ವಿವಾಹ ಮುಂತಾದ ಕಲ್ಯಾಣ ಕಾರ್ಯಕ್ರಮಗಳಿಗೆ ಸಾಂಪ್ರದಾಯಿಕ ಗೀತೆಗಳು ಪ್ರಸ್ತುತ ಪಡಿಸುತ್ತಾರೆ !
ಸೂರತ (ಗುಜರಾತ) – ಬದಲಾಗುವ ಕಾಲಾನೂಸಾರ ಸಾಂಪ್ರದಾಯಿಕ ಗೀತೆಗಳ ಪರಂಪರೆ ಅಳಿವಿನ ಅಂಚಿನಲ್ಲಿದೆ. ವಿವಾಹ ಅಥವಾ ಇತರ ಯಾವುದೇ ಕಲ್ಯಾಣ ಕಾರ್ಯಕ್ರಮಗಳಲ್ಲಿ ಹಾಡುಗಳು ಹಾಡುತ್ತಾರೆ. ಈ ಪರಂಪರೆ ಮುಂದುವರೆಸಲು ಸೂರತದಲ್ಲಿನ ‘ಸಪ್ತಪದಿ’ ಈ ಸಮೂಹ ಪ್ರಯತ್ನ ಮಾಡುತ್ತಿದೆ. ಓರ್ವ ಮಹಿಳೆಯು ಇದರ ನೇತೃತ್ವ ವಹಿಸಿದ್ದಾರೆ. ಇದರಲ್ಲಿ ೧೦೮ ಕಲಾವಿದರ ಸಮಾವೇಶವಿದೆ. ಇತ್ತೀಚಿಗೆ ಉದ್ಯಮಿ ಮುಕೇಶ ಅಂಬಾನಿ ಇವರ ಪುತ್ರ ಅನಂತ ಇವರ ನಿಶ್ಚಿತಾರ್ಥದ ಸಮಾರಂಭದಲ್ಲಿ ಈ ಸಮೂಹದಿಂದ ಕಾರ್ಯಕ್ರಮ ಪ್ರಸ್ತುತಪಡಿಸಿದರು.
जब देश के धनकुबेर धर्मपरायण होते हैं तो संस्कृति को हर प्रकार से बल मिलता है।
राष्ट्र के व्यापारी वर्ग से घृणा करना सिखाकर लोगों के मन में कुंठा भरना वामी गिरोह का एजेंडा होता है।
सनातनी नारियों को इस सप्तपदी समूह के विषय में अवश्य जानना चाहिए। #Ambani pic.twitter.com/An8QduwFpg
— Prashant Umrao (@ippatel) February 20, 2023
ಸಮೂಹದ ಸಂಸ್ಥಾಪಕೀ ವೈಶಾಲಿ ಗೋಹಿಲ್ ಇವರು, ೮ ವರ್ಷದ ಹಿಂದೆ ೨ ಹುಡುಗಿಯರ ಜೊತೆ ಪ್ರಾರಂಭವಾಗಿರುವ ಈ ಸಮೂಹ ಈಗ ೧೦೦ ಕ್ಕೂ ಹೆಚ್ಚಿನ ಕಲಾವಿದರು ಸೇರಿದ್ದಾರೆ. ಸಂಘದಲ್ಲಿ ೧೪ ಹುಡುಗಿಯರು ಇದ್ದಾರೆ, ೩೬ ಬ್ರಾಹ್ಮಣರು, ೨೬ ತಾಳವಾದ್ಯದವರು, ೧೦ ಸಿತಾರ ವಾದಕರು,೧೦ ವಾಯಲಿನ ವಾದಕರು, ೬ ಶಹನಾಯಿ ವಾದಕರು ಮತ್ತು ಸಂಗೀತಕಾರರ ಮಹತ್ವದ ಸಹಭಾಗಿತ್ವ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿ ಇರುವುದರಿಂದ ನಾವು ಈ ಕಾರ್ಯ ಮಾಡುತ್ತಿದ್ದೇವೆ. ವಿವಾಹದಲ್ಲಿ ಪಾಶ್ಚಾತ್ಯ ಸಂಗೀತ ಇದ್ದರೆ ತೊಂದರೆ ಇಲ್ಲ; ಆದರೆ ಸಾಂಪ್ರದಾಯಿಕ ಹಾಡುಗಳು ಕೂಡ ಇರಬೇಕು. ನಮ್ಮ ಸಂಸ್ಕೃತಿ, ಸಮೃದ್ಧವಾಗಿದೆ, ಪ್ರತಿಯೊಂದು ವಿಧಿಗಾಗಿ ಬೇರೆ ಬೇರೆ ಹಾಡುಗಳು ಇವೆ, ಇದನ್ನು ಗಮನಕ್ಕೆ ತೆಗೆದುಕೊಂಡು ನಾವು ಹಾಡುಗಳನ್ನು ಪ್ರಸ್ತುತಪಡಿಸುತ್ತೇವೆ. ಪ್ರತಿಯೊಂದು ಪ್ರಸಂಗ ಮತ್ತು ಇಚ್ಛೆಯ ಪ್ರಕಾರ ೪೦೦ ಕೂ ಹೆಚ್ಚಿನ ಹಾಡುಗಳು ಇವೆ. ಸಮೂಹದಲ್ಲಿನ ಬ್ರಾಹ್ಮಣರು ವಿವಾಹ ವಿಧಿಯ ಸಮಯದಲ್ಲಿ ಮಂತ್ರೋಚ್ಛಾರಣೆ ಕೂಡ ಮಾಡುತ್ತಾರೆ.