ಹಿಂದೂ ಕುಟುಂಬವನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿಯ ಬಂಧನ

ಲಕ್ಷ್ಮಣಪುರಿ – ಉತ್ತರಪ್ರದೇಶ ರಾಜ್ಯದ ಜೌನಪುರ ಜಿಲ್ಲೆಯ ಭಾಲೂವಾಹಿಯ ಬಡ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿ ಸುಜೀತ ಕುಮಾರ ಮತ್ತು ಅವನ 2 ಮಹಿಳಾ ಸಹಚರ ಟೀನಾ ವಿಶ್ವಕರ್ಮಾ ಮತ್ತು ಶಿವಾನಿ ಪಾಲ ಇವರನ್ನು ಪೊಲೀಸರು ಬಂಧಿಸಿದ್ದಾರೆ. ( ಮತಾಂತರಗೊಂಡ ಕ್ರೈಸ್ತರು ಹಿಂದೂ ಹೆಸರನ್ನು ಹಾಗೆ ಇಡುತ್ತಾರೆ. ಹೀಗೆ ಮಾಡಿದರೆ ಅವರಿಗೆ ಹಿಂದೂ ಸಮಾಜದಲ್ಲಿ ಬೆರೆತು ಹಿಂದೂಗಳ ಬ್ರೈನ್ ವಾಶ್ ಮಾಡಲು ಸುಲಭವಾಗುತ್ತದೆ, ಇದನ್ನು ಅರಿಯಿರಿ ! – ಸಂಪಾದಕರು)

ಪೊಲೀಸರು ಈ ಪರಿಸರದಲ್ಲಿ ನಿಯಮಿತ ಗಸ್ತು ಮಾಡುತ್ತಿರುವಾಗ ಬಜರಂಗದಳದ ಕಾರ್ಯಕರ್ತರು ಕಾಂತಿದೇವಿಯ ಮನೆಯ ಸದಸ್ಯರನ್ನು ಮತಾಂತರಗೊಳಿಸಲಾಗುತ್ತಿದೆ’, ಎಂದು ಪೊಲೀಸರಿಗೆ ಮಾಹಿತಿ ನೀಡಿದರು. ಅದನ್ನು ಪರಿಗಣಿಸಿ ಪೊಲೀಸರು ಘಟನಾಸ್ಥಳಕ್ಕೆ ತಲುಪಿದರು ಮತ್ತು ಅವರು ಹಿಂದೂಗಳ ಮತಾಂತರವನ್ನು ತಡೆದು ಮೂವರನ್ನು ಬಂಧಿಸಿದ್ದಾರೆ. ಈ ಪರಿಸರದಲ್ಲಿ ವಾಸಿಸುವ ಒಂದು ಶಾಲೆಯ ಮುಖ್ಯಾಧ್ಯಾಪಕ ಹಿಂದೂಗಳ ಮತಾಂತರದ ಪ್ರಕ್ರಿಯೆಯಲ್ಲಿ ಸಕ್ರಿಯನಾಗಿದ್ದಾನೆಂದು ಹೇಳಲಾಗುತ್ತಿದೆ. ಅವನು ಸುಜೀತ ಕುಮಾರ ಹೆಸರಿನ ಪಾದ್ರಿಯನ್ನು ಇಟ್ಟುಕೊಂಡು ‘ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತೇವೆ’, ‘ನಿರಂತರವಾಗಿ ಆಹಾರ ಧಾನ್ಯ ನೀಡುತ್ತೇವೆ’, ಮುಂತಾದ ಆಮಿಷಗಳನ್ನು ತೋರಿಸಿ ಅವರ ಮತಾಂತರಗೊಳಿಸುತ್ತಿರುವ ಮಾಹಿತಿ ಬಹಿರಂಗವಾಗಿದೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿರುವಾಗಲೂ ಕ್ರೈಸ್ತರು ಅದಕ್ಕೆ ಬಗ್ಗದಿರುವುದು ಕಂಡು ಬಂದಿದೆ. ಇಂತಹವರನ್ನು ಸರಿಯಾದ ದಾರಿಗೆ ತರಲು ಈ ಕಾನೂನಿನಲ್ಲಿ ಇನ್ನೂ ಹೆಚ್ಚು ಕಠಿಣಗೊಳಿಸುವ ಆವಶ್ಯಕತೆಯಿದೆ !