`ಜಿಹಾದಿ ವಧು’ ಶಮೀಮಾ ಬೇಗಮನನ್ನು ನಾಗರಿಕತ್ವ ನೀಡಲು ಬ್ರಿಟನ ನಿರಾಕರಣೆ

ಇಸ್ಲಾಮಿಕ ಸ್ಟೇಟನ ಭಯೋತ್ಪಾದಕರೊಂದಿಗೆ ವಿವಾಹವಾಗಿರುವ ಪ್ರಕರಣ

ಲಂಡನ- ಇಸ್ಲಾಮಿಕ ಸ್ಟೇಟನ ಭಯೋತ್ಪಾದಕರೊಂದಿಗೆ ವಿವಾಹವಾಗಿದ್ದರಿಂದ `ಜಿಹಾದಿ ವಧು’ ಎಂದು ಗುರುತಿಸಲ್ಪಡುವ ಶಮೀಮಾ ಬೇಗಮಳಿಗೆ ನಾಗರಿಕತ್ವ ನೀಡಲು ಬ್ರಿಟನ ನಿರಾಕರಿಸಿದೆ. 2015 ರಲ್ಲಿ ಇಸ್ಲಾಮಿಕ ಸ್ಟೇಟನಲ್ಲಿ ಭಾಗವಹಿಸಲು ಅವಳು ಬ್ರಿಟನ ನಿಂದ ಸಿರಿಯಾಕ್ಕೆ ಹೋಗಿದ್ದಳು. ಸಿರಿಯಾದಲ್ಲಿ ಇಸ್ಲಾಮಿಕ ಸ್ಟೇಟನ ಭಯೋತ್ಪಾದಕರು ಜಗತ್ತಿನಾದ್ಯಂತ ಇರುವ ಮುಸಲ್ಮಾನ ಯುವತಿಯರನ್ನು `ಸಿರಿಯಾಕ್ಕೆ ಬಂದು ಇಸ್ಲಾಮಿಕ ಸ್ಟೇಟನ ಜಿಹಾದಿ ಭಯೋತ್ಪಾದಕರೊಂದಿಗೆ ವಿವಾಹರಾಗಿರಿ’ ಎಂದು ಕರೆ ನೀಡಿದ್ದರು. ತದನಂತರ ಅನೇಕ ದೇಶದ ಮತಾಂಧ ಯುವತಿಯರು ಸಿರಿಯಾಕ್ಕೆ ಪಲಾಯನ ಮಾಡಿದ್ದರು. ಶಮೀಮಾ ಬೇಗಮ ಅವರಲ್ಲಿ ಒಬ್ಬಳಾಗಿದ್ದಳು.

1. ಶಮೀಮಾ ಸಿರಿಯಾಕ್ಕೆ ಪಲಾಯನ ಮಾಡಿದ ಬಳಿಕ ಅವಳ ಬ್ರಿಟಿಶ ನಾಗರಿಕತ್ವವನ್ನು ಹಿಂಪಡೆಯಲಾಗಿತ್ತು. ಇದರ ವಿರುದ್ಧ ಶಮಿಮಾ ಬ್ರಿಟಿಶ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದಳು.

2. `ಶಮಿಮಾ ಬ್ರಿಟಿಶ ನಾಗರಿಕತ್ವ ಹಿಂಪಡೆದುಕೊಳ್ಳುವ ಗೃಹಖಾತೆಯ ನಿರ್ಣಯ ಯೋಗ್ಯವಾಗಿದ್ದು, ಅದನ್ನು ಸ್ಥಗಿತಗೊಳಿಸುವ ಆದೇಶ ನೀಡುವುದಿಲ್ಲವೆಂದು’ ಬ್ರಿಟನ ನ್ಯಾಯಾಲಯ ಹೇಳಿದೆ.

3. ಸಿರಿಯಾದ ಇಸ್ಲಾಮಿಕ ಸ್ಟೇಟ ನ ಅಲೆ ನಿಧಾನವಾಗಿ ಕಡಿಮೆಯಾಗತೊಡಗಿದ ಬಳಿಕ ಸಧ್ಯಕ್ಕೆ ಶಮೀಮಾ ಸಿರಿಯಾದ ನಿರ್ವಸಿತ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಅವಳಿಗೆ 2 ಮಕ್ಕಳಿದ್ದಾರೆ. ಅವಳು ಅನೇಕ ಬಾರಿ ಬ್ರಿಟಿಶ ಸರಕಾರದ ಕ್ಷಮೆ ಕೋರಿ ಬ್ರಿಟಿಶ ನಾಗರಿಕತ್ವ ನೀಡುವಂತೆ ಕೋರಿದ್ದಳು; ಆದರೆ ಬ್ರಿಟಿಶ ಸರಕಾರವು ಅವಳ ಬೇಡಿಕೆಯನ್ನು ಮೇಲಿಂದ ಮೇಲೆ ನಿರಾಕರಿಸಿತ್ತು.

ಸಂಪಾದಕೀಯ ನಿಲುವು

ಭಯೋತ್ಪಾದಕನೊಂದಿಗೆ ವಿವಾಹ ಆಗಿರುವ ಯುವತಿಯ ವಿರುದ್ಧ ಕಠೀಣ ಧೋರಣೆಯನ್ನು ತೆಗೆದುಕೊಂಡಿರುವ ಬ್ರಿಟನ್ ನಿಂದ ಭಾರತ ಪಾಠ ಕಲಿಯಬೇಕು.