಿಯಮ ಹೇಳುವ ಪ್ರಯತ್ನ ಮಾಡಿರುವ ಅಧಿಕಾರಿಯ ವರ್ಗಾವಣೆ !

ಐ.ಆರ್.ಎಸ್. ಅಧಿಕಾರಿ ರೇಷ್ಮಾ ಲಖಾನಿ

ಪುರಿ (ಒಡಿಶಾ) – ಇಲ್ಲಿಯ ಐ.ಆರ್.ಎಸ್. (ಭಾರತೀಯ ಕಂದಾಯ ಇಲಾಖೆ) ಅಧಿಕಾರಿ ರೇಷ್ಮಾ ಲಖಾನಿ ಇವರು ಇಲ್ಲಿಯ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಬಲವಂತವಾಗಿ ಪ್ರವೇಶ ಮಾಡಿದರು. ಆ ಸಮಯದಲ್ಲಿ ಅಧಿಕಾರಿ ರೋಷನ್ ಯಾದವ ಇವರು ಅವರಿಗೆ ಈ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧ ಇರುವ ಬಗ್ಗೆ ಹೇಳಲು ಪ್ರಯತ್ನಿಸಿದರು ಕೂಡ ರೇಷ್ಮಾ ಇವರು ಅವರ ಮಾತು ಕೇಳದೇ ದೇವಸ್ಥಾನದಲ್ಲಿ ಪ್ರವೇಶ ಮಾಡಿದರು. ಹಾಗೂ ನಂತರ ರೋಷನ್ ಯಾದವ್ ಇವರನ್ನು ಪುರಿಯಿಂದ ೪೦೦ ಕಿಲೋಮೀಟರ್ ದೂರದಲ್ಲಿ ವರ್ಗಾವಣೆ ಮಾಡಿದ್ದಾರೆ. ಈ ಮಾಹಿತಿ ಬಹಿರಂಗವಾದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರ ಬಳಿ ರೇಷ್ಮಾ ಲಖಾನಿ ಇವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಯೇತರರಿಗೆ ಪ್ರವೇಶ ಇಲ್ಲದಿರುವ ದೇವಸ್ಥಾನದಲ್ಲಿ ಬಲವಂತವಾಗಿ ನುಗ್ಗುವ ಇಂತಹ ಅಧಿಕಾರಿಗಳಿಗೆ ಕೆಲಸದಿಂದ ವಚಗೊಳಿಸಬೇಕು ! ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವವರ ಮೇಲೆ ದೂರು ದಾಖಲಿಸಿ ಅವರಿಗೆ ಶಿಕ್ಷೆ ಕೂಡ ಆಗಬೇಕು !