ಶ್ರೀ ಕಾಶಿ ವಿಶ್ವನಾಥನ ಮಂಗಳಾರತಿಯ ಶುಲ್ಕ ಹೆಚ್ಚಳ !

ಭಕ್ತರು ೫೦೦ ರೂಪಾಯಿ ಪಾವತಿಸಬೇಕು !

ವಾರಾಣಸಿ (ಉತ್ತರಪ್ರದೇಶ) – ಫೆಬ್ರುವರಿ ೨೨ ರಂದು ನಡೆದಿದೆ. ‘ಶ್ರೀ ಕಾಶಿ ವಿಶ್ವನಾಥ ಮಂದಿರ ಟ್ರಸ್ಟ್ ‘ ನ ೧೦೪ ನೇ ಸಭೆಯಲ್ಲಿ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಶ್ರೀ ಕಾಶಿ ವಿಶ್ವನಾಥನ ಮಂಗಳಾರತಿಯ ಶುಲ್ಕ ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಗೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಪ್ರಾ. ನಾಗೇಂದ್ರ ಪಾಂಡೆ, ಮಂಡಲ ಆಯುಕ್ತ ಕೌಶಲ ರಾಜ ಶರ್ಮ, ಸರಕಾರಿ ಅಧಿಕಾರಿ ರಾಜಲಿಂಗಮ ಉಪಸ್ಥಿತರಿದ್ದರು.

ಬೆಳಗ್ಗಿನ ಜಾವ ೩ ರಿಂದ ೪ ರ ಸಮಯದಲ್ಲಿ ನಡೆಯುವ ಮಂಗಳಾರತಿಗಾಗಿ ಈಗ ಭಕ್ತರು ೫೦೦ ರೂಪಾಯಿ ಪಾವತಿಸಬೇಕು. ಹಿಂದೆ ಈ ಶುಲ್ಕ ೩೫೦ ರೂಪಾಯಿ ಅಷ್ಟು ಇತ್ತು. ಇದರ ಜೊತೆಗೆ ಸಪ್ತರ್ಷಿ ಆರತಿ, ಶೃಂಗಾರ ಪ್ರಸಾದ ಆರತಿ ಮತ್ತು ಮಧ್ಯಾಹ್ನ ಪ್ರಸಾದ ಆರತಿಯ ಶುಲ್ಕದಲ್ಲಿ ಕೂಡ ೧೨೦ ರೂಪಾಯಿ ಹೆಚ್ಚಿಸಲಾಗಿದೆ. ಈ ಆರತಿಗಾಗಿ ಈಗ ಒಟ್ಟು ೧೮೦ ರೂಪಾಯಿಯ ಬದಲು ೩೦೦ ರೂಪಾಯಿ ಪಾವತಿಸಬೇಕಿದೆ. ಈ ಶುಲ್ಕ ಹೆಚ್ಚಳವು ಮಾರ್ಚ್ ಒಂದರಿಂದ ಜಾರಿಯಾಗುವುದು. ೫ ವರ್ಷದ ನಂತರ ಈ ಶುಲ್ಕ ಹೆಚ್ಚಳ ಮಾಡಿದ್ದಾರೆ. ಈ ಹಿಂದೆ ೨೦೧೮ ರಲ್ಲಿ ಶುಲ್ಕ ಹೆಚ್ಚಳ ಮಾಡಿದ್ದರು. ವಿಶ್ವಸ್ತ ಮಂಡಳಿಯು, ದೇವಸ್ಥಾನದಲ್ಲಿ ಭಕ್ತರ ಜನದಟ್ಟಣೆ ನೋಡಿ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದೆ.

ರುದ್ರಾಭಿಷೇಕ ಮತ್ತು ಪ್ರಸಾದದ ಶುಲ್ಕದಲ್ಲಿ ಹೆಚ್ಚಳವಿಲ್ಲ !

ದೇವಸ್ಥಾನದ ವಿಶೇಷ ಕಾರ್ಯಕಾರಿ ಅಧಿಕಾರಿ ಸುನಿಲ ಕುಮಾರ ವರ್ಮ ಇವರು, ಕೇವಲ ಆರತಿಯ ಶುಲ್ಕ ಹೆಚ್ಚಿಸಿದೆ, ರುದ್ರಾಭಿಷೇಕ ಮತ್ತು ಪ್ರಸಾದದ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ವರ್ಷ ದೇವಸ್ಥಾನಕ್ಕೆ ಎಂದರೆ ೨೦೨೨ – ೨೩ ರಲ್ಲಿ ೧೦೫ ಕೋಟಿ ರೂಪಾಯ ದಾನ ದೊರೆತಿದೆ. ಇಂದಿನ ಆಯವ್ಯಯ ೪೦ ಕೋಟಿ ರೂಪಾಯಿ ಅಷ್ಟು ಇದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ‘ದೇವರು ಧನದ ಆಧೀನನಲ್ಲ ಭಾವದ ಅಧೀನ ಇರುವನು’,’ಇದು ವ್ಯವಸ್ಥಾಪಕ ಮಂಡಳಿಗೆ ಯಾರು ಹೇಳುವರು ?
  • ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮ ! ಇದರಿಂದ ‘ಸರಕಾರಿ ವ್ಯವಸ್ಥಾಪಕರಿಗೆ ಕೇವಲ ದೇವಸ್ಥಾನದ ಹಣ ಅಷ್ಟೇ ಅಲ್ಲ ಭಕ್ತರ ಹಣದ ಮೇಲೆ ಕೂಡ ಕಣ್ಣಿದೆ, ‘ಹೀಗೆ ಯಾರಿಗಾದರೂ ಅನಿಸಿದರೆ ತಪ್ಪೇನು ಇಲ್ಲ ?