ಖಲಿಸ್ತಾನಿ ಸಂಘಟನೆ ಮುಖ್ಯಸ್ಥ ಅಮೃತಪಾಲ್ ಸಿಂಗ್ ಸಹಚರನನ್ನು ಬಿಡುಗಡೆ ಮಾಡಿದ ಪೊಲೀಸರು !

ಖಲಿಸ್ತಾನದ ಎದುರಿಗೆ ಮಂಡಿಯೂರಿದ ಆಮ ಆದ್ಮಿ ಪಕ್ಷದ ಸರಕಾರದ ಪಂಜಾಬ ಪೊಲೀಸರು !

ಅಮೃತಸರ (ಪಂಜಾಬ) – ಇಲ್ಲಿಯ ಅಜಾನಲ ಪೊಲೀಸ ಠಾಣೆಯ ಪೊಲೀಸರು `ವಾರಿಸ ಪಂಜಾಬ ದೆ’ (ಪಂಜಾಬಿನ ವಾರಸುದಾರ) ಈ ಖಲಿಸ್ತಾನಿ ಸಂಘಟನೆಯ ಮುಖಂಡ ಅಮೃತಪಾಲ ಸಿಂಹನ ಸಹಚರ ಲವಪ್ರೀತ ತೂಫಾನ ಸಿಂಹನನ್ನು ಬಿಡುಗಡೆಗೊಳಿಸಿತು. ಫೆಬ್ರವರಿ 23 ರಂದು ಅವನ ಬಿಡುಗಡೆಗಾಗಿ ಸಾವಿರಾರು ಶಸ್ತ್ರ ಸಜ್ಜಿತ ಖಲಿಸ್ತಾನವಾದಿ ಸಿಖ್ಖರು ಈ ಪೊಲೀಸ ಠಾಣೆಗೆ ಘೇರಾವ್ ಹಾಕಿದ್ದರು. ಅವರು ಒತ್ತಡ ಹೇರಿದ್ದರಿಂದಲೇ ಲವಪ್ರೀತ ತೂಫಾನ ಸಿಂಹನನ್ನು ಬಿಡುಗಡೆಗೊಳಿಸಲಾಯಿತು. ಅವನು ಜೈಲಿನಿಂದ ಹೊರಗೆ ಬಂದಬಳಿಕ ಖಲಿಸ್ತಾನವಾದಿಗಳು ಅವನಿಗೆ ಹಾರ ಹಾಕಿ ಸ್ವಾಗತಿಸಿದರು. ಬಿಡುಗಡೆಯ ವಿಷಯದಲ್ಲಿ ಪೊಲೀಸ ಅಧೀಕ್ಷಕರು, ಲವಪ್ರೀತ ತೂಫಾನ ಸಿಂಹ ಈ ಅಪರಾಧದ ಸಮಯದಲ್ಲಿ ಉಪಸ್ಥಿತ ಇರಲಿಲ್ಲವೆಂದು ದಾಖಲೆಗಳನ್ನು ನೀಡಿದ್ದರಿಂದ ಅವನನ್ನು ಬಿಡುಗಡೆ ಮಾಡಲಾಯಿತು ಮತ್ತು (ಇದನ್ನು ಬೆರಳು ಚೀಪುವ ಮಗುವಾದರೂ ನಂಬುವುದೇ ? – ಸಂಪಾದಕರು) ನಾವು ಈ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವೆ ಎಂದು ಹೇಳಿದ್ದಾರೆ.

1. ಅಮೃತಪಾಲ ಸಿಂಹನ ಮತ್ತೊಬ್ಬ ಸಹಚರ ಪಪ್ಪಲ ಪ್ರೀತ ಸಿಂಹ, ಅಮೃತಪಾಲ ವೈಯಕ್ತಿಕ ಹೋರಾಟ ಹೋರಾಡುತ್ತಿಲ್ಲ, ಅವನು ಸಿಖ್ಖ ಸಮಾಜಕ್ಕಾಗಿ ಹೋರಾಡುತ್ತಿದ್ದಾನೆ. ತೂಫಾನನ ಬಿಡುಗಡೆಯ ಬಳಿಕ ನಾವು ಎಲ್ಲರೂ ಸುವರ್ಣ ಮಂದಿರದಲ್ಲಿ ದರ್ಶನಕ್ಕೆ ಹೋಗುವವರಿದ್ದೇವೆ.

2. ಅಮೃತಪಾಲ ಮತ್ತು ಅವನ ಸಹಚರರ ಮೇಲೆ ಹಲ್ಲೆಯ ಸಂದರ್ಭದ ಅಪರಾಧದ ವಿಚಾರಣೆಗಾಗಿ ವಿಶೇಷ ತನಿಖಾ ದಳದ ಸ್ಥಾಪನೆ ಮಾಡಲಾಗುವುದು.

ಸಂಪಾದಕರ ನಿಲುವು

* ಖಲಿಸ್ತಾನವಾದಿಗಳು ಪೊಲೀಸ ಠಾಣೆಗೆ ಸಾವಿರಾರು ಸಂಖ್ಯೆಯಲ್ಲಿ ಶಸ್ತ್ರ ಸಜ್ಜಿತರಾಗಿ ಘೇರಾವ್ ಹಾಕಿದ ಬಳಿಕ ಪೊಲೀಸರು ಈ ರೀತಿ ಹಿಂಜರಿಯುತ್ತಿದ್ದರೆ, ಖಲಿಸ್ತಾನವಾದಿಗಳ ಮನೋಸ್ಥೈರ್ಯ ಹೆಚ್ಚಿಸಿ ರಾಜ್ಯದಲ್ಲಿ ತಮ್ಮ ಆತಂಕದ ವಾತಾವರಣ ನಿರ್ಮಾಣವಾಗಲು ಸೊಪ್ಪು ಹಾಕುವಂತಿದೆ. ಇದನ್ನು ತಡೆಯಲು ಕೇಂದ್ರ ಸರಕಾರವು ಈಗಲಾದರೂ ಹಸ್ತಕ್ಷೇಪ ಮಾಡುವುದು ಆವಶ್ಯಕವಾಗಿದೆ !