ಛತ್ತಿಸ್ ಗಡದಲ್ಲಿ ಮತ್ತೆ ನಡೆದಿರುವ ಮಾವೋವಾದಿ ದಾಳಿಯಲ್ಲಿ ೩ ಪೊಲೀಸರ ಸಾವು !

ಮಾವೋವಾದಿಗಳನ್ನು ಬೇರು ಸಹಿತ ನಾಶ ಮಾಡುವುದಕ್ಕೆ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಪ್ರಯತ್ನ ಮಾಡುವುದು ಅವಶ್ಯಕ !

ರಾಯಪುರು (ಛತ್ತೀಸ್ ಗಡ) – ಮೂರು ದಿನಗಳ ಹಿಂದೆ ಮಾವೋವಾದಿ ನಡೆಸಿರುವ ದಾಳಿಯಲ್ಲಿ ೨ ಪೊಲೀಸರು ಹತರಾಗಿದ್ದು ಈಗ ಮತ್ತೆ ಛತ್ತಿಸಗಡ ರಾಜ್ಯದಲ್ಲಿ ಸುಕಮಾ ಜಿಲ್ಲೆಯಲ್ಲಿ ಇರುವ ಕುಂದೇಡ ಹತ್ತಿರ ಮಾವೋವಾದಿಗಳು ನಡೆಸಿರುವ ದಾಳಿಯಲ್ಲಿ ೩ ಪೊಲೀಸರು ಹತ್ತರಾಗಿದ್ದಾರೆ.

ಪೊಲೀಸರು ಕಾರ್ಯಾಚರಣೆಗಾಗಿ ಹೊದಾಗ ಅಡುಗಿ ಕುಳಿತಿದ್ದ ಮಾವೋವಾದಿಗಳು ಪೊಲೀಸ ತಂಡದ ಮೇಲೆ ದಾಳಿ ಮಾಡಿದರು. ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ನಂತರ ಪೊಲೀಸರು ಕೂಡ ಮಾವೋವಾದಿಗಳಿಗೆ ಪ್ರತ್ಯುತ್ತರ ನೀಡಿದರು; ಆದರೆ ಇದರಲ್ಲಿ ೩ ಪೊಲೀಸರು ಸಾವನ್ನಪ್ಪಿದರು.