ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರ ಸಿಬಿಐ ವಿಚಾರಣೆ

ದೆಹಲಿಯ ಸರಾಯಿ ಹಗರಣ ಪ್ರಕರಣ

ನವ ದೆಹಲಿ – ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರ ದೆಹಲಿಯಲ್ಲಿನ ಸರಾಯಿ ನೀತಿ ಹಗರಣದ ಪ್ರಕರಣದಲ್ಲಿ ಕೇಂದ್ರ ತನಿಖಾ ದಳದಿಂದ ವಿಚಾರಣೆ ಮಾಡಲಾಯಿತು. ಅದಕ್ಕೂ ಮೊದಲು ಸಿಸೋದಿಯ ಇವರು ರಾಜಘಟಗೆ ಹೋಗಿ ಮ. ಗಾಂಧಿ ಇವರ ಸಮಾಧಿಯ ದರ್ಶನ ಪಡೆದು ಅವರ ಬೆಂಬಲಿಗರೊಂದಿಗೆ ‘ರೋಡ್ ಶೋ’ ನಡೆಸಿದರು. ಆ ಸಮಯದಲ್ಲಿ ಪೊಲೀಸರು ಕಲಾಂ ೧೪೪ (ನಿಷೆಧಾಜ್ಞೆ) ಜಾರಿ ಮಾಡಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದರು.

ವಿಚಾರಣೆಯ ಬಗ್ಗೆ ಸಿಸೋದಿಯ, ನಾನು ಇಂದು ಮತ್ತೆ ಸಿಬಿಐ ಕಾರ್ಯಾಲಯಕ್ಕೆ ಹೋಗುತ್ತಿದ್ದೇನೆ. ಸಂಪೂರ್ಣ ತನಿಖೆಗೆ ನಾನು ಪೂರ್ಣ ಸಹಕಾರ ನೀಡುವೆನು. ನನಗೆ ಕೆಲವು ತಿಂಗಳು ಜೈಲಿನಲ್ಲಿ ಇರಬೇಕಾಗಬಹುದು, ಆದರೆ ನನಗೆ ಅದರ ಚಿಂತೆ ಇಲ್ಲ. ನಾನು ಭಗತ ಸಿಂಗ್ ಇವರ ಅನುಯಾಯಿ ಆಗಿದ್ದೇನೆ. ದೇಶಕ್ಕಾಗಿ ಭಗತ ಸಿಂಗ್ ಇವರು ಗಲ್ಲಿಗೇರಿದರು. ಹಗರಣದ ಸುಳ್ಳು ಆರೋಪದಿಂದ ಜೈಲಿಗೆ ಹೋಗುವುದು ಇದು ಬಹಳ ಸಣ್ಣ ವಿಷಯವಾಗಿದೆ ಎಂದು ಹೇಳಿದರು.