ಶಿವಾಲಯದಲ್ಲಿ ಪೂಜೆ ಮಾಡುತ್ತಿರುವಾಗಿನ ಛಾಯಾಚಿತ್ರದಿಂದ ನಟಿ ಸಾರಾ ಅಲಿ ಖಾನ ಇವರ ಬಗ್ಗೆ ಮುಸಲ್ಮಾನರಿಗೆ ಹೊಟ್ಟೆಯುರಿ !

ಮುಂಬಯಿ – ನಟ ಸೈಫ ಅಲಿ ಖಾನರ ಪುತ್ರಿ ಮತ್ತು ಚಲನಚಿತ್ರ ನಟಿ ಸಾರಾ ಅಲಿ ಖಾನ ಇವರು ಮಹಾಶಿವರಾತ್ರಿಯ ನಿಮಿತ್ತ ಇನ್ ಸ್ಟಾ ಗ್ರಾಂ ಮೇಲೆ ಒಂದು ಪೋಸ್ಟ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು ಒಂದು ಶಿವಾಲಯದಲ್ಲಿ ಪೂಜೆ ಮಾಡುತ್ತಿರುವಂತೆ ಹಾಗೂ ಧ್ಯಾನಮಗ್ನ ಆಗಿರುವ ಛಾಯಾಚಿತ್ರವಾಗಿದ್ದು ಅದರ ಕೆಳಗೆ `ಜೈ ಭೋಲೆನಾಥ’ ಎಂದು ಶೀರ್ಷಿಕೆ ನೀಡಿದ್ದಾರೆ. ಅನೇಕ ಮುಸಲ್ಮಾನರಿಂದ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ.

1. ಒಬ್ಬ ಮುಸಲ್ಮಾನನು, ಇವಳು ಮುಸಲ್ಮಾನಳಾಗಿದ್ದಾಳೆ ಎಂದು ಯಾರು ಹೇಳಿದ್ದಾರೆ ? `ಶಿರ್ಕ’ (ಮೂರ್ತಿಪೂಜೆ) ಮಾಡುವವರನ್ನು ಅಲ್ಲಾ ಕ್ಷಮಿಸುವುದಿಲ್ಲ. ಇವಳು ಹೆಸರಿಗೆ ಮಾತ್ರ ಮುಸಲ್ಮಾನಳಾಗಿದ್ದಾಳೆ ! ಎಂದು ಬರೆದಿದ್ದಾರೆ.

2. ಸಿತಾರಾ ಹೆಸರಿನ ವ್ಯಕ್ತಿಯು, ತನ್ನ ಧರ್ಮವನ್ನು ಒಪ್ಪಿಕೊಳ್ಳದವರು. ಯಾರಿಗಾಗಿ ಇರಬಹುದು ! ಎಂದು ಬರೆದಿದ್ದಾರೆ.

3. ಸಯ್ಯದ ಶಿಫಾ ಹೆಸರಿನ ವ್ಯಕ್ತಿ ಸಾರಾ ಅಲಿ ಖಾನ `ನರಕದಂತಹ ಮಹಿಳೆ’ ಎಂದು ಸಂಬೋಧಿಸಿದ್ದಾನೆ

4. ಅಲಮನ ಅನ್ಸಾರಿ ಹೆಸರಿನ ವ್ಯಕ್ತಿಯು, ನೀನು ಕಾಫಿರ ಆಗಿದ್ದು, ನಿನಗೆ ಮುಸಲ್ಮಾನ ಹೆಸರು ಸರಿಯೆನಿಸುವುದಿಲ್ಲ. ಎಂದು ಹೇಳಿದ್ದಾರೆ.

5. ಫಹಾದ ಹೆಸರಿನ ವ್ಯಕ್ತಿಯು, ಅಲ್ಲಾನನ್ನು ಹೊರತು ಪಡಿಸಿ ಬೇರೆ ಯಾರೂ ಪೂಜಿಸಲು ಯೋಗ್ಯರಲ್ಲ. ಮೂರ್ತಿಪೂಜೆ ಹರಾಮ ಆಗಿದೆ ಮತ್ತು ಹರಾಮ ಆಗಿಯೇ ಇರುವುದು ಎಂದು ಬರೆದಿದ್ದಾರೆ.

ಒಬ್ಬನೇ ಒಬ್ಬ ಮುಸಲ್ಮಾನ ಸಾರಾ ಅಲಿ ಖಾನಳನ್ನು ಶ್ಲಾಘಿಸಿಲ್ಲ ! – ಒಬ್ಬ ಹಿಂದೂವಿನ ಪ್ರತಿಕ್ರಿಯೆ

ಇನ್ನೊಂದೆಡೆ ಶಿವಮ್ ಮಿಶ್ರಾ ಹೆಸರಿನ ಒಬ್ಬ ಹಿಂದೂ, ಒಬ್ಬನೇ ಒಬ್ಬ ಮುಸಲ್ಮಾನ ಸಾರಾ ಅಲಿ ಖಾನಳನ್ನು ಹೊಗಳುವುದಿಲ್ಲ. ಇದರಿಂದ, ಇವರು ಎಲ್ಲರನ್ನೂ ಸಮಾನರೆಂದು ಒಪ್ಪುವುದಿಲ್ಲ. ಅವರು ಇತರೆ ಧರ್ಮದವರನ್ನು `ಕಾಫಿರ್’ ಎಂದು ತಿಳಿಯುತ್ತಾರೆ. ಜಾತ್ಯತೀತತೆಯಂತಹ ಬೇರೆ ಯಾವುದೇ ವಿಷಯವಿಲ್ಲ. ಇವರಿಗೆ(ಮುಸಲ್ಮಾನ) ಯಾರೂ ಶಿಕ್ಷಣ ಕೊಡಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಜಾತ್ಯತೀತತೆಯ ಪಾಠ ಕಲಿಸುವ ಗೀತರಚನೆಗಾರ ಜಾವೇದ ಅಖ್ತರ, ನಟಿ ಶಬಾನಾ ಆಜ್ಮಿಯವರಂತಹ ಮುಸಲ್ಮಾನರು ಇಂತಹ ಪ್ರಕರಣದಲ್ಲಿ ಮಾತ್ರ ಮೌನ ವಹಿಸುತ್ತಾರೆ ಎನ್ನುವುದನ್ನು ಅರಿಯಿರಿ !