ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಸ್ಪಷ್ಟನೆ !
ಚಂದಿಗಡ – ‘ಸ್ವಯಂವರ’ ಎಂದರೆ ಸ್ವಂತ ಇಚ್ಛೆಯಿಂದ ವಿವಾಹ ಮಾಡಿಕೊಳ್ಳುವುದು’ ಇದು ಏನು ಆಧುನಿಕ ವಿಷಯವಲ್ಲ. ಇದರ ಬೇರು ಪ್ರಾಚೀನ ಇತಿಹಾಸದಲ್ಲಿ ಹುಡುಕಬಹುದು. ಇದರಲ್ಲಿ ರಾಮಾಯಣ, ಮಹಾಭಾರತದಂತಹ ಪವಿತ್ರ ಗ್ರಂಥಗಳ ಸಮಾವೇಶವಿದೆ. ನಮ್ಮ ಸಂವಿಧಾನದಲ್ಲಿ ಕಲಂ ೨೧ ಅಡಿಯಲ್ಲಿ ಮಾನವ ಹಕ್ಕುಗಳ ಮೂಲಭೂತ ಸ್ವಾತಂತ್ರ್ಯದ ಸ್ವರೂಪದಲ್ಲಿ ಜಾರಿ ಆಗುತ್ತದೆ, ಎಂದು ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದಿಂದ ಒಂದು ಮೊಕದ್ದಮೆಯ ವಿಚಾರಣೆಯ ವೇಳೆ ಅಭಿಪ್ರಾಯ ಮಂಡಿಸಿತು. ಈ ಮೋಕದ್ದಮೆಯಲ್ಲಿ ಓರ್ವ ಯುವಕನ ಮೇಲೆ ಪ್ರೇಯಸಿಯನ್ನು ಕರೆದುಕೊಂಡು ಹೋಗಿ ವಿವಾಹ ಮಾಡಿಕೊಂಡಿರುವ ಆರೋಪ ಮಾಡಿದ್ದರು. ನ್ಯಾಯಾಲಯವು ಈ ಆರೋಪದ ಬಗ್ಗೆ ಅಭಿಪ್ರಾಯ ಮಂಡಿಸುತ್ತಾ ತಿರಸ್ಕರಿಸಿದರು. ಉಚ್ಚ ನ್ಯಾಯಾಲಯವು, ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಒಂದು ಒಪ್ಪಂದವಲ್ಲ, ಅದು ಪವಿತ್ರ ಬಂಧನವಾಗಿದೆ. ವಿವಾಹ ಇದು ಕೇವಲ ವಿರುದ್ಧ ಲಿಂಗದ ವ್ಯಕ್ತಿಯ ಭೌತಿಕ ಮೀಲನವಲ್ಲ, ಅದು ಸಮಾಜದಲ್ಲಿನ ಮಹತ್ವಪೂರ್ಣ ಮತ್ತು ಪವಿತ್ರ ಸಂಸ್ಥೆಯಾಗಿದೆ. ಇಲ್ಲಿ ಎರಡು ಕುಟುಂಬಗಳು ಒಂದಾಗುತ್ತವೆ. ವಿವಾಹ ಮಾಡಿಕೊಳ್ಳದೆ ಹುಟ್ಟುವ ಸಂತಾನಕ್ಕೆ ವಿವಾಹಿತರಿಗೆ ಆಗುವ ಸಂತಾನದ ಹಾಗೆ ಮಾನ್ಯತೆ ದೊರೆಯುವುದಿಲ್ಲ. ಇದರಿಂದ ವಿವಾಹದ ಮಹತ್ವ ಹೆಚ್ಚು ಗಮನಕ್ಕೆ ಬರುತ್ತದೆ. ಯಾವುದಾದರೂ ಅಪರಾಧಿಗೆ ದಂಡ ನೀಡುವುದಕ್ಕಾಗಿ ಕಾನೂನಿನ ಉಪಯೋಗ ಆಗುತ್ತದೆ; ಆದರೆ ಯಾವುದಾದರೂ ಪ್ರಕರಣದಲ್ಲಿನ ವ್ಯಕ್ತಿ ಮಾಡಿರುವ ಕೆಲಸ ಇತರರಿಗೆ ಇಷ್ಟ ಆಗಲಿಲ್ಲ; ಆದ್ದರಿಂದ ಅವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ, ಎಂದೂ ಸಹ ಈ ಸಮಯದಲ್ಲಿ ನ್ಯಾಯಾಲಯವು ಸ್ಪಷ್ಟಪಡಿಸಿತು.
‘Swayamvar’ A Fundamental Right Under Article 21, Its Roots Can Be Traced To Ramayana, Mahabharata: Punjab & Haryana High Court @ISparshUpadhyay #PunjabandHaryanaHighCourt #Article21 #marriage https://t.co/JTiQeXPmIM
— Live Law (@LiveLawIndia) February 25, 2023