‘ಹಿಂದೂಸ್ಥಾನ ಎರೋನಾಟಿಕ್ಸ್ ಲಿಮಿಟೆಡ್’ನ ಯುದ್ಧ ವಿಮಾನದಲ್ಲಿ ಪುನಃ ಹನುಮಂತನ ಚಿತ್ರ ಅಳವಡಿಕೆ !

ಬೆಂಗಳೂರು – ಇಲ್ಲಿ ಆಯೋಜಿಸಿದ ಏಷ್ಯಾದ ಅತೀ ದೊಡ್ಡ ‘ವಾಯುಪಡೆ ಸಂಚಲನ’ದ ಕಾರ್ಯಕ್ರಮದಲ್ಲಿ ‘ಹಿಂದೂಸ್ಥಾನ ಎರೋನಾಟಿಕ್ಸ್ ಲಿಮಿಟೆಡ್’ನ ಅಂದರೆ ‘ಎಚ್‌ಎಎಲ್’ನ ಯುದ್ಧ ವಿಮಾನದ ಮೇಲೆ ಪುನಃ ಶ್ರೀ ಹನುಮಂತನ ಚಿತ್ರವನ್ನು ಹಚ್ಚಿರುವುದು ಕಂಡುಬಂದಿದೆ. ಫೆಬ್ರವರಿ ೧೩ ರಂದು ನಡೆದಿರುವ ಇಂತಹ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಮಾನಗಳಲ್ಲಿ ಶ್ರೀ ಹನುಮಂತನ ಚಿತ್ರವನ್ನು ಹಚ್ಚಲಾಗಿತ್ತು; ಆದರೆ ಕೆಲವರು ಅದಕ್ಕೆ ಆಕ್ಷೇಪವೆತ್ತಿದ ಕಾರಣ ಅದನ್ನು ತೆಗೆಯಲಾಗಿತ್ತು. ಈಗ ಪುನಃ ಅಂಟಿಸಲಾಗಿರುವ ಚಿತ್ರದಲ್ಲಿ ಶ್ರೀ ಹನುಮಂತನ ಕೈಯಲ್ಲಿ ಗದೆಯನ್ನು ಹಿಡಿದು ಹಾರುತ್ತಿರುವ ಚಿತ್ರವನ್ನು ಹಚ್ಚಲಾಗಿದೆ. ಈ ಚಿತ್ರದ ಕೆಳಗೆ ‘ದ ಸ್ಟೋರ್ಮ್ ಈಸ್ ಕಮಿಂಗ್’ (ಬಿರುಗಾಳಿ ಬರುತ್ತಿದೆ) ಎಂದು ಬರೆದಿದೆ.