ಪಂಜಾಬನಲ್ಲಿ ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರೊಂದಿಗೆ ಭಾರತೀಯ ಸೈನಿಕರ ಚಕಮಕಿ

ಹೆರಾಯಿನ ಮತ್ತು ಶಸ್ತ್ರಾಸ್ತ್ರಗಳ ಜಪ್ತಿ

ಗುರದಾಸಪುರ (ಪಂಜಾಬ) – ಇಲ್ಲಿಯ ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿಭದ್ರತಾ ಪಡೆ ಮತ್ತು ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರೊಂದಿಗೆ ಚಕಮಕಿ ನಡೆದಿದೆ. ಕಳ್ಳಸಾಗಾಣಿಕೆದಾರರು ಮಾದಕ ಪದಾರ್ಥ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ ನಡೆಸಲು ಪ್ರಯತ್ನಿಸುತ್ತಿದ್ದರು. ಅವರು ಪೈಪ್ ಮೂಲಕ ಭಾರತದ ಗಡಿಯಲ್ಲಿ ಮಾದಕ ಪದಾರ್ಥಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ತಲುಪಿಸುತ್ತಿದ್ದರು. ಆ ಸಮಯದಲ್ಲಿ ಭಾರತೀಯ ಸೈನಿಕರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಕಳ್ಳ ಸಾಗಾಣಿಕೆದಾರರು ಗುಂಡು ಹಾರಿಸಿದರು. ತದನಂತರ ಇಬ್ಬರಲ್ಲಿ ಚಕಮಕಿ ನಡೆಯಿತು. ಬಳಿಕ ಕಳ್ಳಸಾಗಾಣಿಕೆದಾರರು ಪರಾರಿಯಾದರು. ಸೈನಿಕರು ಸ್ಥಳದಿಂದ ಹೆರಾಯಿನ್ 20 ಪಾಕೀಟು, 242 ಜೀವಂತ ಕಾಟ್ರಿಜಗಳು ಮತ್ತು 2 ಪಿಸ್ತೂಲುಗಳನ್ನು ಜಪ್ತಿ ಮಾಡಿದ್ದಾರೆ.