ಶಾಸಕ ಟಿ. ರಾಜಾಸಿಂಹ ಇವರಿಗೆ ಜೀವ ಬೆದರಿಕೆ !

  • ಪಾಕಿಸ್ತಾನ, ಇಂಡೋನೇಷ್ಯಾ ಮತ್ತು ಇಂಗ್ಲಂಡ್ ನಿಂದ ಬೆದರಿಕೆಯ ಕರೆ !

  • ಕೇಂದ್ರ ಭದ್ರತಾ ವ್ಯವಸ್ಥೆಯಿಂದ ರಕ್ಷಣೆ ನೀಡುವಂತೆ ರಾಜಾಸಿಂಗ್ ಇವರ ಆಗ್ರಹ

ಟಿ. ರಾಜಾಸಿಂಹ

ಭಾಗ್ಯನಗರ – ಇಲ್ಲಿಯ ಪ್ರಖರ ಹಿಂದುತ್ವನಿಷ್ಠ ಹಾಗೂ ಗೋಶಾಮಹಲ ವಿಧಾನಸಭಾ ಮತದಾರ ಕ್ಷೇತ್ರದ ಶಾಸಕ ಟಿ. ರಾಜಸಿಂಹ ಇವರಿಗೆ ವಿದೇಶದಿಂದ ಜೀವ ಬೆದರಿಕೆ ಬರುತ್ತಿದೆ. ಪಾಕಿಸ್ತಾನ್, ಇಂಡೋನೇಷ್ಯಾ ಮತ್ತು ಇಂಗ್ಲೆಂಡ್ ಇಲ್ಲಿಂದ ಬೆದರಿಕೆಯ ದೂರವಾಣಿ ಕರೆ ಬಂದಿದೆ. ”ಫೆಬ್ರವರಿ ೨೪ ರಂದು ನನಗೆ ಬೆದರಿಕೆ ನೀಡಿದ್ದಾರೆ. ಅದರಲ್ಲಿ ಆ ಬೆದರಿಕೆ ನೀಡುವ ವ್ಯಕ್ತಿಯು, ‘ನಾನು ನಿನಗಾಗಿ ಮೃತ್ಯು ಆಗಿದ್ದೇನೆ. ಯಾರು ನಿನ್ನ ಹತ್ಯೆ ಮಾಡುವವನು ಅವನೇ ನಾನು. ಸಾವಧಾನ ಇರು; ಕಾರಣ ನಾನು ನಿಮ್ಮಲ್ಲಿಯೆ ಇದ್ದೇನೆ. ನಾನು ನಿಮ್ಮ ದೇವರ ಹತ್ಯೆ ಮಾಡಿದಂತೆ ನಿನ್ನ ಹತ್ಯೆ ಮಾಡುವೆನು. ಮುಸಲ್ಮಾನರು ಎಂದು ಹತರಾಗುವುದಿಲ್ಲ. ನಿನ್ನ ಹೃದಯ ನನಗಾಗಿ ಒಳ್ಳೆಯ ಭೋಜನ ಇರುವುದು’, ಈ ರೀತಿಯ ಬೆದರಿಕೆ ನೀಡಿದ್ದಾರೆ, ಅಷ್ಟೇ ಅಲ್ಲದೆ, ಬೆದರಿಕೆ ನೀಡುವವನು, ‘ಓವೈಸಿ ಇವರ ಮತದಾರ ಕ್ಷೇತ್ರದಲ್ಲಿ ಕಾರ್ಯ ಚಟುವಟಿಕೆ ನಡೆಸುವ ಅನೇಕ ಗುಪ್ತ ದಳಗಳ ಕಾರ್ಯನಿರತವಾಗಿದೆ. ಸ್ವಲ್ಪ ದಿನದಲ್ಲೇ ನಿನ್ನ ಕೆಲಸ ಮುಗಿಯುತ್ತದೆ’, ಈ ರೀತಿಯ ಪದಗಳು ಉಪಯೋಗಿಸಿದ್ದಾನೆ.”

ಇದರ ಬಗ್ಗೆ ರಾಜಾಸಿಂಹ ಇವರಿಗೆ ಬೆದರಿಕೆ ನೀಡುವ ವ್ಯಕ್ತಿಯ ಸವಾಲನ್ನು ಸ್ವೀಕರಿಸಿ ಅವನಿಗೆ ಎದುರು ಬರುವಂತೆ ಕರೆ ನೀಡಿದರು. ಆಗ ಆ ವ್ಯಕ್ತಿ ಉತ್ತರ ನೀಡದೆ ರಾಜಾ ಸಿಂಹ ಇವರಿಗೆ ಬೆದರಿಕೆ ನೀಡುತ್ತಿದ್ದ. ಇದರ ಜೊತೆಗೆ ಆ ವ್ಯಕ್ತಿ ತನ್ನ ಹೆಸರು ಮತ್ತು ವಿಳಾಸ ನೀಡಲು ಕೂಡ ನಿರಾಕರಿಸಿದ್ದಾನೆ. ಅವನು ಹಿಂದೂ ಧರ್ಮದ ಅವಹೇಳನೆ ಮಾಡಿದ್ದಾನೆ ಎಂದು ರಾಜಸಿಂಹ ಇವರು ಮಾಹಿತಿ ನೀಡಿದರು. ರಾಜಸಿಂಹ ಇವರಿಗೆ ಕೇಂದ್ರ ಭದ್ರತಾ ವ್ಯವಸ್ಥೆಯಿಂದ ರಕ್ಷಣೆ ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ. ಇದರ ಜೊತೆಗೆ ತೆಲಂಗಾಣ ಸರಕಾರ ಅವರ ಹತ್ಯೆಯ ಷಡ್ಯಂತ್ರದಲ್ಲಿ ಸಹಭಾಗಿ ಇರುವುದರ ಬಗ್ಗೆ ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ರಾಷ್ಟ್ರದಲ್ಲಿ ಒಬ್ಬ ಹಿಂದುತ್ವ ನಿಷ್ಠನಿಗೆ ಈ ರೀತಿಯ ಬೆದರಿಕೆ ನೀಡುವುದು, ಇದು ಸಮಸ್ತ ಹಿಂದೂ ಮತ್ತು ಸರಕಾರಿ ವ್ಯವಸ್ಥೆಗೆ ಇದು ಲಜ್ಜಾಸ್ಪದ ! ಈ ಚಿತ್ರಣವನ್ನು ಬದಲಾಯಿಸುವುದಕ್ಕೆ ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !